ಬೆಂಗಳೂರು
ಶನಿವಾರ ನಗರ ಪ್ರವೇಶಿಸಲಿರುವ ಬಸವ ಸಂಸ್ಕೃತಿ ಅಭಿಯಾನದ ಬಸವ ರಥದ ಮೆರವಣಿಗೆಯ ಜೊತೆ ಬೃಹತ್ ಬೈಕ್ ರ‍್ಯಾಲಿ ನಡೆಯಲಿದೆ.
ಮುಂಜಾನೆ 8 ಗಂಟೆಗೆ ತುಮಕೂರು ರಸ್ತೆಯಿಂದ ಬೆಂಗಳೂರು ನಗರವನ್ನು ಬಸವ ರಥ ಪ್ರವೇಶ ಮಾಡಲಿದೆ.
ಶಿವಕುಮಾರ ಸ್ವಾಮೀಜಿ ಫ್ಲೈ ಓವರ್, ಕೆನ್ನಾ ಮೆಟಲ್ ಕಾರ್ಖಾನೆ ಮುಂದೆ ಬೈಕ್ ರ‍್ಯಾಲಿ 8.30ಕ್ಕೆ ಆರಂಭಗೊಂಡು ರಥದ ಜೊತೆ ಸಾಗುವುದು.
ಅಲ್ಲಿಂದ ಎಂಟನೇ ಮೈಲಿ, ಜಾಲಹಳ್ಳಿ ಕ್ರಾಸ್ ಮೂಲಕ ಯಶವಂತಪುರ ತಲುಪಲಿದೆ. ಯಶವಂತಪುರ ಸೋಪ್ ಫ್ಯಾಕ್ಟರಿ ಹತ್ತಿರ ಮಂಜುನಾಥ ಅವರ ನೇತೃತ್ವದಲ್ಲಿ ಬಸವಭಕ್ತರು ರಥವನ್ನು ಸ್ವಾಗತ ಮಾಡಿಕೊಳ್ಳುತ್ತಾರೆ.
ನಂತರ ರಾಜಾಜಿನಗರಕ್ಕೆ ಬರುವ ರಥವನ್ನು ಬಸವ ಮಂಟಪದ ಬಸವ ಪುತ್ಥಳಿ ಹತ್ತಿರ ಬಸವಧರ್ಮ ಪೀಠದ ಡಾ. ಗಂಗಾ ಮಾತಾಜಿ ನೇತೃತ್ವದಲ್ಲಿ ಅನೇಕ ಪೂಜ್ಯರು, ಬಸವಭಕ್ತರು ಸ್ವಾಗತ ಮಾಡಿಕೊಳ್ಳಲಿದ್ದಾರೆ.
ಅಲ್ಲಿಂದ ಬಸವೇಶ್ವರ ನಗರ, ಹಾವನೂರು ವೃತ್ತ ತಲುಪುವ ರಥವನ್ನು ಬಸವ ಪ್ರಚಾರ ಸಮಿತಿಯ ಸದಸ್ಯರು ಸ್ವಾಗತ ಮಾಡಿಕೊಳ್ಳಲಿದ್ದಾರೆ.
ಮುಂದೆ ವಿಜಯನಗರದಲ್ಲಿ ವಚನ ಜ್ಯೋತಿ ಬಳಗದ ಪಿನಾಕಪಾಣಿ, ರಾಷ್ಟ್ರೀಯ ಬಸವ ತತ್ವ ಪರಿಷತ್ತಿನ ಅರುಣಕುಮಾರ ಮತ್ತು ರಾಷ್ಟ್ರೀಯ ಬಸವದಳದ ಸದಸ್ಯರು ರಥ ಸ್ವಾಗತ ಮಾಡಲಿದ್ದಾರೆ.
ಅಲ್ಲಿಂದ ಚಾಮರಾಜಪೇಟೆಯ ಮುಖಾಂತರ ನಿಜಗುಣ ಮಠ ತಲುಪುವ ರಥಕ್ಕೆ ಮಠದ ವತಿಯಿಂದ ಸ್ವಾಗತ ನಡೆಯಲಿದೆ.
ನಿಜಗುಣ ಮಠದಿಂದ ಹೊರಡುವ ರಥವನ್ನು ಜಯನಗರದ ಬಸವ ಪುತ್ಥಳಿ ಹತ್ತಿರ ಮಾಜಿ ಮೇಯರ್ ಗಂಗಾಂಬಿಕಾತಾಯಿ, ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಬಸವ ಬಳಗದಿಂದ ಸ್ವಾಗತ ನಡೆಯಲಿದೆ.
ಜಯನಗರದಿಂದ ಸೀದಾ ಚಾಲುಕ್ಯ ವೃತ್ತ ತಲುಪಲಿದೆ. ಅಲ್ಲಿ ಬಸವ ಸಮಿತಿಯ ಡಾ. ಅರವಿಂದ ಜತ್ತಿ ಅವರು ಸ್ವಾಗತಿಸಿಕೊಳ್ಳುತ್ತಾರೆ. ಅಲ್ಲಿಯೇ ಬೈಕ್ ರ‍್ಯಾಲಿ ಮುಕ್ತಾಯಗೊಳ್ಳಲಿದೆ.
ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಸಾಮೂಹಿಕ ಸಹಭಾಗಿತ್ವದಲ್ಲಿ ಈ ಬೈಕ್ ರ‍್ಯಾಲಿ ನಡೆಯಲಿದೆ.
ರ್‍ಯಾಲಿಯಲ್ಲಿ 250 ರಿಂದ 300 ಬೈಕುಗಳು ಭಾಗವಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಈಗಾಗಲೇ ಭಾಗವಹಿಸುವವರ ನೋಂದಣೆ ಆರಂಭಗೊಂಡಿದ್ದು, 100 ಜನ ನೋಂದಾಯಿಸಿಕೊಂಡಿದ್ದಾರೆ.
ಬೈಕ್ ರ‍್ಯಾಲಿಯಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಆಸಕ್ತ ಬಸವಭಕ್ತರು ಕೂಡಲೇ ನೋಂದಾಯಿಸಲು ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಎನ್. ಚಂದ್ರಮೌಳಿ 9343565658, ಟಿ.ಎಂ. ಚಂದ್ರಶೇಖರ್ 9945585595, ಪ್ರೊ. ವೀರಭದ್ರಯ್ಯ 9448119652 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ರ‍್ಯಾಲಿಯಲ್ಲಿ ನೋಂದಾಯಿಸಲು ಫಾರಂ
https://forms.gle/2gFBcLw8YZmwP1gr8
ಯಶಸ್ವಿಯಾಗಲಿ
ಎಲ್ಲರಿಗೂ ಶುಭವಾಗಲಿ
ಬಸವಸಂಸ್ಕೃತಿ ನಾಡಿನ ಜನಮಾನಸದಲ್ಲಿ ನೆಲೆ ನಿಲ್ಲಬೇಕು. ಈ ಸಂಸ್ಕೃತಿ ಹೆಮ್ಮರವಾಗಿ ಬೆಳೆಯಬೇಕು.
ಬೈಕ್ ರ‍್ಯಾಲಿ ಯಶಸ್ವಿಯಾಗಲಿ
ಬೈಕ್ ರಾಲಿಯಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಜೈ ಬಸವೇಶ್ವರ
ಅತ್ಯದ್ಭುತ ಶಿಸ್ತುಬದ್ಧ ವ್ಯವಸ್ಥೆಗಳನ್ನು ನೋಡಿದರೆ ಅಭೂತಪೂರ್ವ ರೀತಿಯಲ್ಲಿ “ಬಸವ ಸಂಸ್ಕೃತಿ ಅಭಿಯಾನ” ಯಶಸ್ವಿಯಾಗುವುದು. ಲಿಂಗಾಯತರಿಗೆ ಇದೊಂದು ದೊಡ್ಡ ಹಬ್ಬ ಮತ್ತು ಸಂಭ್ರಮ. ಇವೆಲ್ಲಾ ನಿಶ್ಚಿತವಾಗಿ ಮುಂಬರುವ ದಿನಗಳಲ್ಲಿ ಬಸವ ತತ್ವಕ್ಕೆಉತ್ತಮ ಭವಿಷ್ಯದ ಸಂಕೇತವಾಗಿವೆ. ಶರಣು ಶರಣಾರ್ಥಿಗಳು