ಚಿತ್ರದುರ್ಗ
ತಾಂತ್ರಿಕವಾಗಲ್ಲದ್ದಿದ್ದರೂ ತಾತ್ವಿಕವಾಗಿ ದಲಿತ ಮಠಗಳೂ ಲಿಂಗಾಯತ ಮಠಗಳೇ ಎಂದು ಮುರುಘಾ ಬಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಭಾನುವಾರ ಹೇಳಿದರು.
ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ‘ಬಸವ ಸಂಸ್ಕೃತಿ ಅಭಿಯಾನ’ದ ಅಂಗವಾಗಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶ್ರೀಗಳು ಆಶಯ ನುಡಿಗಳನ್ನು ಹೇಳಿದರು.
“ದಲಿತ ಮಠಾಧೀಶರ ಕೊರಳಲ್ಲಿ ಇಷ್ಟಲಿಂಗವಿದೆ, ಅವರ ಮಠಗಳಲ್ಲೂ ದಿನಾ ಪೂಜೆ ನಡೆಯುತ್ತದೆ, ಆ ಪೂಜೆಗಳಲ್ಲಿ ಬಸವಣ್ಣನಿದ್ದಾನೆ, ಕೈಯಲ್ಲಿ ಇಷ್ಟಲಿಂಗವಿದೆ. ಅವರೆಲ್ಲರೂ ಲಿಂಗಾಯತರೇ ಅಂತ ಅರ್ಥ ಮಾಡಿಕೊಳ್ಳಿ,” ಎಂದು ಶ್ರೀಗಳು ಹೇಳಿದರು.
“ಅವರ ಸಮುದಾಯದ ಸಂಘಟನೆ, ಶಿಕ್ಷಣ, ಸಾಮಾಜಿಕ, ಆರ್ಥಿಕ ಉನ್ನತಿಗೋಸ್ಕರ, ಸಾಮಾಜಿಕ ನ್ಯಾಯ ಕೊಡಿಸುವ ಕೊಡುವ ನಿಟ್ಟಿನಲ್ಲಿ ಅವರು ತಾಂತ್ರಿಕವಾಗಿ ಲಿಂಗಾಯತರಾಗಿಲ್ಲದೇ ಇರಬಹುದು, ಆದರೆ ತಾತ್ವಿಕವಾಗಿ ಲಿಂಗಾಯತರು,” ಎಂದು ಹೇಳಿದರು.
ಅಭಿಯಾನದಲ್ಲಿ ರಾಜ್ಯವಿಡೀ ಸಂಚರಿಸುತ್ತಿರುವ ಲಿಂಗಾಯತ ಮಠಾಧೀಶರ ಬಗ್ಗೆ ಮಾತನಾಡುತ್ತ “ಎಲ್ಲಾ ಪೂಜ್ಯರು ತಮ್ಮ ಮಠಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಬಿಟ್ಟು ಅಪ್ಪ ಬಸವಣ್ಣನವರ ಸಂಸ್ಕೃತಿಯನ್ನ ನಾಡಿನ ಉದ್ದಕ್ಕೂ ಪಸರಿಸಬೇಕೆಂತ ಪಣ ತೊಟ್ಟು ಬಸವ ಸಂಸ್ಕೃತಿ ಅಭಿಯಾನ ಶುರು ಮಾಡಿದ್ದಾರೆ.
ಜಾತಿಯ ಬಚ್ಚಲಿನಿಂದ ಲಿಂಗಾಯತ ಕಿತ್ತು ಒಗೆಯಬೇಕು,
ಧರ್ಮದ ಪೀಠದಲ್ಲಿ ಲಿಂಗಾಯತ ಧರ್ಮ ಕೂಡಬೇಕು ಅನ್ನುವ ಸಂದೇಶ ಪರಮ ಪೂಜ್ಯರು ಕೊಡ್ತಾ ಇದ್ದಾರೆ. ನಿರ್ದಿಷ್ಟ ಸಮುದಾಯಗಳ ಮಠಗಳೆಲ್ಲಾ ಸೇರಿ ಮಾಡಬೇಕು ಅಂತ ಹೇಳಿದ್ದರು,” ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಚಿಂತಕ ಡಾ. ಜೆ.ಎಸ್. ಪಾಟೀಲ, ಸಾಹಿತಿ ಎಸ್. ಜಿ. ಸಿದ್ಧರಾಮಯ್ಯ ಉಪನ್ಯಾಸ ನೀಡಿದರು.
ಹುಲಸೂರು ಶ್ರೀಗಳು, ಡಾ. ಗಂಗಾ ಮಾತಾಜಿ, ಡಾ. ಬಸವಲಿಂಗ ಪಟ್ಟದ್ದೇವರು, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಡಾ. ತೋಂಟದ ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿದರು.
ತಮ್ಮ ಸಮರ್ಥನೆ ಸಮಂಜಸ ಅನಿಸುತ್ತಿಲ್ಲ ಪುಣ್ಯರೆ, ಮಠಾಧೀಶರ ಕೊರಲ್ಲಿ ಲಿಂಗಯ್ಯನಿದ್ದರೆ ಸಾಲದು, ಮಠದಲ್ಲಿ ಅಪ್ಪ ಬಸವಣ್ಣರಿದ್ದರೆ ಸಾಲದು. ಅದು ಸಮುದಾಯಕ್ಕೆ ಹಬ್ಬಲೇಬೇಕು ಅಪ್ಪೋರೆ. ಅದೇನೇ ಆರ್ಥಿಕ, ಸಾಮಾಜಿಕ ಸಮಸ್ಯೆಗಳಿರಲಿ ಒಂದು ತಿಂಗಳಲ್ಲಿ 5 ರಿಂದ 10 ಜನಾರನ್ನಾದರೂ ಬಸವ ವಾಹಿನಿಗೆ ತರುವ ಪ್ರಯಂತ ಆಗಬೇಕು. ಅವರಿಗೆ ನಾವು ಲಿಂಗಾಯತರೆಂಬ ಭಾವನೆ ಮೂಡಲು ನಿಜಾಚಾರಣೆಗಳನ್ನು ಮಠದಲ್ಲಿ ಅಷ್ಟೇ ಅಲ್ಲ ಭಕ್ತರ ಮನೆಗಳಲ್ಲಿ ಆಯಾ ಪೂಜ್ಯರು ಒತ್ತು ಕೊಟ್ಟರೆ ತತ್ವ ಗಟ್ಟುಯಾಗುತ್ತೆ ಅಪ್ಪೋರೆ.
ನನ್ನ ಪ್ರಶ್ನೆ ಮತ್ತು ಮಾತು ಅತಿರೇಕವೆನಿಸಿದಲ್ಲಿ ಕ್ಷಮೆ ಇರಲಿ.
ಪುಣ್ಯರೆ ಬದಲಾಗಿ ಪೂಜ್ಯರೆ ಆಗಬೇಕು
ಪ್ರಯಂತ ಬದಲಾಗಿ ಪ್ರಯತ್ನ ಆಗಬೇಕು. ತಪ್ಪಿಗಾಗಿ ಕ್ಷಮೆ ಇರಲಿ