ಅನುಭಾವಿಗಳಾದ ಪಿ. ರುದ್ರಪ್ಪ, ಎಂ.ಎಂ. ಸಂಗೊಳ್ಳಿ, ಎಂ.ಎಂ. ಮಡಿವಾಳರ, ಎಸ್.ಎನ್. ಅರಭಾವಿ, ರೇಣುಕಯ್ಯ, ಕಾಳನಹುಂಡಿ ವಿರೂಪಾಕ್ಷ, ಸಿದ್ದಲಿಂಗ ನಾಶಿ ಕಮ್ಮಟ ನಡೆಸಿಕೊಟ್ಟರು.
ಚಾಮರಾಜನಗರ
ನಗರದಲ್ಲಿ ಎರಡು ದಿನಗಳ ಲಿಂಗಾಯತ ಧರ್ಮದ ವಚನಾಧಾರಿತ ನಿಜಾಚರಣೆ ಕಮ್ಮಟ ಡಿಸೆಂಬರ್ 14 ಹಾಗೂ 15ರಂದು ಯಶಸ್ವಿಯಾಗಿ ನಡೆಯಿತು.
ಶಿವಕುಮಾರಸ್ವಾಮಿ ಭವನದಲ್ಲಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಆಯೋಜಿಸಿದ್ದ ಕಮ್ಮಟದಲ್ಲಿ 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಪೂಜ್ಯ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು ಸಾನಿಧ್ಯ, ಸಿದ್ದಮಲ್ಲೇಶ್ವರ ಮಠದ ಪೂಜ್ಯ ಚನ್ನಬಸವಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಶ್ರೀಕಂಠಸ್ವಾಮಿಗಳವರು ಮುಡಿಗುಂಡ ಕಾರ್ಯಕ್ರಮ ಉದ್ಘಾಟಿಸಿದರು.

ಅನುಭಾವಿಗಳಾದ ಪಿ. ರುದ್ರಪ್ಪ, ಎಂ.ಎಂ. ಸಂಗೊಳ್ಳಿ, ಎಂ.ಎಂ. ಮಡಿವಾಳರ, ಎಸ್.ಎನ್. ಅರಭಾವಿ, ರೇಣುಕಯ್ಯ, ಕಾಳನಹುಂಡಿ ವಿರೂಪಾಕ್ಷ ಹಾಗೂ ಸಿದ್ದಲಿಂಗ ನಾಶಿ ಇವರುಗಳಿಂದ ಕಮ್ಮಟದ ಅನುಭಾವ, ಪ್ರಾತ್ಯಕ್ಷಿಕೆಗಳು ನಡೆದವು.
ಶರಣರ ದೃಷ್ಟಿಯಲ್ಲಿ ದೇವರ ಸ್ವರೂಪ, ಆರಾಧನಾಮಾರ್ಗ, ಅಷ್ಟಾವರಣ, ಸಂಸ್ಕಾರದ ವಚನಗಳು, ಗುರುಪ್ರವೇಶ, ಗರ್ಭ ಸಂಸ್ಕಾರ, ನಾಮಕರಣ, ಶಂಕುಸ್ಥಾಪನೆ, ಲಿಂಗಧಾರಣದ ಕ್ರಮಗಳು, ಕಲ್ಯಾಣ ಮಹೋತ್ಸವ, ಅಂತ್ಯ ಸಂಸ್ಕಾರ ಮತ್ತು ಸ್ಮರಣೋತ್ಸವ ಮತ್ತು ಇತರ ಆಚರಣೆಗಳನ್ನು ಪರಿಚಯ ಮಾಡಿಕೊಟ್ಟರು.
ಲಿಂಗಾಯತ ಧರ್ಮದ ಸ್ವರೂಪ, ಇತಿಹಾಸ ಹಾಗೂ ಧರ್ಮ ಪ್ರಚಾರದ ಮಹತ್ವ, ಮಾರ್ಗೋಪಾಯಗಳ ಮೇಲೆ ಸಾಮೂಹಿಕ ಚಿಂತನೆ ನಡೆದವು.
ಲಿಂಗಾಯತ ದಿನದರ್ಶಿಕೆಯನ್ನು ಮೂಡುಗೂರಿನ ಪೂಜ್ಯ ಉದ್ದಾನಸ್ವಾಮಿಗಳವರು ಬಿಡುಗಡೆ ಮಾಡಿದರು. ಪ್ರಾಸ್ತಾವಿಕ ನುಡಿಗಳನ್ನು ಶರಣ ಬಿ. ಗುರುಸ್ವಾಮಿ ಅವರು ಆಡಿದರು. ಪೂಜ್ಯ ಶಿವಬಸವಸ್ವಾಮಿಗಳು, ಬಸವಾನುಭವ ಮಂಟಪ, ಮೇಲಾಜಿಪುರ, ಆರ್. ವಿರೂಪಾಕ್ಷರವರು, ನಂದೀಶ್ವರಸ್ವಾಮಿ, ಶೈಲೇಂದ್ರ ವಿ. ಚಂದಕವಾಡಿ ಉಪಸ್ಥಿತರಿದ್ದರು.

ವಿಜಯಕುಮಾರ ಹೆಗ್ಗೋಠಾರ, ಎನ್. ಶಿವಪ್ರಸಾದ, ಗುರುಸ್ವಾಮಿ ಎಂ.ಎಂ, ಕೆಂಪುನೂರು ಮಹಾದೇವಸ್ವಾಮಿ, ಗೌಡಿಕೆ ನಾಗೇಶ, ಎನ್.ಜಿ. ಮಾದಪ್ಪ, ಗುರುಸಿದ್ದಪ್ಪ, ಪ್ರಭುಸ್ವಾಮಿ ಇವರುಗಳು ಉಪಸ್ಥಿತರಿದ್ದರು.


ಬಸವ ತತ್ವಗಳನ್ನು ಅನುಸರಿಸಿ ಎಂಬುದಾಗಿ ಲಿಂಗಾಯತರಿಗೆ ಕೋರಿಕೊಳ್ಳಬೇಕಾಗಿ ಬಂದಿರುವುದು ನೋವಿನ ಸಂಗತಿ.. ಪವಾಡ ಎಂದು ಸುಳ್ಳು ಹೇಳುವವರನ್ನು ನಂಬುವ ನಮ್ಮ ಜನ ಬಸವಣ್ಣನ ಕಾಯಕ ತತ್ವವನ್ನು ನಂಬುವುದಿಲ್ಲ..!?
ವಿಜ್ಞಾನ ಕೊಟ್ಟಿರುವ MOBILE ಮುಂದೆ ಯಾವ ಪವಾಡ??
ಇದರಲ್ಲಿ ಜನರ ತಪ್ಪು ಇಲ್ಲ. ಧರ್ಮದ ದಾರಿ,ಆಚರಣೆಗಳನ್ನು ಬದಲಾಯಿಸಿದ ಧರ್ಮಪಾಲಕರ ತಪ್ಪು.