ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿಗೆ ಅಧಿಕೃತ ಸಮಿತಿಯಿಂದಲೇ ಒಮ್ಮತದ ವಿರೋಧ
ಬಸವಕಲ್ಯಾಣ
ವಿಜಯದಶಮಿಯಂದು ಬಸವಕಲ್ಯಾಣದಲ್ಲಿ ಆಯೋಜಿತವಾಗಿರುವ ರಂಭಾಪುರಿ ಶ್ರೀಗಳ ‘ದಸರಾ ದರ್ಬಾರ್’ ಕಾರ್ಯಕ್ರಮಕ್ಕೆ ಹೋಗದಿರಲು ಹಾರಕೂಡ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರು ನಿರ್ಧರಿಸಿದ್ದಾರೆ.
ಮಾಧ್ಯಮಗಳಿಗೆ ಕಳಿಸಿರುವ ಪ್ರಕಟಣೆಯಲ್ಲಿ “ಕೋಟ್ಯಂತರ ಬಸವ ಭಕ್ತರಿಗೂ ಮತ್ತು ಮಾನವೀಯತೆಯಲ್ಲಿ ನಂಬಿಕೆ ಇಟ್ಟ ಜನರ ಮನಸ್ಸುಗಳನ್ನು ಘಾಸಿಗೊಳಿಸಬಾರದೆಂದು ದಸರಾ ದರ್ಬಾರದಿಂದ ನಾವು ದೂರ ಸರಿದಿದ್ದೇವೆ,” ಎಂದು ಹೇಳಿದ್ದಾರೆ.
ಇಂದು ಬಸವ ಮೀಡಿಯಾ ಜೊತೆ ಮಾತನಾಡಿದ ಹಾರಕೂಡ ಶ್ರೀಗಳು ತಮ್ಮ ಮಹತ್ವದ ನಿರ್ಧಾರದ ಹಿಂದಿನ ಬೆಳವಣಿಗೆಗಳನ್ನು ವಿವರಿಸಿದರು.
ಎರಡು ತಿಂಗಳ ಹಿಂದೆ ರಂಭಾಪುರಿ ಶ್ರೀಗಳ ಕಾರ್ಯಕ್ರಮವನ್ನು ‘ಶಾಂತಿ’, ‘ಸಮನ್ವಯತೆ’ಯಿಂದ ಬಸವಕಲ್ಯಾಣದಲ್ಲಿ ಮಾಡಲು ಒಂದು ಸಮಿತಿ ರಚನೆಯಾಯಿತು. ಇದರ ಅಧ್ಯಕ್ಷರಾಗಿ ಸಚಿವ ಈಶ್ವರ ಖಂಡ್ರೆ, ಕಾರ್ಯಾಧ್ಯಕ್ಷರಾಗಿ ಶಾಸಕ ಶರಣು ಸಲಗರ ಹಾಗೂ ಗೌರವ ಅಧ್ಯಕ್ಷರಾಗಿ ಹಾರಕೂಡ ಶ್ರೀಗಳು ಆಯ್ಕೆಯಾದರು.
ಅದಾದ ಕೆಲವು ದಿನಗಳ ನಂತರ ಸಮಿತಿಯ ಸದಸ್ಯರು ರಂಭಾಪುರಿ ಶ್ರೀಗಳ ಹತ್ತಿರ ಹೋಗಿ “ಬಸವ ಕಲ್ಯಾಣ ಸ್ಥಳ ಸೂಕ್ಶ್ಮವಿದೆ, ಬಸವಣ್ಣನವರ ನಾಡಿನಲ್ಲಿ ನಿಮ್ಮ ಹೊತ್ತುಕೊಂಡು ಅಡ್ಡಪಲ್ಲಕ್ಕಿ ಮಾಡುವುದು ಬೇಡ, ವಾಹನದಲ್ಲಿ ಕೂರಿಸಿ ಮಾಡೋಣ,” ಎಂದು ಹೇಳಿದರು.
ಆದರೆ ರಂಭಾಪುರಿ ಶ್ರೀಗಳು ಇದಕ್ಕೆ ಒಪ್ಪದೇ ನಮ್ಮ ಪರಂಪರೆಯ ಪ್ರಕಾರ ಭಕ್ತರೇ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗಬೇಕು ಅಂತ ಹೇಳಿದರು.
ಆಗಸ್ಟ್ 10ರಂದು ಹಾರಕೂಡ ಮಠದಲ್ಲಿ ಖಂಡ್ರೆ, ಸಲಗರ, ಹಾರಕೂಡ ಶ್ರೀಗಳ ನೇತೃತ್ವದಲ್ಲಿ ಸಮಿತಿಯ ಸದಸ್ಯರ ಸಭೆ ಸೇರಿಸಿ ಎಲ್ಲರ ಅಭಿಪ್ರಾಯ ಪಡೆಯಲಾಯಿತು.
ಸಮಿತಿಯ ಎಲ್ಲಾ 40 ಸದಸ್ಯರು ಒಮ್ಮತದಿಂದ ಪಲ್ಲಕ್ಕಿಯನ್ನು ಭಕ್ತರ ಹೆಗಲ ಮೇಲೆ ಮಾಡದೆ ಅಲಂಕಾರಿತ ವಾಹನದಲ್ಲಿ ಶಾಂತಿಯಿಂದ ನಡೆಸಲು ತೀರ್ಮಾನಿಸಿದರು. ಈ ವಿಷಯದಲ್ಲಿ ರೆಸಲ್ಯೂಷನ್ ಕೂಡ ಮಂಡಿಸಿ ಎಲ್ಲರ ಸಹಿ ಪಡೆಯಲಾಯಿತು.
ಆದರೆ ಆಗಸ್ಟ್ 13 ತಡೋಳಾ ಶ್ರೀಗಳ ನೇತೃತ್ವದಲ್ಲಿ ಬೀದರ್, ಕಲಬುರ್ಗಿಯ 20 ಶ್ರೀಗಳು ಹಾರಕೂಡ ಮಠಕ್ಕೆ ಆಗಮಿಸಿ ಬಸವಕಲ್ಯಾಣದಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿಯನ್ನು ಭಕ್ತರ ಹೆಗಲ ಮೇಲೆಯೇ ಮಾಡುತ್ತೇವೆ ಎಂದು ಹಠ ಹಿಡಿದರು.
ಆಗ ಹಾರಕೂಡ ಶ್ರೀಗಳು “ನೀವು ಪಲ್ಲಕ್ಕಿ ಹೊತ್ತುಕೊಂಡು ನಡಿತೀವಿ ಅಂದ್ರ ನಾವು ಕಾರ್ಯಕ್ರಮದಿಂದ ದೂರ ಸರಿತೀವಿ. ನಿಮ್ಮದು ನೀವು ಮಾಡಿಕೊಳ್ಳಿ ಅಂತ,” ಹೇಳಿದರು.
“ನಮ್ಮ ಮಠ ಮತ್ತು ನಾನು ಎಂದೂ ಯಾರಿಗೂ ಮನಸ್ಸು ನೋಯಿಸಿಲ್ಲ ಮತ್ತು ನೋಯಿಸುವುದಿಲ್ಲ, ಅವರ ಪರಂಪರೆ ಬೇಡ ಎನ್ನಲು ನಮಗೆ ಹಕ್ಕಿಲ್ಲ, ಅವರು ಆಚರಿಸುವ ದಸರಾ ದರ್ಬಾರಕ್ಕೆ ನಮ್ಮ ಶುಭ ಹಾರೈಕೆ ಇರುತ್ತದೆ,” ಎಂದು ಹಾರಕೂಡ ಶ್ರೀಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.
“ಸಮಾನತೆ ಕೊಟ್ಟ ಕಲ್ಯಾಣದ ನೆಲದಲ್ಲಿ ಬಸವಾದಿ ಶರಣರಿಗೆ ಅವಮಾನ ಮಾಡುವ ಅಡ್ಡಪಲ್ಲಕಿ ಮಾಡುವುದು ಮಾನವೀಯತೆಯ ದೃಷ್ಟಿಯಿಂದ ಸೂಕ್ತವಲ್ಲ ಮತ್ತು ಅದರಿಂದ ದೂರ ಸರಿದಿದ್ದೇನೆ ಎಂದು ಹಾರಕೂಡ ಶ್ರೀಗಳು ಹೇಳಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದು,” ಬಸವಕಲ್ಯಾಣ ರಾಷ್ಟ್ರೀಯ ಬಸವದಳದ ಅಧ್ಯಕ್ಷ ರವಿಂದ್ರ ಕೋಳಕುರ ಹೇಳಿದ್ದಾರೆ.
ಅಡ್ಡ ಪಲ್ಲಕ್ಕಿಯನ್ನು ವಿರೋಧಿಸಿ ಖಂಡ್ರೆ, ಸಲಗರ ಮತ್ತು ಸಮಿತಿಯ ಎಲ್ಲಾ ಸದಸ್ಯರು ಸಹಿ ಹಾಕಿದ್ದಾರೆ. ಹಾರಕೂಡ ಶ್ರೀಗಳಂತೆ ಅವರ ನಿಲುವು ಕೂಡ ಬದಲಾಗುತ್ತದೆಯೇ ಎಂದು ಬಸವ ಭಕ್ತರು ಕಾದು ನೋಡುತ್ತಿದ್ದಾರೆ.
Mostly ಪ್ರಸಾದ ಬಂದಿಲ್ಲಾ.
ಅಡ್ಡ ಪಲ್ಲಕ್ಕಿಯ ವಿಕೃತ ಮನೋಭಾವ ಬಸವ ಕಲ್ಯಾಣ ದಲ್ಲಿ ಏಕೆ? ಇಂಥವರು ತಮ್ಮ ಅಡ್ಡ ಪಲ್ಲಕ್ಕಿ ಪರಂಪರೆಯನ್ನು ತಮ್ಮ ಮಠದಲ್ಲಿ ಇರಿಸಬೇಕು. ಬಸವಭಕ್ತರಿಗೆ ನೋವಾಗುವ ಕೆಲಸ ಇವರು ಮಾಡುತ್ತಿದ್ದಾರೆ
ಅಡ್ಡ ಪಲ್ಲಕ್ಕಿ ಈ ಬಸವನ ನೆಲದಲ್ಲಿ ಅಂದ್ರೆ ನನಗೆ ಬಹಳ ಬಹಳ ನೋವಾಯಿತು.ರಂಭಾಪುರಿಯವರ ವೀರಶೈವ ಆಚರಣೆಗಳು ಅವೈಜ್ಞಾನಿಕ ಇತೀಹಾಸದ ಅರಿವುಗಳ ಮೌಢ್ಯ ಗೊಂಚಲು ಪುರಾಣ, ಪೌರಾಣಿಕ ಕಾವ್ಯ,ಕತೆಯಾದಾರಿತ ದೈವಗಳೆ ಇವರ ಜೀವನಸಾಗಿಸಲೂ ಮಾಡಿಕೊಂಡ ಬಂಡವಾಳ.ಇದನ್ನು ಪ್ರತಿಭಟಿಸಲೆಬೇಕು .ಅಲ್ಲಿ ಅವರು ಕಾಲು ಇಡಲು ಬಿಡಬಾರದು ಖಂಡ್ರೆ ತವರಿಗೆ ಅನುಮಾನ ಮಾಡುವ ಇಂತ ಕ್ಯಾಮಿಗಳನ್ನು ಸಮಾಜ ಬಹಿಷ್ಕಾರ ಮಾಡಬೇಕು.
ಕಾಲಕ್ಕೆ ತಕ್ಕಂತೆ ಬದಲಾಗುವುದೇ ಪ್ರಕೃತಿಯ ನಿಯಮ ಅದರಂತೆ ಭಕ್ತರ ಮನ ನೋಯದಂತೆ ಸರಿಪಡಿಸುವುದು ಒಳ್ಳೆಯದು
ಹಾರಕೂಡ ಪರಮ ಪೂಜ್ಯರಿಗೆ ಅನಂತಕೋಟಿ ಶರಣು ಶರಣಾರ್ಥಿಗಳು.🌹🌹🙏🙏🙏🙏🙏.
ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಅಡ್ಡಿ ಬಸವಕಲ್ಯಾಣದಲ್ಲಿ ಸ್ವಾಗತ
ಮಾನವ ಧರ್ಮಕ್ಕೆ ಜಯವಾಗಲಿ ಎಂದು ಮಾನವನ ಹೆಗಲ ಮೇಲೆ ಸವಾರಿ ಮಾಡುತ್ತಿರುವ ಇವರಿಗೆ ನಾಚಿಕೆಯಾಗುವುದಿಲ್ಲವೇ
ದಸರಾ ಧಾರಬರಾಗಲಿ ಅಡ್ಡಪಾಲ್ಲಾಕಿಯಾಗಲಿ ಬಸವಣ್ಣನವರ ನೆಲದಲ್ಲಿ ನಡೆಯಲು ಅವಕಾಶವನ್ನು ಕೊಡುವದಿಲ್ಲ.
ನಿಜವಾಗಿ ಮತ್ತು ನ್ಯಾಯವಾಗಿ ನೋಡಿದರೆ ಶ್ಯಾಮನೂರು ಖಂಡ್ರೆ ಬಿದರಿ ಮತ್ತು ಯತ್ನಾಳ ರಂಭಾಪುರಿಗಳ ಅಡ್ಡಪಲ್ಲಕ್ಕಿಯನ್ನು ಬಸವ ಕಲ್ಯಾಣದಲ್ಲಿ ಹೊತ್ತು ನಡೆಯಬೇಕು….! ಆಗಲೇ ಅದಕ್ಕೊಂದು ಕಳೆ…!!
