ಬೆಳಗಾವಿ
ಕಲ್ಬುರ್ಗಿ ಜಿಲ್ಲೆಯ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ, ಗುರುವಾರ ರಾತ್ರಿ, 12ನೇ ಶತಮಾನದ ಶ್ರೇಷ್ಠ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕೆಲ ಸಮಾಜಘಾತಕ ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ಅತ್ಯಂತ ಆಘಾತಕಾರಿ ಸಂಗತಿ.
ಬಸವಾದಿ ಶರಣರೊಂದಿಗೆ, ಸಮಾನತೆಯ ಸಂದೇಶವನ್ನು ಸಾರಿದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯ ಎಡಗೈಯನ್ನು ಮುರಿದು ಹಾಕಿ, ಬಲಗೈ ಬೆರಳುಗಳನ್ನು ವಿರೂಪಗೊಳಿಸಿ, ಶರಣ ಅಂಬಿಗರ ಚೌಡಯ್ಯನವರ ಮುಖಕ್ಕೆ ಸಗಣಿಯನ್ನು ಎರಚಿದ್ದು ಅತ್ಯಂತ ಅಮಾನವೀಯ ಹೇಯ ಕೃತ್ಯವಾಗಿದೆ.
ಇದು ಅಸಹಿಷ್ಣುತೆಯ ಒಂದು ನಿದರ್ಶನ. ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಸರಕಾರ ಸಮಾಜಘಾತುಕ ಈ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇವೆ.