ಬೀದರ್
ಲಿಂಗಾಯತ ಮಠಾಧೀಶರುಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಬೀದರ ಹಾಗೂ ನಾಡಿನ ಸಮಸ್ತ ಲಿಂಗಾಯತ ಸಂಘಟನೆಗಳ ಸಹಭಾಗಿತ್ವದ ‘ಬಸವ ಸಂಸ್ಕೃತಿ ಅಭಿಯಾನ’ ಉದ್ಘಾಟನಾ ಸಮಾರಂಭ ಬಿ.ವಿ. ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ವಿಜೃಂಭಣೆಯ ಚಾಲನೆಯ ಮುಖಾಂತರ ಆರಂಭಗೊಂಡಿತು.
ಬಸವ ಸಂಸ್ಕೃತಿ ಆಕೃತಿ ಮೇಲೆ ಇರಿಸಲಾದ 270-300 ಮೇಣದ ಬತ್ತಿ ಬೆಳಗಿಸಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಅರ್ಥ ಪೂರ್ಣ ಚಾಲನೆ ನೀಡಲಾಯಿತು. ವೇದಿಕೆ ಮೇಲಿದ್ದ ಎಲ್ಲ ಮಠಾಧೀಶರು, ಸಚಿವ ರಹೀಂ ಖಾನ್, ಗಣ್ಯರು ಒಂದೊಂದು ಮೇಣದ ಬತ್ತಿ ಬೆಳಗಿಸಿ ಸಮಾವೇಶ ಉದ್ಘಾಟನೆ ಮಾಡಿದರು.

ಅಭಿಯಾನ ಸಮಿತಿ ಅಧ್ಯಕ್ಷರಾದ ಬಸವರಾಜ ಧನ್ನೂರ ಅವರು ಪ್ರಸ್ತಾವಿಕವಾಗಿ ಮಾತನಾಡಿ, ದೇವನೊಬ್ಬ ನಾಮ ಹಲವು ಎನ್ನುವುದು, ಮಾನವೀಯತೆ ಸಾರುವ ಸಂಸ್ಕೃತಿ ಬಸವ ಸಂಸ್ಕೃತಿಯಾಗಿದೆ. ಇಂತಹ ಸಂಸ್ಕೃತಿಯನ್ನು ದೇಶದ ಉದ್ದಗಲಕ್ಕೂ ಸಾರುವುದು, ಪಸರಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಹಿಳೆಯರು ಹಾಗೂ ಪುರುಷರು ಸಾಂಪ್ರದಾಯಿಕ ಉಡುಗೆ ತೊಟ್ಟು, ಹಣೆ ಮೇಲೆ ವಿಭೂತಿ ಹಚ್ಚಿಕೊಂಡು, ಕೊರಳಲ್ಲಿ ರುದ್ರಾಕ್ಷಿ ಧರಿಸಿ, ತಲೆ ಮೇಲೆ ವಚನಗ್ರಂಥ ಹೊತ್ತು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ, ಈ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿರುವುದು ಬಹಳ ಖುಷಿಯ ಸಂಗತಿ.
ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಮಾಡುವಂತೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತ್ಯೋತ್ಸವ ಆಚರಿಸುವಂತೆ ಕರ್ನಾಟಕ ಸರಕಾರಕ್ಕೆ ಮನವಿಪೂರ್ವಕವಾಗಿ ಆಗ್ರಹ ಮಾಡಿದರು.
ಅದ್ಭುತವಾhogtapur ದ ಕಾರ್ಯಕ್ರಮ 🍀☘️🧚♀️💐👌