ಕಲಬುರಗಿ: ಚಂದಾ ಎತ್ತದೆ, ಡಿಜೆ ಬಳಸದೆ ಬಸವ ಜಯಂತಿ ಆಚರಿಸಲು ನಿರ್ಧಾರ

ಕಲಬುರಗಿ:

ಎಲ್ಲ ಶರಣರು ಸೇರಿ ಕಟ್ಟಿರುವ ಬಸವ ಧರ್ಮದಲ್ಲಿ ಎಲ್ಲರನ್ನು ತೆಗೆದುಕೊಂಡು ಹೋಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಬಸವ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹಿರಂಗ ಸಭೆ, ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯ ಜನ ಆಗಮಿಸುವಂತೆ ನೋಡಿಕೊಳ್ಳುವುದು, ವಿಜೃಂಭಣೆಯ ಡಿಜೆ ಬದಲಿಗೆ ಅರ್ಥಪೂರ್ಣ ಜಯಂತಿ ಆಚರಿಸೋಣ ಎಂದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಸಮಾಜದ ಉದ್ದಾರ, ಏಳಿಗೆಗೆ ಕೆಲಸ ಮಾಡೋಣ. ಬಸವಣ್ಣನವರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಪಕ್ಷಬೇಧ ಮರೆತು, ಚಂದಾ ಪಟ್ಟಿ ಎತ್ತದೆ ಬಸವ ಜಯಂತಿ ಆಚರಿಸೋಣ ಎಂದರು.

ಬಸವ ಜಯಂತ್ಯುತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಶಾಸಕರಾದ ಎಂ.ವೈ. ಪಾಟೀಲ ಮಾತನಾಡಿ, ಬಸವತತ್ವ ಎಲ್ಲೆಡೆ ಮುಟ್ಟಬೇಕು. ಶರಣರ ಸಂದೇಶಗಳನ್ನು ಮನ, ಮನೆಗೆ ಮುಟ್ಟಿಸಬೇಕು ಎಂದರು. ಶಾಸಕ ಅಲ್ಲಮಪ್ರಭು ಪಾಟೀಲ, ಸಮಿತಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಮಾತನಾಡಿದರು.

ಸಚಿವ ಶರಣಬಸಪ್ಪ ದರ್ಶನಾಪುರ, ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಅರುಣಕುಮಾರ, ಎಂ.ವೈ. ಪಾಟೀಲ, ಮಾಜಿ ಶಾಸಕ ಅಮರನಾಥ ಪಾಟೀಲ, ಶಶಿಕಾಂತ ಪಾಟೀಲ, ಶಿವಾನಂದ ಪಾಟೀಲ ಮರ್ತೂರ, ವೆಂಕಟರಾವ ಪಾಟೀಲ, ಸಿದ್ರಾಮಪ್ಪ ಪಾಟೀಲ ಧಂಗಾಪುರ, ಜಗನ್ನಾಥ ಶೇಗಜಿ, ಶರಣು ಪಾಟೀಲ, ಸಿದ್ದು ಅಂಗಡಿ, ಗೌರಿ ಚಿತಕೋಟೆ, ಜ್ಯೋತಿ ಮರಗೋಳ, ಸುರೇಶ ಸಜ್ಜನ, ಶರಣು ಪಾಟೀಲ, , ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ರಾಜಾ ಭೀಮಳ್ಳಿ, ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ, ಶ್ರೀಶೈಲ ಘೂಳಿ, ಶರಣು ಮೋತಕಪಲ್ಲಿ, ಶರಣು ಪಪ್ಪಾ, ಅಪ್ಪು ಕಣಕಿ, ಡಾ. ಎಸ್.ಬಿ. ಕಾಮರೆಡ್ಡಿ,
ಇತರರು ಭಾಗವಹಿಸಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ ಜಿಲ್ಲಾಧ್ಯಕ್ಷ ಶರಣು ಮೋದಿ ಸ್ವಾಗತಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ಪ್ರಾಸ್ತಾವಿಕ ಮಾತನಾಡಿದರು.

ಪ್ರೊ. ಆರ್.ಕೆ. ಹುಡಗಿ, ರವೀಂದ್ರ ಶಾಬಾದಿ, ಐಯ್ಯಣ್ಣ ನಂದಿ, ಶಿವಶರಣಪ್ಪ ಕೆ., ರಾಜಶೇಖರ ನಿಲಂಗಿ, ಡಾ. ಮೀನಾಕ್ಷಿ ಬಾಳಿ ಇತರರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
2 Comments
  • D.j.ಸಂಗೀತ ಇಂದಿನ ಯುವಜನತೆ ಇಷ್ಟಪಡುತ್ತದೆ ಮತ್ತು ಯುವಕರಿಗೆ ಬಸವ ಜಾಗೃತಿ ಮೂಡುತ್ತದೆ. ಇಲ್ಲಿ ಅವಕಾಶ ತಪ್ಪಿದರೆ ರಾಮ,ಕೃಷ್ಣ ಹನುಮ ಎಂದು ಬೇರೆಡೆಗೆ ಆಕರ್ಷಿಸುವರು. ಬಸವ ಜಯಂತಿ ಉತ್ಸವಕ್ಕೆ ಲಿಂಗಾಯತ ಯುವಕರು ಕಾಯುತ್ತಿರುತ್ತಾರೆ. ಸ್ವಲ್ಪ ಸಂಪ್ರದಾಯ ಸಡಿಲಿಸಿ ಯುವಕರನ್ನು ಆಕರ್ಷಿಸಿ.

  • ಕಲ್ಬುರ್ಗಿ ನಗರದ ಶರಣ ಬಂಧುಗಳೆಲ್ಲ ಒಟ್ಟಿಗೆ ಸೇರಿ ಒಮ್ಮತದ ನಿರ್ಣಯವನ್ನು ತೆಗೆದುಕೊಂಡಿರುವುದು ಸ್ವಾಗತಾರ್ಹ. ಡಿ ಜೆ ಗಳ ಗದ್ದಲವಿಲ್ಲದೆ ಶಾಂತ ರೀತಿಯಿಂದ ಶರಣರ ಸಂದೇಶಗಳನ್ನು ಸಾರುತ್ತಾ ಬಸವಧರ್ಮವನ್ನು ಎತ್ತಿ ಹಿಡಿಯುತ್ತಾ ಹೆಚ್ಚಿನ ಜನರನ್ನು ಸೇರಿಸಿ ಬಸವ ಜಯಂತಿ ಆಚರಣೆ ಮಾಡುವುದು ಬಹಳ ಸ್ವಸಂಸ್ಕೃತವಾದಂತಹ ಆಚರಣೆ ಮತ್ತು ಕಾರ್ಯಕ್ರಮ ಎನಿಸಿಕೊಳ್ಳುತ್ತದೆ. ಆದರೆ ಇಂದು ಡಿ ಜೆ ಗಳು ಇಲ್ಲದೆ ಉತ್ಸವ ಮೆರವಣಿಗಳು ನಡೆಸುವುದು ಕಷ್ಟಕರ ಎಂಬಂತಾಗಿದೆ. ಏಕೆಂದರೆ ಇಂದಿನ ಯುವಕರು ಡಿಜೆ ಅಂತಹ ಆಧುನಿಕ ಸಂಸ್ಕೃತಿಗೆ ಒಗ್ಗಿ ಹೋಗಿದಾರೆ. ಡಿಜೆ ಅಂತಹ ವ್ಯವಸ್ಥೆಗಳು ಇಲ್ಲದಿದ್ದಲ್ಲಿ ಜನರನ್ನ ಒಗ್ಗೂಡಿಸುವುದು ಕಷ್ಟ. ಇಂದಿನ ಗಣಪತಿ ಉತ್ಸವಗಳಲ್ಲಿ ಡಿಜೆ ಅಂತಹ ವ್ಯವಸ್ಥೆಗಳು ಇರುವುದರಿಂದಲೇ ಆ ಮೆರವಣಿಗೆಗಳಲ್ಲಿ ಲಕ್ಷ-ಲಕ್ಷ ಯುವಕರು ಭಾಗವಹಿಸಿ ಕುಡಿದು ಕುಪ್ಪಳಿಸುವುದನ್ನು ನಾವು ಕಂಡಿದ್ದೇವೆ. ಹೆಚ್ಚಿನ ಜನಾಕರ್ಷಣೆ ಬೇಕು ಎಂದರೆ ಡಿ ಜೆ ಅಗತ್ಯ ಎನಿಸುತ್ತದೆ. ಆದರೆ ಡಿಜೆ ಹಾಕಿ ಕುಡಿದು ಕುಪ್ಪಳಿಸುವಂತಹ ಸಂಸ್ಕೃತಿ ಅಪ್ಪ ಬಸವಣ್ಣನವರ ತತ್ವಾದರ್ಶಗಳಿಗೆ ವಿರುದ್ಧ ಅನಿಸುತ್ತದೆ. ಏನೇ ಆದರೂ ಬಸವ ಜಯಂತಿ ಆಚರಣೆ ಮಾಡಿದ ಮೂಲಕ ಭಾರತೀಯರಿಗೆ,ಧರ್ಮಿಯರಿಗೆ ಬಸವಾದಿಶರಣರ ತತ್ವ ಸಂದೇಶಗಳು ತಲುಪಿಸಬೇಕಾಗಿದೆ. ಅದೇ ನಮ್ಮ ಮುಖ್ಯ ಗುರಿಯಾಗಿದ್ದರೆ ಸಾಕು. 🙏

Leave a Reply

Your email address will not be published. Required fields are marked *