ರಾಷ್ಟ್ರೀಯ ಬಸವದಳ ಪುನಶ್ಚೇತನಗೊಳಿಸಲು ಚಿತ್ರದುರ್ಗ ಸಮಾವೇಶದಲ್ಲಿ ಸಂಕಲ್ಪ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ನಗರದಲ್ಲಿ ಜಿಲ್ಲಾಮಟ್ಟದ ರಾಷ್ಟ್ರೀಯ ಬಸವದಳದ ಸಮಾವೇಶ, ಮಾತಾಜಿಯವರ 79ನೇ ಜಯಂತಿ ಹಾಗೂ ಅವರ ಆರನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ರವಿವಾರ ನಡೆಯಿತು.

ಬಸವ ಧರ್ಮ ಪೀಠದ ಆಶ್ರಯದ ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ ಮಹಿಳಾ ಗಣ ಸಂಘಟನೆಗಳು ಸಮಾವೇಶ ಆಯೋಜಿಸಿದ್ದವು. ಸಮಾವೇಶದಲ್ಲಿ 400 ಕಾರ್ಯಕರ್ತರು ಭಾಗಿಯಾಗಿದ್ದರು.

ಬಸವ ಧರ್ಮಪೀಠ‌ದ ಪೂಜ್ಯ ಬಸವಯೋಗಿ ಸ್ವಾಮಿಗಳು ಸಭೆ ತೆಗೆದುಕೊಂಡ ನಿರ್ಣಯಗಳ ಘೋಷಣೆ ಮಾಡಿದರು.

1) ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಬಸವದಳದ ಪುನಶ್ಚೇತನ ಹಾಗೂ ರಚನೆ.
2) ರಾಜ್ಯದಲ್ಲಿರುವ ಬಸವ ಮಂಟಪಗಳ ಬಗ್ಗೆ ಕೇಂದ್ರ ಸಮಿತಿಗೆ ಮಾಹಿತಿ ನೀಡುವುದು.
3) ಪ್ರತಿ ತಿಂಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕರ್ತರ ಸಮಾವೇಶವನ್ನು ಮಾಡುವುದು.
4) ಬೆಂಗಳೂರಿನಲ್ಲಿ ರಾಷ್ಟ್ರೀಯ ಬಸವದಳದ ಮಹಾ ಅದಿವೇಶನ, ಆಯೋಜನೆ.
5) ಲಿಂಗಾಯತ ಧರ್ಮದ ಸಂವಿಧಾನಾತ್ಮಕ ಮನ್ನಣೆಗಾಗಿ ನಿರಂತರ ಜನಜಾಗೃತಿ, ಸಂಘಟನೆ, ಹೋರಾಟ.
6) ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ ವಿಶ್ವಗುರು ಬಸವಣ್ಣನವರ 112 ಅಡಿ, ಪುತ್ತಳಿಗೆ ಧನ ಸಹಾಯಕ್ಕೆ ಮನವಿ ಸಲ್ಲಿಸುವಿಕೆ.

ಪೂಜ್ಯರ ಹುಟ್ಟೂರಾದ ಚಿತ್ರದುರ್ಗದಲ್ಲಿ ಮಾತಾಜಿ ಅವರ ಹೆಸರಿನಲ್ಲಿ ವೃತ್ತ ನಿರ್ಮಾಣ ಮತ್ತು ಮುಖ್ಯ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರು ಪುತ್ತಳಿ ಸ್ಥಾಪನೆ ಮಾಡಲು, ವೇದಿಕೆ ಮೇಲಿದ್ದ ಚಿತ್ರದುರ್ಗ ನಗರಸಭಾ ಅಧ್ಯಕ್ಷರಾದ ಶರಣೆ ಸುನಿತಾ ಅವರಿಗೆ ವಿಜ್ಞಾಪನೆ ಪತ್ರದ ಮೂಲಕ ಮನವಿ ಸಲ್ಲಿಸಲಾಯಿತು.

ಮಾತಾಜಿ ಅವರಿಂದ ಪ್ರಭಾವಿತರಾದ ಅನೇಕ ಶರಣರು ನುಡಿ ನಮನ ಸಲ್ಲಿಸಿದರು.

ಶರಣ ಎನ್. ಚಂದ್ರಮೌಳಿ ಅವರು ಪೂಜ್ಯ ಮಾತಾಜಿ ಅವರ ಜೀವನ ಸಾಧನೆ, ಸಂದೇಶಗಳ ಬಗ್ಗೆ ಚಿಂತನೆ ನೀಡಿದರು. ಶರಣ ವೀರೇಶಪ್ಪ ಅವರು ಪೂಜ್ಯ ಮಾತಾಜಿಯವರ ಹೋರಾಟ ಜೀವನದ ಬಗ್ಗೆ ಚಿಂತನೆ ಮಾಡಿದರು.

