ವಿಜಯಪುರ
ಸೊಲ್ಲಾಪುರ- ವಿಜಯಪುರದ ಮಹಾಮಾರ್ಗದಲ್ಲಿಯ ವಿದ್ಯಾಗಿರಿಯ ವಿದ್ಯಾವಿಕಾಸ ಸೌಧದ ಪತಂಜಲಿ ಸಭಾಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ೭ನೇ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಭಾನುವಾರ ನಡೆಯಿತು.
ಸಾನಿಧ್ಯ ವಹಿಸಿದ್ದ ಮನಗೂಳಿಯ ವಿರತೀಶಾನಂದ ಶ್ರೀಗಳು ಬಸವಣ್ಣನ ಕ್ರಾಂತಿಭೂಮಿ ಬಸವಕಲ್ಯಾಣದಲ್ಲಿ ದಸರಾ ದರ್ಬಾರ್-ಅಡ್ಡಪಲ್ಲಕ್ಕಿ ಉತ್ಸವಗಳಂತಹ ಅಮಾನವೀಯ ಕಾರ್ಯಕ್ರಮಗಳು ನಡೆಯಬಾರದು. ಅದಕ್ಕಾಗಿ ಲಿಂಗಾಯತರು ಉಗ್ರವಾಗಿ ಪ್ರತಿಭಟಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಮಾರ್ಗದರ್ಶನ ನೀಡುತ್ತಿದ್ದ ಅವರು, ಕೆಲವೇ ವರ್ಷಗಳಲ್ಲಿ ಮಹಾಸಭಾ ವ್ಯಾಪಕವಾಗಿ ಬೆಳೆಯುತ್ತಿದೆ. ಕರ್ನಾಟಕ ಬಿಟ್ಟು ಈಗ ಮಹಾರಾಷ್ಟ್ರ, ಆಂಧ್ರ, ತಮಿಳನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ತನ್ನ ಸಂಘಟನಾ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತ, ಸಮಾಜ ಬಾಂಧವರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದು, ಜನರಿಗೆ ಈಗ ಲಿಂಗಾಯತ ಇದೊಂದು ಸ್ವತಂತ್ರ ಧರ್ಮ ಎಂದು ಮನವರಿಕೆಯಾಗುತ್ತಿದೆ ಎಂದರು.
ಸೆ.೨೨ ರಿಂದ ರಾಜ್ಯದಲ್ಲಿ ಆರಂಭವಾಗುವ ಮತ್ತು ಮುಂದಿನ ವರ್ಷ ದೇಶದಲ್ಲಿ ಆರಂಭವಾಗುವ ಜಾತಿ ಜನಗಣತಿಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ಲಿಂಗಾಯತ ಮತ್ತು ಜಾತಿಯ ಕಾಲಂನಲ್ಲಿ ತಮ್ಮ ಜಾತಿಯನ್ನು ನೋಂದಾಯಿಸಬೇಕೆಂದು ಹೇಳಿದರು.

ಬಸವ ಸಂಸ್ಕೃತಿ ಅಭಿಯಾನದಲ್ಲಿ ಬಸವಾಭಿಮಾನಿಗಳು, ಲಿಂಗಾಯತರು ಅದರಲ್ಲಿ ಪಾಲ್ಗೊಂಡು ಅದನ್ನು ಅತ್ಯಂತ ಯಶಸ್ವಿ ಗೊಳಿಸಬೇಕೆಂದು ಹೇಳಿದರು. ಮಹಾಸಭಾ ಲಿಂಗಾಯತ ಸಮಾಜ ಹಿತದ ಕಾರ್ಯಕ್ರಮಗಳನ್ನು ಹಾಕಿಕೊಂಡು, ಸಮಾಜದ ಸಮಸ್ಯೆಗಳು ಬಿಡಿಸುವಲ್ಲಿ ಸಕ್ರೀಯವಾಗಿದೆ ಎಂದು ಜಾಮದಾರ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಉಪಾಧ್ಯಕ್ಷ ನಿವೃತ್ತ ನ್ಯಾಮೂರ್ತಿ ಕೆಂಪಗೌಡರು ಹಲವಾರು ನಿರ್ಣಯಗಳನ್ನು ಮಂಡಿಸಿದರು. ಅದಕ್ಕೆ ಮಹಾಸಭಾದ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಅನುಮೋದನೆ ನೀಡಿದರು.
ಮಹಾರಾಷ್ಟ್ರ ರಾಜ್ಯದ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ ತಮ್ಮ ಅಭಿಪ್ರಾಯ ಮಂಡನೆಯಲ್ಲಿ ಕೂಡಲಸಂಗಮದಿಂದ ಮಂಗಳವೇಡೆ, ಅಲ್ಲಿಂದ ಸೊಲ್ಲಾಪುರ ಮಾರ್ಗವಾಗಿ ಬಸವಕಲ್ಯಾಣದವರೆಗೆ ಕಾರಿಡಾರ ರಸ್ತೆ ನಿರ್ಮಾಣವಾಗಬೇಕು. ಮಂಗಳವೇಡೆಯಲ್ಲಿ ನಿರ್ಮಾಣವಾಗುವ ಬಸವಣ್ಣನವರ ಸ್ಮಾರಕ್ಕೆ ಮಹಾರಾಷ್ಟ್ರ ಸರಕಾರ ಸ್ಥಳ ನಿಶ್ಚಯಮಾಡಿದೆ, ಅದಕ್ಕೆ ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಭೇಟಿ ಮಾಡಿ ಅದನ್ನು ಬಸವಕಲ್ಯಾಣದ ಅನುಭವ ಮಂಟಪದ ಮಾದರಿಯಲ್ಲಿ ನಿರ್ಮಾಣವಾಗಲು ಸಲಹೆ ನೀಡಬೇಕೆಂದು ವಿನಂತಿಸಿದರು.

