ಶಿರೋಳ :
ಬಸವಣ್ಣನವರ ಮಾನವತಾವಾದ, ಯಡೆಯೂರು ಸಿದ್ಧಲಿಂಗೇಶ್ವರರ ಧರ್ಮದರ್ಶನ, ಕುವೆಂಪು ಅವರ ವಿಶ್ವಮಾನವ ಸಂದೇಶಗಳು ಸಮಾಜವನ್ನು ಒಗ್ಗೂಡಿಸಿದಂತೆ, ಶಿರೋಳದ ರೊಟ್ಟಿ ಜಾತ್ರೆಯೂ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಯ ಪ್ರತೀಕವಾಗಿದೆ ಎಂದು ಸಾಹಿತಿ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಹೇಳಿದರು.
ಈಚೆಗೆ ನಡೆದ ಶ್ರೀ ತೋಂಟದಾರ್ಯಮಠದ ರೊಟ್ಟಿ ಜಾತ್ರೆಯಲ್ಲಿ, ಸಾಹಿತಿ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು “ಸಿದ್ಧಲಿಂಗ ಶ್ರೀ”ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪೂಜ್ಯ ತೊಂಟದಾರ್ಯ ಗುರುಗಳು ಸಾಮಾಜಿಕ, ಜನಪರ, ಸಾಹಿತ್ಯಾತ್ಮಕ ಮತ್ತು ವೈಚಾರಿಕ ತಳಹದಿಯ ಬದ್ದತೆಯನ್ನು ಹೊಂದಿದ್ದರು. ಪೂಜ್ಯರು ಹಾಕಿದ ಹಾದಿಯಲ್ಲಿ ನಡೆಯುತ್ತಿರುವ ಶಿರೋಳ ಜಾತ್ರೆಯು ರೊಟ್ಟಿ ಜಾತ್ರೆಯಾಗಿ ಪ್ರಸಿದ್ಧಿ ಪಡೆದು ಕೋಮುಸೌರ್ಹರ್ದತೆ, ಭಾವೈಕ್ಯತೆಗೆ ಇಂಬು ಕೊಟ್ಟಿದೆ ಎಂದರು.
ಶಿರೋಳ ಜಾತ್ರೆಯಲ್ಲಿ ಪ್ರಥಮವಾಗಿ ಪ್ರಧಾನ ಮಾಡಲಾದ “ತೋಂಟದ ಶಿದ್ಧಲಿಂಗ ಶ್ರೀ” ಪ್ರಶಸ್ತಿಯು ನನಗೆ ನೀಡುತ್ತಿರುವುದು ಸಂತಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಗದಗ ತೋಂಟದಾರ್ಯ ಮಠದ ಡಾ: ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪರಿಸರ ವಿಜ್ಞಾನಿ ಪ್ರಕಾಶಗೌಡ ಖ್ಯಾಮನಗೌಡ್ರ ಅವರಿಗೆ ಶಿರೋಳ ಪೂಜ್ಯರ ಹೆಸರಿನಲ್ಲಿ “ಗುರುಬಸವ ಸಿರಿ”ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಹುಬ್ಬಳ್ಳಿಯ ವೀರಯ್ಯ ಶೇಖರಯ್ಯ ನಾಗಲೋಟಿಮಠ, ವಿ.ಕೆ. ಮರೆಗುದ್ದಿ, ನಿಂಗಪ್ಪ ಜಂಗೀನ, ಕೌಶಲ್ಯ ಕರ್ನಾಟಕ ೨೦೨೫ ಪ್ರಶಸ್ತಿ ಪಡೆದ ಜಗದ್ಗುರು ತೋಂಟದಾರ್ಯ ವಿಧ್ಯಾಪೀಠದ ಶ್ರೀ ಮಾದಾರ ಚನ್ನಯ್ಯ ಮತ್ತು ಐಟಿಐ ಕಾಲೇಜಿನ ಸಿಬ್ಬಂದಿ ಪಿ.ಎಚ್.ಡಿ ಪದವಿ ಪುರಸ್ಕೃತ ವೀರಸಂಗಪ್ಪ ಬಸವರಾಜ ಮುದಕವಿ ಇವರುಗಳನ್ನು ಗೌರವಿಸಲಾಯಿತು.
ಜಾತ್ರಾ ಸಮಿತಿ ಅಧ್ಯಕ್ಷ ರವೀಂದ್ರ ಹಿರೇಮಠ, ಎಸ್.ವಿ.ಕುಪ್ಪಸ್ತ, ಉಪಾಧ್ಯಕ್ಷ ದ್ಯಾಮಣ್ಣ ತೆಗ್ಗಿ, ಕಾರ್ಯದರ್ಶಿ ಚಂದ್ರಶೇಖರ ಸೊಬರದ, ಸಹಕಾರ್ಯದರ್ಶಿ ಸತ್ಯವಾನಪ್ಪ ಚಿಕ್ಕನರಗುಂದ, ದ್ಯಾಮಣ್ಣ ಕಾಡಪ್ಪನವರ, ರಮಜಾನಸಾಬ ನಧಾಫ್, ಶರಣಪ್ಪ ಕಾಡಪ್ಪನವರ, ಈರಯ್ಯ ಮಠದ, ಈರಪ್ಪ ಕರಕೀಕಟ್ಟಿ, ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಉಪಸ್ಥಿತರಿದ್ದರು.
