ಬೆಂಗಳೂರು
ವಿಶ್ವಗುರು ಕಾಯಕಯೋಗಿ ಬಸವಣ್ಣನವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರ ನೇತೃತ್ವದಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಲುಕ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್. ಮನೋಹರ್ ಮಾತನಾಡಿ ವಿಶ್ವಕ್ಕೇ ಧೈರ್ಯದ ಸಂಕೇತವಾಗಿರುವ ಬಸವಣ್ಣನವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಾಗಿರಲಿಲ್ಲ ಎಂದು. ಸಮಾನತೆಯ ದಾರಿಯನ್ನು ತೋರಿದ ವಿಶ್ವಗುರು ಬಸವಣ್ಣನವರು ಎಂದೆಂದಿಗೂ ವಿಶ್ವಕ್ಕೆ ದಾರಿದೀಪವಾಗಿದ್ದಾರೆ. ಅಂತವರ ಕುರಿತು ಹಗುರ ಮತ್ತು ಅವಹೇಳನಕಾರಿ ಭಾಷಣ ಮಾಡಿ ಅವರ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿರುವ ತುಚ್ಛ ನಾಲಿಗೆಯ ಬಸನಗೌಡ ಪಾಟೀಲ್ ಯತ್ನಾಳರನ್ನು ಬಿಜೆಪಿಯು ಕೂಡಲೇ ಉಚ್ಛಾಟಿಸಬೇಕು ಹಾಗೂ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಯತ್ನಾಳ ವಿರುದ್ಧ ಪೊಲೀಸ್ ಕ್ರಮ ನಡೆದು ಅವರ ಬಂಧನವಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಆಧಾರ ರಹಿತವಾದಂತ ಆರೋಪ ಮಾಡಿ ಇಂದು ರಾಜ್ಯದ ಜನತೆ ಮುಂದೆ ಬಿಜೆಪಿಯ ನಾಯಕರುಗಳ ಭ್ರಷ್ಟಾಚಾರದ ಬಣ್ಣವನ್ನು ಸ್ವತಃ ಅವರೇ ಬಹಿರಂಗಪಡಿಸಿಕೊಂಡಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೇಸ್ ಮುಖಂಡರಾದ ಜಿ. ಪ್ರಕಾಶ, ಹೇಮರಾಜ, ಚಂದ್ರಶೇಖರ, ಪುಟ್ಟರಾಜು, ಉಮೇಶ, ಓಬಳೇಶ, ಚಿನ್ನಿಪ್ರಕಾಶ್, ರವಿ, ಮಾಧವ, ಕುಶಾಲ ಅರವೇಗೌಡ, ನವೀನ ಸಾಯಿ ಮತ್ತು ಇತರ ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಉತ್ತಮ ಬೆಳವಣಿಗೆ.
ಸಂಘಪರಿವಾರ ಮತ್ತು ಬಿಜೆಪಿಯವರಿಗೆ ಬಸವಣ್ಣನವರು ಮತ್ತು ಶರಣರ ಬಗ್ಗೆ ಕೀಳಾಗಿ ಮಾತನಾಡುವವರೇ ಬೇಕಾಗಿರುವುದು..ಸದ್ಯಕ್ಕೆ ಕಾಂಗ್ರೆಸ್ಸಿನವರಾದರೂ ಬಸವಣ್ಣನವರ ಬಗ್ಗೆ ಅಭಿಮಾನ ಇದೆಯಲ್ಲಾ ಅದೆ ಸಂತೋಷ ..ಪ್ರತಿಭಟಿಸಿದ ಎಲ್ಲರಿಗೂ ಅನಂತ ಶರಣು ಶರಣಾರ್ಥಿಗಳು
ಇವನ ನಾಲಿಗೆ ತುಂಬಾ ಚೆನ್ಯಾಗಿದೆ ಮುಂದಿನ ದಿನಗಳಲ್ಲಿ ಈ ನಾಲಿಗೆಯನ್ನುRSS ನವರೆ ಕತ್ತರಿಸುವ ಕಾಲ ಹತ್ತಿರವಿದೆ ಎನಿಸುತ್ತದೆ