ಹಿಂದೂ ಹುಲಿ ಎಂದು ಕರೆದುಕೊಂಡು ಸಂಘ ಪರಿವಾರದ ಕಟ್ಟಾಳುವಾಗಿ ದುಡಿಯುತ್ತಿದ್ದ ಯತ್ನಾಳರು ಹರಕೆಯ ಕುರಿಯಾಗುವರೆಂಬ ಎಚ್ಚರಿಕೆಯನ್ನು ಹಲವರು ನೀಡಿದ್ದರೂ ಅವರು ಲೆಕ್ಕಿಸಿರಲಿಲ್ಲ.
ನವ ದೆಹಲಿ
ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ರವಿವಾರ ಶೋಕಾಸ್ ನೊಟೀಸ್ ಜಾರಿಗೊಳಿಸಿದೆ.
ಬಿಜೆಪಿ ಕೇಂದ್ರ ಶಿಸ್ತು ಪಾಲನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಸಹಿ ಮಾಡಿರುವ ನೋಟೀಸಿನಲ್ಲಿ “ಬಿಜೆಪಿ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಾ ಮತ್ತೆ ಮತ್ತೆ ಹೇಳಿಕೆ ನೀಡಿ ಪಕ್ಷದ ಘನತೆಗೆ ಕುಂದು ತರಲಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನೀಡಲಾಗುತ್ತಿರುವ ಶೋ ಕಾಸ್ ನೊಟೀಸ್‌ಗೆ ಹತ್ತು ದಿನಗಳ ಒಳಗೆ ವಿವರಣೆ ನೀಡಬೇಕು,” ಎಂದು ಸೂಚಿಸಲಾಗಿದೆ.
ವಿವರಣೆ ನೀಡಲು ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದು ಅಂತಿಮ ಸೂಚನೆ ಎಂದೂ ನೊಟೀಸ್‌ನಲ್ಲಿ ತಿಳಿಸಲಾಗಿದೆ.
ವಿಜಯೇಂದ್ರ ನಾಯಕತ್ವವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಹೇಳಿರುವ ಬಸನಗೌಡ ಪಾಟೀಲ ಯತ್ನಾಳ ಅವರು ವಕ್ಫ್ ವಿವಾದದ ಮೇಲೆ ಪ್ರತ್ಯೇಕ ಹೋರಾಟವನ್ನು ನಡೆಸುತ್ತಿದ್ದಾರೆ.
ಈ ಮುಂಚೆ ಹಲವಾರು ಬಾರಿ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಬಹಿರಂಗವಾಗಿ ಹೀಯಾಳಿಸುತ್ತಾ ಪಕ್ಷಕ್ಕೆ ಮುಜುಗರ ತಂದಿದ್ದರೂ, ಆರೆಸೆಸ್ ನಾಯಕ ಬಿ ಎಲ್ ಸಂತೋಷ್ ಅವರ ಒತ್ತಾಸೆಯಿದ್ದ ಕಾರಣಕ್ಕೆ ಬಿಜೆಪಿ ಯತ್ನಾಳರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಮಾತಿತ್ತು.
ಆದರೆ ಕಳೆದ ಸೋಮವಾರ ಬೀದರಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೇಲೆ ಯತ್ನಾಳರು ವಿವಾದಿತ ಭಾಷಣ ಮಾಡಿದ ಮೇಲೆ ಅವರ ವಿರುದ್ಧ ರಾಜ್ಯದಲ್ಲಿ ಬಿಜೆಪಿಯ ಬೆನ್ನೆಲುಬಾಗಿರುವ ಲಿಂಗಾಯತ ಸಮುದಾಯ ಅವರ ತಿರುಗಿ ಬಿದ್ದಿತ್ತು.
ನೆನ್ನೆಯಿಂದ ಕಾಂಗ್ರೆಸ್ ಪಕ್ಷವೂ ಲಿಂಗಾಯತ ಸಮುದಾಯದ ಆಕ್ರೋಶದ ಲಾಭ ಪಡೆಯಲು ಮುಂದಾದ ಮೇಲೆ ಬಿಜೆಪಿ ಯತ್ನಾಳರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ ಪಟ್ಟಿದ್ದಾರೆ.
ಹಿಂದೂ ಹುಲಿ ಎಂದು ಕರೆದುಕೊಂಡು ಸಂಘ ಪರಿವಾರದ ಕಟ್ಟಾಳುವಾಗಿ ದುಡಿಯುತ್ತಿದ್ದ ಯತ್ನಾಳರು ಹರಕೆಯ ಕುರಿಯಾಗುವರೆಂಬ ಎಚ್ಚರಿಕೆಯನ್ನು ಹಲವರು ನೀಡಿದ್ದರೂ ಅವರು ಲೆಕ್ಕಿಸಿರಲಿಲ್ಲ.
ಬಸವಣ್ಣನವರ ಮೇಲೆ ಹಗುರವಾಗಿ ಮಾತನಾಡಿದ್ದಕೆ ಕ್ಷಮೆ ಕೇಳಲು ಅನೇಕ ಬಸವ ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಶನಿವಾರ ತಮ್ಮ ಹೇಳಿಕೆಗೆ ವಿಷಾದ ಇಲ್ಲ, ಕ್ಷಮೆ ಕೇಳಲ್ಲ, ಅಂಜೋ ಮಗ ಅಲ್ಲ, ನಾನೇ ಬಸವಣ್ಣ ಎಂದು ಯತ್ನಾಳ್ ಸಮರ್ಥಿಕೊಂಡಿದ್ದರು.


use and throw
ಯತ್ನಾಳರ ಕಥೆ ಮುಗಿದಂತೆಯೇ? ಇನ್ನು ಲಿಂಗಾಯತರು ಎಚ್ಚರದಿಂದ ಇರಬೇಕು. ಇಂತಹ ಹೇಳಿಕೆ ಯಾರೇ ಕೊಟ್ಟರು ಗಣಾಚಾರದ ಮೂಲಕ ಪ್ರತಿಭಟಿಸಬೇಕು.
ಆದರೂ ಬಿ ಜೆ ಪಿ ಯದು ಇಬ್ಬಗೆಯ ನೀತಿ ಶೋಕಾಸ ನೋಟಿಸಲ್ಲಿ ವಿಶ್ವ ಗುರು ಬಸವಣ್ಣನವರನ್ನು ಅವಮಾನಿಸಿದ ಕಾರಣವನ್ನು ನಮೂದಿಸಿಲ್ಲ ಮೋದಿ ಕನಾ೯ಟಕಕ್ಕೆ ಬಂದಾಗ ಬಸವಣ್ಣನವರ ಬಗ್ಗೆ ಪುಂಕಾನು ಪುಂಕವಾಗಿ ಮಾತನಾಡುವದು ತನ್ನ ಮತ್ತು ಪಕ್ಷದ ಹಿತಕ್ಕಾಗಿ ಎಂಬುದನ್ನು ಲಿಂಗಾಯತರು ಅರಿಯಬೇಕು.
ಬಹಿರಂಗವಾಗಿ ಗುರು ಬಸವಣ್ಣನವರನ್ನು ಯತ್ನಾಳ್
ಅಪಮಾನಕರ ರೀತಿಯಲ್ಲಿ ಮಾತನಾಡಿದ್ದರು
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಲಿ, ಎಡೆಯೂರಪ್ಪ
ಆಗಲಿ, ಯಾವುದೇ ಬಿಜೆಪಿ ನಾಯಕರು ಯತ್ನಾಳ್ ನನ್ನು
ವಿರೋಧಿಸಿಲ್ಲ ಬಿಜೆಪಿಯ ಲಿಂಗಾಯತ ರಾಜಕಾರಣಿಗಳು
ತಮ್ಮ ಧರ್ಮಗುರು ಬಸವಣ್ಣನವರ ಬಗ್ಗೆ ವಿರೋಧ
ಮಾತನಾಡಿದ ಯತ್ನಳ್ ಗೆ ವಿರೋಧ ಮಾಡಲಾಗದಷ್ಟು
ಅತಂತ್ರ, ಮನು ಸಿದ್ದಾಂತ ಪಕ್ಷದ ಗುಲಾಮರಾಗಿ ದ್ದಾರೆ
ಲಿಂಗಾಯತ ಕೋಟಾದಲ್ಲಿ ಟಿಕೇಟ್ ಪಡೆದು ಲಿಂಗಾಯತರ
ಬಗ್ಗೆ, ಲಿಂಗಾಯತ ಧರ್ಮದ ಬಗ್ಗೆ ಮಾತನಾಡಿದ ಇಂಥ
ರಾಜಕಾರಣಿಗಳಿಗೆ ರಾಜಕೀಯ ಬಹಿಷ್ಕಾರ ಅನಿವಾರ್ಯ