ಯತ್ನಾಳ್, ಚಂದ್ರಶೇಖರನಾಥ ಶ್ರೀ, ಪೇಜಾವರ ಶ್ರೀ, ಕಾಡಸಿದ್ದೇಶ್ವರ ಶ್ರೀ ವಿರುದ್ಧ ಮುಖ್ಯಮಂತ್ರಿಗೆ ದೂರು

ಬಸವ ಮೀಡಿಯಾ
ಬಸವ ಮೀಡಿಯಾ

ಕೇಸು ದಾಖಲಿಸಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ.

ವಿಜಯಪುರ

ಸಾಮಾಜಿಕ ಸಾಮರಸ್ಯ ಕದಡುತ್ತಿರುವ ಸಂವಿಧಾನ ವಿರೋಧಿ ಶಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಬಸವಪರ, ದಲಿತರಪರ, ಪ್ರಗತಿಪರ, ಸಂವಿಧಾನಪರ ಸಂಘಟನೆಗಳ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿಗಳು ಮೂಲಕ ಮುಖ್ಯಮಂತ್ರಿಗಳಿಗೆ ಕಳಿಸಿರುವ ಪತ್ರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಶ್ವ ಒಕ್ಕಲಿಗರ ಪೀಠದ ಚಂದ್ರಶೇಖರನಾಥ ಸ್ವಾಮೀಜಿ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಜೀ , ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥರು ಅವರ ವಿರುದ್ಧ ದೂರು ದಾಖಲಿಸಲಾಗಿದೆ.

  • ವಕ್ಫ್ ಹೋರಾಟದ ನೆಪದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಸವಣ್ಣನವರು ಹೊಳೆಗೆ ಹಾರಿ ಸತ್ತರು ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ.
  • ವಿಶ್ವ ಒಕ್ಕಲಿಗರ ಪೀಠದ ಚಂದ್ರಶೇಖರನಾಥ ಸ್ವಾಮೀಜಿಯವರು, ದೇಶದಲ್ಲಿರುವ ಮುಸ್ಲಿಮರ ಮತದಾನದ ಹಕ್ಕನ್ನು ಕಿತ್ತುಕೊಳ್ಳಬೇಕೆಂದು ಮಾತನಾಡಿದ್ದಾರೆ.
  • ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಜೀ ಕೂಡಾ ಸೌಹಾರ್ದತೆಯನ್ನು ಕೆಡಿಸುವ ಮಾತನಾಡಿದ್ದಾರೆ.
  • ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥರು ನಮಗೆ ಗೌರವ ಕೊಡುವ ಸಂವಿಧಾನ ಬೇಕು. ಈ ಸಂವಿಧಾನ ಹಿಂದೂಗಳ ಪರವಾಗಿಲ್ಲ ಎನ್ನುವ ಸಂವಿಧಾನ ವಿರೋಧಿ ಹಾಗು ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಇದು ಅಸಂಖ್ಯಾತ ಬಸವಾನುಯಾಯಿಗಳ ಮನಸ್ಸನ್ನು ನೋಯಿಸಿದೆ. ಹಲವು ಧರ್ಮಗಳು, ಹಲವು ¨ ಪಂಗಡಗಳು, ಸಾವಿರಾರು ಜಾತಿಗಳು ಮತ್ತು ಸಂಸ್ಕೃತಿಯನ್ನು ಹೊಂದಿರುವ ಭಾರತ ದೇಶವನ್ನು ಒಂದಾಗಿ ಬೆಸೆಯುವ ದಿಸೆಯಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ವಿಶಿಷ್ವವಾದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದ ಕಾರಣದಿಂದಾಗಿಯೇ ಎಲ್ಲರಿಗೂ ಸಮಾನ ಹಕ್ಕುಗಳು ದೊರೆತಿವೆ.

ಜಗತ್ತಿನಲ್ಲೇ ಶ್ರೇಷ್ಠವೆನಿಸಿಕೊಂಡ ಭಾರತದ ಸಂವಿಧಾನದ ಮೇಲೆ ಮನುವಾದಿಗಳು ನಿರಂತರವಾಗಿ ಆಕ್ರಮಣ ನಡೆಸಿದ್ದಾರೆ. ಈ ಆಕ್ರಮಣದ ¨ ಭಾಗವಾಗಿಯೇ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮಿಗಳು ಮತ್ತು ಒಕ್ಕಲಿಗರ ಪೀಠದ ಚಂದ್ರಶೇಖರ ಸ್ವಾಮಿಗಳು ಮತ್ತು ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳು ಸಂವಿಧಾನ ವಿರೋಧಿ ಮತ್ತು ದೇಶದ್ರೋಹಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯವಾಗಿದೆ.

