ನಮ್ಮ ತಲೆಯೊಳಗೆ ಹುಳು ಬಿಡಲು ಬಂದಿರುವ ವಚನ ದರ್ಶನ: ಡಿ. ಪಿ. ನಿವೇದಿತಾ (ಆಡಿಯೋ)

ಎಂ. ಎ. ಅರುಣ್
ಎಂ. ಎ. ಅರುಣ್

ಮೊನ್ನೆ ಬೆಂಗಳೂರಿನ ಬಸವ ಸಮಿತಿಯಲ್ಲಿ ನಡೆದ ಸಭೆಗೆ ಬಂದ ಒಬ್ಬರು ಹೇಳಿದ ಮಾತು: ಲಿಂಗಾಯತರಲ್ಲಿ ಆಗಬೇಕಿರುವುದು ಆತ್ಮಾವಲೋಕನವಲ್ಲ, ಹೊಸ ಯುವ ಪ್ರತಿಭೆಯ ಶೋಧ.

ಇದಕ್ಕೆ ಸರಿಯಾಗಿ ಬೆಳಗಾವಿಯಲ್ಲಿ ಡಿ.ಪಿ. ನಿವೇದಿತಾ ವಚನ ದರ್ಶನ ಪುಸ್ತಕದ ವಿರುದ್ಧ ಗುರುವಾರ ಒಂದು ಸುದ್ದಿಘೋಷ್ಠಿ ನಡೆಸಿದರು. ಇವರು ರಾಮದುರ್ಗ ತಾಲ್ಲೂಕಿನ ನಾಗನೂರಿನ ಗುರುಬಸವ ಮಠದ ಕಾರ್ಯದರ್ಶಿ.

ಇವರ ಸುದ್ದಿಘೋಷ್ಠಿಯ ವಿಡಿಯೋ ನೋಡಿದ ಮೇಲೆ ಇವರು ವಚನ ದರ್ಶನ ಪುಸ್ತಕವನ್ನು ಸರಿಯಾಗಿ ಗ್ರಹಿಸಿದ್ದಾರೆ, ಅದರಲ್ಲಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿದ್ದಾರೆ ಅನಿಸಿತು.

ಸುದ್ದಿಘೋಷ್ಠಿಯಲ್ಲಿ ನಿವೇದಿತಾ ಅವರು ಹೇಳಿದ ಮಾತಿನ ಮುಖ್ಯಾಂಶಗಳು:

… ಬಸವಣ್ಣನವರು ಬಹಳ ಸ್ಪಷ್ಟತೆಯಿರುವ ಬಸವ ಧರ್ಮ ಕೊಟ್ಟರು. ಆದರೆ ವಚನ ದರ್ಶನ ಪುಸ್ತಕ ಬರೆದಿರುವವರು ‘ನೀವು ಅದನ್ನು ತಪ್ಪು ದೃಷ್ಟಿಯಿಂದ ನೋಡುತ್ತಾ ಇದ್ದೀರಾ ಅಂತ ಲಿಂಗಾಯತರ ತಲೆಯೊಳಗೆ ಹುಳ ಬಿಡುತ್ತ ಇದ್ದಾರೆ.’

ನಾವು ಯಾವುದೇ ಕನ್ನಡಕ ಹಾಕಿಕೊಂಡು ವಚನ ಸಾಹಿತ್ಯ ಓದಿಲ್ಲ, ಹೇಗೆ ಇದೆಯೋ ಅದೇ ರೀತಿ ಓದುತ್ತಾ ಬಂದಿದ್ದೀವಿ. ನಾಲಕ್ಕನೆ ಕ್ಲಾಸಿನ ಮಕ್ಕಳಿಗೆ ವಚನ ಕೊಟ್ಟರೆ ಅವರೂ ಸರಿಯಾಗೇ ಓದುತ್ತಾರೆ.

ಸಹಜ, ಸುಂದರ, ಸರಳ ಬಸವ ಧರ್ಮವನ್ನು ಎಲ್ಲರೂ ಮೆಚ್ಚಿಕೊಂಡರೆ ವೈದಿಕರ ಅಸ್ತಿತ್ವ ಉಳಿಯೋದಿಲ್ಲ. ಅದಕ್ಕೆ ನಮ್ಮ ದಾರಿಗೆ ಬಂದು, ಅವರ ದಾರಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ.

… ಎಷ್ಟೋ ಜನ ಲಿಂಗಾಯತರಿಗೆ ವಚನ ಸಾಹಿತ್ಯದ ಬಗ್ಗೆ ಗೊತ್ತಿಲ್ಲ. ಅಂತಹವರಿಗೆ ದಾರಿ ತಪ್ಪಿಸಲು ಜಿಲ್ಲೆ ಜಿಲ್ಲೆಗೆ ಹೋಗಿ ಪುಸ್ತಕದ ಲೋಕಾರ್ಪಣೆ ಮಾಡುತ್ತಿದ್ದಾರೆ.

ಪುಸ್ತಕ ನೋಡಿದರೆ ವಚನದ ಬಗ್ಗೆ, ಬಸವಣ್ಣನವರ ಬಗ್ಗೆ ಚೆನ್ನಾಗಿ ಬರೆದಿರಬೇಕು ಎಂಬ ಭಾವನೆ ಹುಟ್ಟಬಹುದು. ಆದರೆ ಯಾವುದು ಬಸವಣ್ಣ ಅಲ್ಲವೋ ಅದನ್ನೇ ಬಸವಣ್ಣ ಎಂದು ಬಿಂಬಿಸಲು ಇವರು ಹೊರಟ್ಟಿದ್ದಾರೆ.

ಬಸವಣ್ಣ ಮತ್ತು ಬೇರೆ ದೇವರುಗಳು ಒಂದೇ ಎನ್ನೋ ಭಾವನೆ ಹುಟ್ಟಿಸುತ್ತಿದ್ದಾರೆ.

ಅವರ ಪ್ರಕಾರ ಬಸವಣ್ಣ ವೈದಿಕತೆ ವಿರೋಧಿಸಲಿಲ್ಲ, ಹೊಸದಾಗಿ ಏನೂ ಹೇಳಲಿಲ್ಲ, ವೈದಿಕ ಶಿವನನ್ನ ಒಪ್ಪಿಕೊಂಡಿದ್ದರು.

ವಚನ ದರ್ಶನ ಪುಸ್ತಕ ಬರೆದಿರುವವರು ಹೇಳುತ್ತಿರುವುದು:

ವಚನಗಳಲ್ಲಿ ಸಾಮಾಜಿಕ ಕಳಕಳಿ ನೋಡುವುದು ಪಾಶ್ಚಿಮಾತ್ಯರ ಅನುಕರಣೆ, ಹಿಂದೂಗಳು ಕ್ಯಾಥೋಲಿಕ್ಕರ ತರಹ, ಲಿಂಗಾಯತರು ಪ್ರೊಟೆಸ್ಟೆಂಟ್ ರ ತರಹ, ಅಂದರೆ ಇಬ್ಬರೂ ಕ್ರೈಸ್ತರೇ. ಹಾಗೆಯೇ ಲಿಂಗಾಯತರು ಹಿಂದೂಗಳೇ. ಕೆಲವು ವಚನಗಳು ಮಾತ್ರ ವೈದಿಕತೆ ವಿರೋದಿಸುತ್ತವೆ….

ಇದಕೆಲ್ಲ ಸರಳವಾದ ಆದರೆ ತೀಕ್ಷ್ಣವಾದ ಉತ್ತರ ಕೊಟ್ಟಿದಾರೆ ನಿವೇದಿತಾ ಅವರು.

… ಬಸವಣ್ಣ ಹಿಂದೂ ಧರ್ಮ, ಬ್ರಾಹ್ಮಣತ್ವ ತಿರಸ್ಕರಿಸಿದರು, ವೈದಿಕರ ಶಿವ, ಕೈಲಾಸಗಳನ್ನು ಒಪ್ಪಲಿಲ್ಲ. ಬಸವಣ್ಣನವರ ಶಿವ ಅಕ್ಕನಂತವರೂ ಕಂಡ ನಿರಾಕಾರ, ನಿರ್ದೇಹಿ, ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಶಿವ.

ಕಡ್ಡಾಯವಾಗಿ ವೈದಿಕತೆ ವಿರುದ್ದ ಹುಟ್ಟಿದ ಧರ್ಮ ಲಿಂಗಾಯತ ಧರ್ಮ. ಪಾಶ್ಚಿಮಾತ್ಯರಲ್ಲಿ ಅರಿವು ಬರವುದಕ್ಕೆ ಮುಂಚೆಯೇ ಬಸವ ತತ್ವದ ಹೋರಾಟ ಶುರುವಾಗಿತ್ತು.

… ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವ ವಚನ ದರ್ಶನವನ್ನು ಪ್ರಶ್ನಿಸಿವುದು ನಮ್ಮ ಹಕ್ಕು. ಅದನ್ನು ಮುಟ್ಟುಗೋಲು ಹಾಕದಿದ್ದರೇ, ಹೋರಾಟ ಶುರು ಮಾಡುತ್ತೇವೆ.

ಇದು ನಾವೆಲ್ಲ ಇಂದು ಕೇಳಲೇಬೇಕಾಗಿರುವ, ಎಲ್ಲರಿಗೂ ಮುಟ್ಟಿಸಲೇಬೇಕಾಗಿರುವ ಮಾತು.

Share This Article
3 Comments
  • ತುಂಬಾ ಸ್ಪಷ್ಟವಾಗಿ ಮಾತನಾಡಿದ್ದೀರಿ ತಾಯಿ. ತಮ್ಮ ಮಾತಿನಲ್ಲಿ clarityಇದೆ. ಇದು ಎಲ್ಲರಿಗೂ ದೊರಕುವಂತಾಗಬೇಕು. ಹೆಚ್ಚು ಹೆಚ್ಚು ಜನಸಮೂಹವನ್ನು ಲಿಂಗಾಯತ ಧರ್ಮಕ್ಕೆ
    ಕರೆತರುವ ಮತ್ತು ಜಾತಿ ಸಂಕೋಲೆಯಿಂದ ಅವರನ್ನು ವಿಮುಕ್ತಗೊಳಿಸುವ ಕೆಲಸವಾಗಬೇಕು.

  • ಶ್ರೀಮತಿ ನಿವೇದಿತಾ ಅವರು ವಚನ ದರ್ಶನ ಪುಸ್ತಕದ ಸಾರ ಮತ್ತು ಉದ್ದೇಶದ ಬಗ್ಗೆ ಸರಿಯಾದ ಪ್ರತಿಕ್ರೀಯೆ ಮಾಡಿದ್ದಾರೆ. ಲಿಂಗಾಯತ ಧರ್ಮದ ಪ್ರತಿಪಾದಕ ಬಸವಣ್ಣ ಮತ್ತು ಅದು ವೈದಿಕ ಧರ್ಮದಿಂದ ಬಲು ದೂರ ಎಂಬುದರಲ್ಲಿ ಎರಡು ಮಾತಿಲ್ಲ. ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಅದು ನಮ್ಮ ಹಕ್ಕು.

Leave a Reply

Your email address will not be published. Required fields are marked *