ಹುಬ್ಬಳ್ಳಿ:
ವಿಶ್ವಗುರು ಬಸವಣ್ಣನವರ ಕುರಿತಾದ ‘ಭುವನದ ಭಾಗ್ಯ ಬಸವಣ್ಣ’ ಎಂಬ ‘ದೊಡ್ಡಾಟ’ ಪ್ರದರ್ಶನ ಇಂದು ಶುಕ್ರವಾರ ಸಂಜೆ 6.30ಕ್ಕೆ ನಗರದ ಗೋಕುಲ ರಸ್ತೆ, ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ.
ಜನಪದ ಕಲಾ ಬಳಗ ಟ್ರಸ್ಟ್ ಹುಬ್ಬಳ್ಳಿ ಇವರು ಪ್ರಸ್ತುತ ಪಡಿಸುವರು. ಬಸವ ಕೇಂದ್ರದ ಆಶ್ರಯದಲ್ಲಿ ಈ ದೊಡ್ಡಾಟ ನಡೆಯುವುದು.
ದೊಡ್ಡಾಟದ ಕಥೆ ಮತ್ತು ನಿರ್ದೇಶನ ರಮೇಶ ಕರಬಸಮ್ಮನವರ ಅವರದಾಗಿದೆ. ಚಂದ್ರಶೇಖರಯ್ಯ ಗುರಯ್ಯನವರ, ಸುರೇಂದ್ರ ಹುಲ್ಲಂಬಿ ಭಾಗವತರಾಗಿದ್ದಾರೆ. ವೀರಭದ್ರಯ್ಯ ಗುರಯ್ಯನವರ ಮದ್ದಲಿ ಬಾರಿಸಲಿದ್ದು, ಚನ್ನಪ್ಪ ಮೇಟಿ ಹಾರ್ಮೋನಿಯಂ, ಶಹನಾಯಿ ವಾದನ ರಮೇಶ ಭಜಂತ್ರಿ ಅವರದಾಗಿರುತ್ತದೆ.

