ಬಿಜೆಪಿ, ಕಾಂಗ್ರೆಸ್ ಮುಖಂಡರು ಲಿಂಗಾಯತರ ದಾರಿ ತಪ್ಪಿಸುತ್ತಿದ್ದಾರೆ

ಆಳಂದ

ಬಸವಾದಿ ಶಿವಶರಣರ ಮೇಲೆ ಮತ್ತು ಲಿಂಗಾಯತ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಎಲ್ಲಾ ಲಿಂಗಾಯತ ಒಳಪಂಗಡ ಕಾಯಕ ಸಮಾಜದವರಲ್ಲೊಂದು ಮನವಿ, ಜನಗಣತಿಯ ವಿಷಯದಲ್ಲಿ ನೀವು ಯಾರು ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರ ಮಾತನ್ನು ಕೇಳಬೇಡಿ. ಅವರು ನಿಮಗೆ ದಾರಿ ತಪ್ಪಿಸುತ್ತಿದ್ದಾರೆ.

ಕಾಂಗ್ರೆಸ್ನಲ್ಲಿರುವಂತಹ ಲಿಂಗಾಯತ ಮುಖಂಡರು ಹೇಳುತ್ತಾರೆ ಧರ್ಮದ ಕಾಲಮಿನಲ್ಲಿ ವೀರಶೈವ ಲಿಂಗಾಯತ ಎಂದು ನೋಂದಾಯಿಸಿರೆಂದು, ಬಿಜೆಪಿ ಪಕ್ಷದಲ್ಲಿರುವ ಲಿಂಗಾಯತ ಮುಖಂಡರು ಹೇಳುತ್ತಾರೆ ಧರ್ಮದ ಕಾಲಮಿನಲ್ಲಿ ಹಿಂದೂ ಎಂದು ನೋಂದಾಯಿಸಿರಿ ಎಂದು.

ಈ ರೀತಿ ಅವರು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಕುರ್ಚಿಗಾಗಿ ಪಕ್ಷದ ಹೈಕಮಾಂಡಗೆ ಖುಷಿಪಡಿಸುವುದಕ್ಕಾಗಿ ಹೇಳುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಯಾವುದೇ ಲಾಭವಿಲ್ಲ ತಮ್ಮ ಸಾರ್ಥಕ್ಕಾಗಿ ಲಿಂಗಾಯತ ಬಸವಾದಿ ಶಿವಶರಣರ ಧರ್ಮವನ್ನು ನಂಬಿದ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಅವರು ಹೇಳಿದ ಹಾಗೆ ನೀವೇನಾದರೂ ಬರೆದರೆ ಅತಂತ್ರಕ್ಕೆ ಒಳಗಾಗುತ್ತೀರಿ.

ಸಾಂವಿಧಾನಿಕವಾದ ಯಾವುದೇ ಲಾಭಗಳು ನಮಗೆ ಸಿಗುವುದಿಲ್ಲ, ಕಾರಣ ತಾವೆಲ್ಲರೂ ಧರ್ಮದ ಕಾಲಮಿನಲ್ಲಿ ‘ಲಿಂಗಾಯತ’ವೆಂದು ಜಾತಿಯ ಕಾಲಂದಲ್ಲಿ ನಿಮ್ಮ ನಿಮ್ಮ ಉಪ ಪಂಗಡಗಳನ್ನು ನೋಂದಾಯಿಸಿದಾಗ ಮಾತ್ರ, ಅದು ನಿಮ್ಮ ಮುಂದಿನ ಪೀಳಿಗೆ ಸಂವಿಧಾನಿಕ ಲಾಭಗಳು ದೊರೆಯುತ್ತವೆ.

ಒಂದು ಮಾತನ್ನು ನೀವು ಯಾರೂ ಕೂಡ ಮರೆಯಬಾರದು ಇಂದಿಲ್ಲ ನಾಳೆ ಭವಿಷ್ಯದಲ್ಲಿ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ನನಗಿದೆ.

ಕೆಲವು ಜಾತಿ ಜಂಗಮ ವೈದಿಕ ವೀರಶೈವ ಮಠಾಧೀಶರು ಕೂಡ ತಮ್ಮ ಸ್ವಾರ್ಥಕ್ಕಾಗಿ ಜಂಗಮರನ್ನು ಹಿಂದೂ ಜಂಗಮ ಎಂದು ನೋಂದಾಯಿಸಲು ಹೇಳುತ್ತಾರೆ. ಮತ್ತು ಲಿಂಗಾಯತರನ್ನು ವೀರಶೈವ ಲಿಂಗಾಯತ ಎಂದು ಬರೆಸಲು ಹೇಳುತ್ತಾರೆ, ಅವರು ಕೂಡ ಅಸಂವಿಧಾನಿಕ ಮಾತುಗಳನ್ನು ಜನಗಳ ತಲೆಗೆ ಹಾಕುತ್ತಾ ಸಮಾಜಕ್ಕೆ ದೊಡ್ಡ ಮೋಸವನ್ನು ಮಾಡುತ್ತಿದ್ದಾರೆ.

ಯಾವುದಕ್ಕೂ ಲಿಂಗಾಯತ ಜನಸಾಮಾನ್ಯರು ಕಾಯಕ ಶರಣರ ಸಮಾಜದವರು ತುಂಬಾ ಎಚ್ಚರಿಕೆಯಿಂದ ಜನಗಣತಿಯಲ್ಲಿ ಸೂಕ್ತವಾದ ಮತ್ತು ಸಂವಿಧಾನಿಕವಾಗಿರತಕ್ಕಂತಹ ಕ್ರಮಗಳನ್ನು ಕೈಗೊಳ್ಳಬೇಕು.

ಕರ್ನಾಟಕದ ಜಾತಿ ಜನಗಣತಿಯಲ್ಲಿ ಲಿಂಗಾಯತ, ಪ್ರಗತಿಪರ, ಸಮಾಜವಾದಿಗಳೆಂದು ಭಾಷಣ ಬಿಗಿಯುವ ರಾಜಕಾರಣಿಗಳ ಮತ್ತು ಮಠಾಧಿಪತಿಗಳ ಬಣ್ಣವು ಬಯಲಾಗುತ್ತಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
1 Comment
  • ಜನರನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿ ಲಿಂಗಾಯತ ಧರ್ಮೀಯರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿರುವ ರಾಜಕಾರಣಿ ಮತ್ತು ಮಠಾಧಿಪತಿಗಳನ್ನು ಲಿಂಗಾಯತ ಧರ್ಮೀಯರು ಧಿಕ್ಕರಿಸಬೇಕು.

Leave a Reply

Your email address will not be published. Required fields are marked *