ರಂಬಾಪುರಿ ಸ್ವಾಮಿ ಸ್ವಲ್ಪ ಹಠಮಾರಿ! ಈ ದರಬಾರು ನಡೆಸುವುದರಲ್ಲಿ ಯಶಸ್ವಿ ಆದರೆ ಸಮಾಜದ ದಿಕ್ಕು ತಪ್ಪಿಸುವ ಅವರ ಕಾರ್ಯಕ್ರಮ ಸುಗಮವಾಗಲಿದೆ. ನೋಡಿ ಸುಮಾರು 20 ಆಚಾರ್ಯ ಸ್ವಾಮಿಗಳು ಕೂಡಿ ಹಾರಕೂಡ ಶ್ರೀಗಳ ಮೇಲೆ ಒತ್ತಡ ಹಾಕ್ತಾರೆ ಅಂದರೆ..!!!
ತಾಡೋಲ ಮಠದ ಈ ಸ್ವಾಮಿಗಳು ಬೇಡಜಂಗಮ ಪದವಿಗಾಗಿ ಬೀದರ ಜೆಲ್ಲೆಯಲ್ಲಿ ಧೂಳು ಎಬ್ಬಿಸಿ ಈಗ ಆಡ್ ಪಲ್ಲಕಿ ಧೂಳು ಎಬ್ಬಿಸಲು ಹೊರಟಿದ್ದಾರೆ. ನಾಚಿಕೆಯಾಗಬೇಕು.
ಆರಮನೆ, ರಾಜ ಗುರುಗಳು ಅಧಿಕಾರ, ಅರಸೋತ್ತಗೆ ಕಳೆದು ೮೦ ದಶಕಗಳೇ ಕಳೆದವು. ಎತ್ತಿನ ಬಂಡಿ ಹೊಡೆದು ಬಿಟ್ಟಿವೆ. ಕುದುರೆಗಳು ಟಾಂಗಾ ಎಳೆಯುವುದು ಬಿಟ್ಟಿವೆ. ಆದರೆ! ನಮ್ಮ ಗುಲಾಮಿ ಮಾನವರು ಮಲ ಹೊರುವ ಕೆಲಸದಿಂದ ಮುಕ್ತಿ ಪಡೆಯುತ್ತಿದ್ದರು. ಆದರೆ ಪಲ್ಲಕ್ಕಿ ಮೆರವಣಿಗೆ ಮಾಡುವುದು ಬಿಟ್ಟಿಲ್ಲ. ಎಂಥ ವಿಪರ್ಯಾಸ? ಬಸವ ಬಳಗದವರು ಪ್ರತಿ ಕಾರ್ಯಕ್ರಮದಲ್ಲೂ , ಸ್ವಾಮೀಜಿ ಗಳು ವಿರೋಧಿಸಿ ಪೊಲೀಸ್ ಅಧಿಕಾರಿಗಳು ಸಹಾಯ ಪಡೆದು ನಿಲ್ಲಿಸಬೇಕು.🌼🌼👏👏
ಶರಣು ಶರಣಾರ್ಥಿ.
ಬಸವ ಭಕ್ತರಿಗೆ ಹಾಗೂ ಬಸವ ಧರ್ಮಕ್ಕೆ ದ್ರೋಹ ಬಗೆಯುವ ಇವರೆಂತ ಸ್ವಾಮಿ ಮೋಸ ಮಾಡುವ ಕಾಲ ಮುಗಿದು ಹೋಗಿ ಬಹಳ ದಿವಸ ಆಗಿದೆ ವೀರಶೈವ ಪದ ಮಾಯವಾಗಿ ಲಿಂಗಾಯತ ಬಸವ ಧರ್ಮ ಮಾತ್ರ ಶಾಶ್ವತ, ಇದು ಸರ್ವ ಕಾಲಿಕ ಶತಶಿದ್ದ ನೆನಪಿರಲಿ. ಜೈ ಲಿಂಗಾಯತ ಧರ್ಮಕ್ಕೆ ಜಯವಾಗಲಿ, ಜೈ ಶ್ರೀ ಬಸವೇಶ್ವರ.🌹👍👍👍👍👑💪
ಇನೊಬ್ಬರ ಹೆಗಲ ಮೇಲೆ ಮೆರವಣಿಗೆ ಮಾಡಿಕೊಳ್ಳುವ ಇವರ ಮೇರವಣಿ ಗೆ ಯಾಕ್ರೀ ಯಾರಿಗಾಗಿ ಮಾಡ್ತೀರಾ ❓❓❓