ಹಾಗೆಯೇ ಕರ್ನಾಟದ ಸಾಂಸೃತಿಕ ನಾಯಕ ಎಂದು ಕರ್ನಾಟಕ ಸರಕಾರವೇ ಘೋಷಿಸಿರುವ ವಿಶ್ವಗುರು ಬಸವಣ್ಣನವರ ಕುರಿತಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದು ಸಹ ಖಂಡನೀಯವಾಗಿದೆ.

ಸಂವಿಧಾನವಿರೋಧಿ ಶಕ್ತಿಗಳು ಮತ್ತು ಬಸವವಿರೋಧಿ ಮನಸ್ಥಿತಿಯ ಈ ವ್ಯಕ್ತಿಗಳನ್ನು ಅದೇ ಮನಸ್ಥಿತಿಯ ಹಲವು ಸ್ವಾಮಿಗಳು ಮತ್ತು ರಾಜಕೀಯ ಮುಖಂಡರು ಬೆಂಬಲಿಸಿರುವುದು ಕೂಡ ಖಂಡನಾರ್ಹವಾಗಿದೆ.ಇಂಥ ಸಂವಿಧಾನ ಮತ್ತು ಸಮಾನತೆ ವಿರೋಧಿ ವ್ಯಕ್ತಿಗಳ ವಿರುದ್ಧ ಕರ್ನಾಟಕ ಸರಕಾರವು ಸ್ವಯಂಪ್ರೇರಣೆಯಿಂದ ದೇಶದ್ರೋಹಿ ಎಂದು ಪ್ರಕರಣ ದಾಖಲಿಸಬೇಕಿತ್ತು. ಆದರೆ ಸರಕಾರವು ಮೌನವಾಗಿರುವುದು ಕೂಡ ಅವರ ಪರವಾಗಿದೆ ಎಂಬ ಭಾವನೆ ಸಾರ್ವನಿಕರಲ್ಲಿ ಮೂಡುತ್ತಿದೆ.

ಕಾರಣ ಸರಕಾರವು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು, ಚಂದ್ರಶೇಖರನಾಥ ಸ್ವಾಮಿಗಳು ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳರ ಹಾಗೂ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸುತ್ತೇವೆ. ಇಲ್ಲವಾದರೆ ಸರಕಾರದ ವಿರುದ್ಧವೇ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತೇವೆ, ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

ಬಸವಕಲ್ಯಾಣ ಬೇಲೂರು ಮಠದ ಸಂಗನಬಸವ ಸ್ವಾಮಿಗಳುˌ ಸಿದ್ದಲಿಂಗ ಸ್ವಾಮಿಗಳು ಜೇನಾಪುರ,ಆಲಮೇಲನ ಜಯದೇವ ಮಲ್ಲಿಬೊಮ್ಮಯ್ಯ ಸಂಸ್ಥಾನ ಮಠದ ಮಠಾಧೀಶರುˌ ಮನಗೂಳಿ ವಿರಕ್ತ ಮಠದ ವಿರತೀಶಾನಂದ ಸ್ವಾಮಿಗಳುˌ ಜಗದ್ಗುರು ರೇವಣಸಿದ್ದರ ಮಠದ ಶರಭಯ್ಯ ಸ್ವಾಮಿಗಳುˌ ಸೋಮನಾಥ ಕಳ್ಳಿಮನಿˌ ಮಾನವಬಂಧುತ್ವ ವೇದಿಕೆಯ ಪ್ರಭುಗೌಡ ಪಾಟೀಲˌ ಹಿರಿಯ ಹೋರಾಟಗಾರರಾದ ಅಪ್ಪಾಸಾಹೇಬ ಯರನಾಳೆˌ ಅನಿಲ ಹೊಸಮನಿˌ ಚನ್ನು ಕಟ್ಟಿಮನಿˌ ರಾಷ್ಟ್ರೀಯ ಬಸವ ಸೇನೆಯ ಡಾ. ರವಿಕುಮಾರ ಬಿರಾದಾರˌ ಶಾಂತು ತಲಾಬವಾಡಿˌ ಕಲಬುರಗಿ ಫೌಂಡೇಷನ್ನಿನ ಶಿವಲಿಂಗ ಕಲಬುರಗಿˌ ರಾಷ್ಟ್ರೀಯ ಬಸವ ದಳದ ಬಸವರಾಜ್ ಕೊಂಡಗೂಳಿˌ ಆವಜಿˌ ಬಸವರಾಜ್ ಅಗಸರˌ ಮಹಾದೇವಿ ಗೋಕಾಕ್ˌ ಇನ್ನೂ ಅನೇಕ ಜನರು ಹಾಜರಿದ್ದರು.

Share This Article
Leave a comment

Leave a Reply

Your email address will not be published. Required fields are marked *