ಡಾ. ಚನ್ನಬಸವ ಪಟ್ಟದ್ದೇವರ ತತ್ವಾದರ್ಶಗಳು ಎಲ್ಲರಿಗೂ ಮಾದರಿ: ಗೆಹ್ಲಟ್

ಬಸವ ಮೀಡಿಯಾ
ಬಸವ ಮೀಡಿಯಾ

ವಚನ ಜಾತ್ರೆ-2025, ಡಾ.ಚನ್ನಬಸವ ಪಟ್ಟದ್ದೇವರ 26ನೇ ಸ್ಮರಣೋತ್ಸವ ಉದ್ಘಾಟನೆ, ಬಸವ ನಡಿಗೆ, ಪ್ರಶಸ್ತಿ ಪುರಸ್ಕಾರ

ಭಾಲ್ಕಿ

ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಮಂಗಳವಾರ ನಡೆದ ವಚನ ಜಾತ್ರೆ-2025, ಡಾ.ಚನ್ನಬಸವ ಪಟ್ಟದ್ದೇವರ 26ನೇ ಸ್ಮರಣೋತ್ಸವ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್‌ ಚಂದ್ ಗೆಹ್ಲಟ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಲಿಂ. ಡಾ. ಚನ್ನಬಸವ ಪಟ್ಟದ್ದೇವರು ದೀನ, ದಲಿತರ ಉದ್ಧಾರಕ್ಕಾಗಿ ಹಲವಾರು ಕಾರ್ಯಗಳನ್ನು ಮಾಡಿ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ತತ್ವಾದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದರು.

12ನೇ ಶತಮಾನದ ಶಿವಶರಣರು ಸರ್ವರ ಏಳಿಗೆಗಾಗಿ ಪರಿಶ್ರಮಿಸಿದ ಪರಿಣಾಮ ಈ ಭಾಗ ಕಲ್ಯಾಣ ನಾಡು ಅಧ್ಯಾತ್ಮದ ಬೀಡಾಗಿದೆ, ನಾನು ಇಲ್ಲಿಗೆ ಬಂದು ಗದ್ದುಗೆ ದರ್ಶನ ಪಡೆದಿರುವುದರಿಂದ ನನಗೆ ತುಂಬಾ ಖುಷಿಯಾಗಿದೆ, ಎಂದು ಗೆಹ್ಲಟ್ ಪ್ರತಿಪಾದಿಸಿದರು.

ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಚನ್ನಬಸವ ಸ್ವಾಮಿಗಳು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಂಸದ ಸಾಗರ ಖಂಡ್ರೆ ಇತರರಿದ್ದರು.

ಕಾರ್ಯಕ್ರಮದಲ್ಲಿ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಅಥಣಿಯ ಪ್ರಭು ಚನ್ನಬಸವ ಸ್ವಾಮಿಗಳು, ಲೋಕಸಭಾ ಸದಸ್ಯ ಸಾಗರ ಈಶ್ವರ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟಿಲ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ನಾರಂಜಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಡಿ.ಕೆ.ಸಿದ್ರಾಮ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ. ಸಿಇಓ ಡಾ. ಗಿರೀಶ ಬದೋಲೆ, ಎಸ್.ಪಿ. ಪ್ರದೀಪ ಗುಂಟಿ, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಭಾರತೀಯ ಬಸವ ಬಳಗದ ಶಕುಂತಲಾ ಬೆಲ್ದಾಳೆ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕಾರ

ಮೋಟಗಿ ಮಠ ಅಥಣಿಯ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳಿಗೆ ಡಾ. ಚನ್ನಬಸವ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿ, ಲೋಕೋಪಯೋಗಿ ಇಲಾಖೆ ಬೆಂಗಳೂರಿನ ಆಂತರಿಕ ಆರ್ಥಿಕ ಸಲಹೆಗಾರ ಸೋಮನಾಥ ಪಟ್ಟೆಯವರಿಗೆ ಡಾ. ಚನ್ನಬಸವ ಪಟ್ಟದ್ದೇವರ ಸಮಾಜ ಸೇವಾ ಪ್ರಶಸ್ತಿ, ಮೈಸೂರು ವಿ.ವಿ.ಯ ಕುಲಪತಿ ಡಾ. ಶರಣಪ್ಪ ಹಲಸೆಯವರಿಗೆ ಡಾ. ಚನ್ನಬಸವ ಪಟ್ಟದ್ದೇವರ ಶೈಕ್ಷಣಿಕ ಸೇವಾ ಪ್ರಶಸ್ತಿ, ಧಾರವಾಡದ ಹಿಂದೂಸ್ತಾನಿ ಗಾಯಕ ಡಾ. ಮೃತ್ಯುಂಜಯ ಶೆಟ್ಟರರವರಿಗೆ ಸಿದ್ದರಾಮ ಜಂಬಲದಿನ್ನಿ ವಚನ ಸಂಗೀತ ಪ್ರಶಸ್ತಿ, ಪ್ರಕಾಶ ಬಸವರಾಜ ಮುಗಳಿಯವರಿಗೆ ಡಾ. ಜೆ.ಎಚ್‌.ಖಂಡೇರಾವ ಚಿತ್ರಕಲಾ ಪ್ರಶಸ್ತಿ, ಜತ್ತಿ ಫೌಂಡೇಶನ್ ಸಂಸ್ಥಾಪಕ ಧೃವ ಜತ್ತಿಯವರಿಗೆ ಡಾ. ಚನ್ನಬಸವ ಪಟ್ಟದ್ದೇವರ ಯುವ ಪ್ರಶಸ್ತಿ, ಸೋಲಾಪುರದ ಮಲ್ಲಿಕಾರ್ಜುನ ಮೂಲಗೆಯವರಿಗೆ ಬಸವತತ್ವ ಪ್ರಸಾರ ಸೇವಾ ಪ್ರಶಸ್ತಿ, ತಾಳಿಕೋಟೆಯ ಚಂದ್ರಗೌಡ ಕುಲಕರ್ಣಿಯವರಿಗೆ ಡಾ. ಚನ್ನಬಸವ ಪಟ್ಟದ್ದೇವರ ಮಕ್ಕಳ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಸವ ನಡಿಗೆ

ಸಮಾರಂಭದ ಭಾಗವಾಗಿ ಹಿರೇಮಠ ಸಂಸ್ಥಾನದಿಂದ ಹೊರಟ ಬಸವ ನಡಿಗೆ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಪೂಜ್ಯ ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಗಳ ಮೂಲಕ ಸಾಗಿ ಚನ್ನಬಸವಾಶ್ರಮ ತಲುಪಿತು.

ಪೂಜ್ಯ ಮಹಾಲಿಂಗ ಸ್ವಾಮಿಗಳು, ಪೂಜ್ಯ ಬಸವಲಿಂಗ ಸ್ವಾಮಿಗಳು, ಪೂಜ್ಯ ಶಿವಾನಂದ ಸ್ವಾಮಿಗಳು ಬಸವಕಲ್ಯಾಣ, ಪೂಜ್ಯ ಶಂಕರಲಿಂಗ ಸ್ವಾಮಿಗಳು, ಪೂಜ್ಯ ಪ್ರಭುದೇವ ಸ್ವಾಮಿಗಳು, ಪೂಜ್ಯ ಶಿವಬಸವ ಸ್ವಾಮಿಗಳು, ಪೂಜ್ಯ ಬಸವಮುರುಘೇಂದ್ರ ಸ್ವಾಮಿಗಳು, ಪೂಜ್ಯ ಸಂಗನಬಸವ ಸ್ವಾಮಿಗಳು, ಪೂಜ್ಯ ಅನೀಲ ಮಹಾರಾಜರು, ಪೂಜ್ಯ ಸುಗುಣಾದೇವಿ ತಾಯಿ ಮುಂತಾದವರು ಸಮ್ಮುಖ ವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *