ಜಾತಿ ಗಣತಿ ವರದಿ ಸಂಪುಟದಲ್ಲಿ ಮಂಡನೆ; ಲಿಂಗಾಯತರ ಅಧಿಕೃತ ಸಂಖ್ಯೆ ’65 ಲಕ್ಷ’

ಬಸವ ಮೀಡಿಯಾ
ಬಸವ ಮೀಡಿಯಾ

ಪರಿಶಿಷ್ಟ ಜಾತಿ (1.08 ಕೋಟಿ); ಮುಸ್ಲಿಂ (70 ಲಕ್ಷ); ಲಿಂಗಾಯತರು (65 ಲಕ್ಷ); ಒಕ್ಕಲಿಗರು (60 ಲಕ್ಷ); ಕುರುಬರು (45 ಲಕ್ಷ)

ಬೆಂಗಳೂರು

ತೀವ್ರ ವಿವಾದಕ್ಕೆ ಗುರಿಯಾಗಿರುವ ಜಾತಿ ಗಣತಿ ವರದಿ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಮಂಡನೆಯಾಗಿದೆ. ಮುಂದಿನ ಗುರುವಾರ (ಏಪ್ರಿಲ್ 17) ವರದಿ ಬಗ್ಗೆ ಸಮಗ್ರ ಚರ್ಚೆ ನಡೆಸಿ ನಿರ್ಧಾರಕ್ಕೆ ಬರಲು ಸಂಪುಟ ನಿರ್ಣಯಿಸಿತು.

ಜಾತಿವಾರು ಜನಸಂಖ್ಯೆ ಆಧರಿಸಿ ನಾನಾ ಯೋಜನೆ, ಕಾರ್ಯಕ್ರಮಗಳನ್ನು ಜಾರಿ ಮಾಡುವ ಉದ್ದೇಶದಿಂದ ದಶಕದ ಹಿಂದೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (2015) ಸಿದ್ದಪಡಿಸಲಾಗಿತ್ತು.

ಕಳೆದ ವರ್ಷದ ಫೆಬ್ರವರಿ 29 ರಂದು ಸರಕಾರಕ್ಕೆ ಸಲ್ಲಿಕೆಯಾಗಿದ್ದ ಒಟ್ಟು 50 ಸಂಪುಟಗಳ ವರದಿ ಸಂಪುಟ ಸಭೆಯಲ್ಲಿ ಮೊದಲ ಬಾರಿಗೆ ಮಂಡನೆಯಾಯಿತು.

ಅವೈಜ್ಞಾನಿಕ ಮತ್ತು ಅವಾಸ್ತವಿಕ ಎಂದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ವಿರೋಧಿಸಿರುವ ಜಾತಿ ಗಣತಿ ಸಂಪುಟದಲ್ಲಿ ಮಂಡನೆಯಾಗಿರುವುದರಿಂದ ಜಾತಿ ಸಂಖ್ಯಾ ವಿವರ ಅಧಿಕೃತವಾಗಿ ಬಹಿರಂಗವಾಗಿದೆ.

ಜಾತಿ ಗಣತಿ ವರದಿಯಂತೆ ನಾನಾ ಸಮುದಾಯಗಳ ಜನಸಂಖ್ಯೆ

ಪರಿಶಿಷ್ಟ ಜಾತಿ (ಎಸ್‌ಸಿ ) – 1.08 ಕೋಟಿ
ಮುಸ್ಲಿಂ – 70 ಲಕ್ಷ
ಲಿಂಗಾಯತರು – 65 ಲಕ್ಷ
ಒಕ್ಕಲಿಗರು – 60 ಲಕ್ಷ
ಕುರುಬರು – 45 ಲಕ್ಷ
ಈಡಿಗರು – 15 ಲಕ್ಷ
ಪರಿಶಿಷ್ಟ ಪಂಗಡ -40.45 ಲಕ್ಷ
ವಿಶ್ವಕರ್ಮ -15 ಲಕ್ಷ
ಬೆಸ್ತರು -15 ಲಕ್ಷ
ಬ್ರಾಹ್ಮಣ – 14 ಲಕ್ಷ
ಗೊಲ್ಲ- 10 ಲಕ್ಷ
ಮಡಿವಾಳ – 6 ಲಕ್ಷ
ಕುಂಬಾರ – 5 ಲಕ್ಷ
ಸವಿತಾ ಸಮಾಜ – 5 ಲಕ್ಷ

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಜಾತಿ ಗಣತಿ ವರದಿ ಅಂಗೀಕಾರ ಹಾಗೂ ಅನುಸರಣಾ ಕ್ರಮಕ್ಕೆ ಎಐಸಿಸಿ ಹೈಕಮಾಂಡ್‌ ಸೂಚನೆ ನೀಡಿದೆ,’ ಎಂದು ಹೇಳಿದರು.

Share This Article
3 Comments

Leave a Reply

Your email address will not be published. Required fields are marked *