ಬಸವ ಮಂಟಪದಲ್ಲಿ ಬೆಳಗ್ಗೆ 4.30 ಗಂಟೆಗೆ ವಿಶ್ವಗುರು ಬಸವೇಶ್ವರ ಪೂಜಾ ಅನುಷ್ಠಾನ, ಸಾಮೂಹಿಕ ಇಷ್ಟಲಿಂಗ ಅರ್ಚನೆ, ಶರಣರ ವಚನ ಪಠಣ, ಪೂಜ್ಯ ಮಾತಾಜಿಯವರ ತರಂಗಿಣಿ ಗ್ರಂಥ ಪಾರಾಯಣ ಹಾಗೂ ಪಥಸಂಚಲನ ಕಾರ್ಯಕ್ರಮಗಳು ನಡೆದವು.

ಬೆಳಿಗ್ಗೆ 10:00 ಗಂಟೆಗೆ ಪೂಜ್ಯ ದಾನೇಶ್ವರಿ ಮಾತಾಜಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.

ಲಿಂಗಾಯತ ಧರ್ಮ ಮಹಾಸಭಾ ರಾಜ್ಯ ಅಧ್ಯಕ್ಷ ಶರಣ ಈಶ್ವರ್ ಕೊರಲಹಳ್ಳಿ ಅವರಿಂದ ಬಸವ ಧ್ವಜಾರೋಹಣ, ಶರಣೆ ವಿಜಯಲಕ್ಷ್ಮಿ ಈಶ್ವರ್ ಅವರಿಂದ ವಚನ ಗಾಯನ, ಶರಣೆ ಸುನಿತಾ ತಾಯಿ ಮಾನ್ಯ ನಗರಸಭಾ ಅಧ್ಯಕ್ಷರು ಚಿತ್ರದುರ್ಗ, ಬಸವ ಧರ್ಮಪೀಠದ ಪೂಜ್ಯ ದಾನೇಶ್ವರಿ ಮಾತಾಜಿ ಹಾಗೂ ಪೂಜ್ಯ ಬಸವಯೋಗಿ ಸ್ವಾಮೀಜಿ, ಶರಣ ಕೆ. ವೀರೇಶಪ್ಪ, ರಾಜ್ಯಾಧ್ಯಕ್ಷರು ರಾಷ್ಟ್ರೀಯ ಬಸವದಳ ಕರ್ನಾಟಕ, ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣ ಚಂದ್ರಮೌಳಿ ಎನ್. ಲಿಂಗಾಯತ, ಶರಣ ಮನೋಹರ್ ಜಿಲ್ಲಾಧ್ಯಕ್ಷರು ಚಿತ್ರದುರ್ಗ ಜಿಲ್ಲಾ ಘಟಕ ಇವರೆಲ್ಲ ವೇದಿಕೆಯಲ್ಲಿದ್ದು ಬಸವ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶರಣ ಪಂಚಾಕ್ಷರಿ ಹಿರೇಮಠ, ಶರಣಪ್ರಕಾಶ್ ಜೀರಿಗೆ, ಶರಣ ಶಿವಕುಮಾರ್, ಶರಣ ಪ್ರವೀಣ್ ಕೊಚ್ಚಾಕಿ, ಇವರುಗಳು ರಾಷ್ಟ್ರೀಯ ಬಸವ ದಳದ ಸಂಘಟನೆ, ಯುವ ಕಾರ್ಯಕರ್ತರನ್ನು ಸೇರಿಸುವುದು, ಮಹಿಳಾ ಘಟಕ ನಿರ್ಮಾಣ ಮಾಡುವುದು ವಿವಿಧ, ವಿಷಯವಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆದರು.

ಜನವರಿಯ ಶರಣ ಮೇಳದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಲು ತಿಂಗಳಿಗೊಂದು ಜಿಲ್ಲೆಯಲ್ಲಿ ಅಧಿವೇಶನ ನಡೆಸಲು ಪೂಜ್ಯ ಮಾತಾಜಿಯವರ ಸಮ್ಮುಖದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಜನವರಿ 26ರಂದು ಬಳ್ಳಾರಿಯಲ್ಲಿ ಮೊದಲನೇ ಅಧಿವೇಶನ ನಡೆಯಿತು. ಈಗ ಚಿತ್ರದುರ್ಗದಲ್ಲಿ ಎರಡನೇ ಅಧಿವೇಶನ ನಡೆದಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *