ಚಿತ್ರದುರ್ಗ
ನಗರದ ಮೆದೇಹಳ್ಳಿ ರಸ್ತೆಯ ಹತ್ತಿರ ರವಿವಾರ ಶ್ರೀ ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಅನಾವರಣಗೊಂಡಿತು.
ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಜಗದ್ಗುರುಗಳ ಸೇವೆಯನ್ನು ಸ್ಮರಿಸಿಕೊಳ್ಳಲಾಯಿತು.
ಸಾನಿಧ್ಯವಹಿಸಿ ಮಾತನಾಡಿದ ಹೆಬ್ಬಾಳ ವಿರಕ್ತ ಮಠದ ಮಹಾಂತ ರುದ್ರೇಶ ಸ್ವಾಮಿಗಳು ನಿಷ್ಠೆಯಿಂದ ಸಮಾಜವನ್ನು ಕಟ್ಟಿದ ಕೀರ್ತಿ ಜಗದ್ಗುರು ಜಯದೇವ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ಅಂದಿನ ಕಾಲದಲ್ಲಿ ಶಿಕ್ಷಣವಿಲ್ಲದೆ ಜನತೆ ಪರದಾಡುತ್ತಿದ್ಧಾಗ ನಾಡಿನ ಎಲ್ಲೆಡೆ ಶಾಲೆಗಳನ್ನು ತೆರೆದು ಅನ್ನದಾನ ವಿದ್ಯಾದಾನ ಹಾಗೂ ಧರ್ಮದ ಬಗ್ಗೆ ತಿಳಿಸುವ ಕೆಲಸ ಮಾಡಿದ್ದರು. ಮಠದ ಮುಂಭಾಗದ ಕೆರೆಯಲ್ಲಿ ಜಯದೇವ ಶ್ರೀ ಮೂರ್ತಿ ನಿರ್ಮಾಣ ಮಾಡಿ ಅದನ್ನು ಪ್ರವಾಸಿ ಕೇಂದ್ರವಾಗಿಸಬೇಕೆಂದು ಎಂದು ಹೇಳಿದರು.
ದಾವಣಗೆರೆಯ ವಿರಕ್ತ ಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ಮಾತನಾಡಿ, ಜಯದೇವ ಶ್ರೀಗಳ ಕಾಲದಲ್ಲಿ ಏನು ಇರಲಿಲ್ಲ. ಅವರು ಪೀಠಾಧ್ಯಕ್ಷರಾದ ಸಮಯದಲ್ಲಿ ಮುರುಘಾ ಮಠ ಸಾಲದಲ್ಲಿ ಇತ್ತು, ಪೀಠಾಧ್ಯಕ್ಷರಾಗಿ ಸಾಲ ತೀರಿಸಿ ಮಠವನ್ನು ಪ್ರಗತಿಪಥದತ್ತ ಒಯ್ದರು.
53 ವರ್ಷ ಮುರುಘಾ ಮಠದ ಪೀಠಾಧಿಪತಿಗಳಾಗಿ ನಾಡನ್ನು ಸುತ್ತಿ ಸಮಾಜವನ್ನು ಕಟ್ಟಿದರು. ನಾಡಿನ ಜಿಲ್ಲಾ ಕೇಂದ್ರಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಬಡ ಮಕ್ಕಳಿಗೆ ಶಿಕ್ಷಣವನ್ನು ದೊರಕುವಂತೆ ಮಾಡಿದ ಕೀರ್ತಿ ಶ್ರೀಗಳಿಗೆ ಸಲುತ್ತದೆ.
ಜನರಲ್ಲಿನ ಬಡತನ, ಅಸಮಾನತೆ, ಅನಕ್ಷರತೆ, ದರಿದ್ರತನ, ಕಿತ್ತು ಹಾಕಿ ಶಿಕ್ಷಣವನ್ನು ನೀಡಿದರು. ಜನರ ಬದುಕನ್ನು ಉದ್ದಾರ ಮಾಡಿದವರ ಜಯದೇವ ಶ್ರೀಗಳು. ಮಹಾತ್ಮಗಾಂಧಿಜೀಯವರು ಶ್ರೀಗಳನ್ನು ಬೇಟಿ ಮಾಡಿ ಇವರ ಕಾರ್ಯವನ್ನು ಶ್ಲಾಘಿಸಿದ್ದರು.
ಕರ್ನಾಟಕ ಏಕೀಕರಣಕ್ಕೆ ಜಯದೇವ ಶ್ರೀಗಳ ಕೊಡುಗೆ ಸಹ ಹೆಚ್ಚಿನ ರೀತಿಯಲ್ಲಿ ಇದೆ. ಇಂದು ಅವರು ಇಲ್ಲ ಆದರೆ ಅವರು ಮಾಡಿದ ಸಮಾಜ ಸೇವೆ ಇಂದಿಗೂ ನಮ್ಮ ಬಳಿ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಕೆ. ಸಿ. ವೀರೇಂದ್ರ, ವಿಧಾನ ಪರಿಷತ್ತು ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ನಗರಸಭೆ ಅಧ್ಯಕ್ಷೆ ಶ್ರೀಮತಿ ಸವಿತಾ ರಘು, ಉಪಾಧ್ಯಕ್ಷೆ ಶ್ರೀಮತಿ ಶ್ರೀದೇವಿ ಚಕ್ರವರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಆಯುಕ್ತ ಎಂ.ಎಸ್. ಸೋಮಶೇಖರ್, ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷರಾದ ಸೋಮಶೇಖರ್ ಮಂಡಿಮಠ, ನಗರಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ.ಬಿ.ಸುರೇಶ, ಅ.ಭಾ.ವೀ. ಮಹಾಸಭಾದ ಅಧ್ಯಕ್ಷರಾದ ಮಹಡಿ ಶಿವಮೂರ್ತಿ ಸೇರಿದಂತೆ ಇತರರು ಇದ್ದರು.
ತೋಟಪ್ಪ ಪ್ರಾರ್ಥಿಸಿದರೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಕೆ.ಎಂ. ವೀರೇಶ ಸ್ವಾಗತಿಸಿದರು. ಷಡಕ್ಷರಯ್ಯ ಕಾರ್ಯಕ್ರಮ ನಿರೂಪಿಸಿದರು.