ಬಸವ ಸಮಿತಿಯ ಅರವಿಂದ ಜತ್ತಿ, ಬೆಳಗಾವಿಯ ಬಸವರಾಜ ರೊಟ್ಟಿ, ಅಶೋಕ ಮಳಗಲಿ, ಪ್ರೊ. ವೀರಭದ್ರಯ್ಯ, ವಿಜಯಪುರ ಅಧ್ಯಕ್ಷ ಬಸವನಗೌಡ ಹರನಾಳ, ಕಾರ್ಯಾಧ್ಯಕ್ಷ ಎಸ್. ಹೆಚ್ ನಾಡಗೌಡ, ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಂಡಗುಳಿ, ಸೊಲ್ಲಾಪುರದ ಪರಮಾನಂದ ಅಲಗೊಂಡ, ರಾಜಶ್ರೀ ಥಳಂಗೆ, ಮಹಾರಾಷ್ಟ್ರ ರಾಜ್ಯಾಧ್ಯಕ್ಷ ರಾಜಶೇಖರ ತಂಬಾಕೆ, ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ, ಬಸವರಾಜ ಕಣಜೆ, ಸಂಗಣ್ಣ ಗೆಜ್ಜಿ, ಶಿವಾನಂದ ಗೋಗಾವ, ಚಂದ್ರಶೇಖರ ಗುಡಸಿ, ಟಿ ಗಂಗಾಧರ, ಮಹಾದೇವಿ ಗೋಕಾಕ, ಪುಷ್ಪ ಸೇರಿದಂತೆ ರಾಜ್ಯದ ಎಲ್ಲ ಘಟಕದ ಅಧ್ಯಕ್ಷರು, ಪದಾಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ವಿಜಯಪುರ ಘಟಕದ ಕಾರ್ಯಾಧ್ಯಕ್ಷ ಎಸ್.ಹೆಚ್. ನಾಡಗೌಡ ವೇದಿಕೆಯಲ್ಲಿದ್ದವರಿಗೆ ಟೊಪ್ಪಿಗೆ, ರುದ್ರಾಕ್ಷಿ, ವಿಭೂತಿ ನೀಡಿ ಗೌರವಿಸಿದರು.

ಚಿತ್ರದುರ್ಗದಲ್ಲಿ ನಡೆದ ೬ ನೇ ಸಭೆಯ ನಡುವಳಿಗಳನ್ನು ಓದಿ ಧೃಢಿಕರಿಸಲಾಯಿತು. ಡಾ. ಶಿವಾನಂದ ಜಾಮದಾರ ಬರೆದ ‘ಅನುಭವ ಮಂಟಪ ಕಟ್ಟಡ ಮುಗಿದ ನಂತರ ಮುಂದೇನು?’ ಪುಸ್ತಕ ಬಿಡುಗಡೆ ಮಾಡಲಾಯಿತು. ಈ ಪುಸ್ತಕಕ್ಕೆ ದಾಸೋಹ ಮಾಡಿದ ಹೈದ್ರಾಬಾದದ ಪರಮೇಶ್ವರ ಕಾಗಿನೆಲೆ ಅವರನ್ನು ಗೌರವಿಸಲಾಯಿತು .
ಸಭೆಯಲ್ಲಿ ನಿರ್ಣಯಿಸಿದ ವಿಷಯಗಳು
ಜಾಗತಿಕ ಲಿಂಗಾಯತ ಮಹಾಸಭಾವು ಪ್ರಾರಂಭದಿಂದ ನಡೆದು ಬಂದ ಹೆಜ್ಜೆಗಳು ಹಾಗೂ ಪ್ರಗತಿಯ ವಿವರಗಳು ವಿವರಿಸುವದು. ಮಹಾಸಭೆಗೆ ಹೆಚ್ಚಿನ ಸದಸ್ಯತ್ವ ಮಾಡುವದು. ಗೌರವಾನ್ವಿತ ನ್ಯಾ. ನಾಗಮೋಹನದಾಸ ವರದಿಯನ್ನು ರಾಜ್ಯ ಸರಕಾರ ಮರುಪರಿಶೀಲಿಸಿ ಕೇಂದ್ರ ಸರಕಾರಕ್ಕೆ ಮರು ಶಿಫಾರಸ್ಸು ಮಾಡಲು ಮನವಿ ಮಾಡಿಸುವದು. ೨೦೨೫-೨೬ನೇ ಸಾಲಿನಲ್ಲಿ ಒಂದಾದರೂ ವಿಶೇಷ ಕಾರ್ಯಕ್ರಮ ನಡೆಸುವದು. ನಾಡಿನಾದ್ಯಂತ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸುವದು. ಮಹಾಸಭಾದ ಆನಲೈನ್ ಮಾಸಿಕ ಪತ್ರಿಕೆ ಇಂಗ್ಲೀಷಿನಲ್ಲಿ ಪ್ರಕಟಿಸುವದು. ಲಿಂಗಾಯತ ವಧು-ವರರ ಕೇಂದ್ರ ಸ್ಥಾಪಿಸಲು ವೆಬ್ ಸೈಟ್ ಸ್ಥಾಪಿಸುವದು. ಮಹಾಸಭಾದ ಐದು ವರ್ಷಗಳ ಸಾಧನೆಯ ಕಿರುಹೊತ್ತಿಗೆ ಪ್ರಕಟಿಸುವದು.
ಬಸವಕಲ್ಯಾಣದ ಲಿಂಗಾಯತ ಮಠಾಧೀಶರ ಒಕ್ಕೂಟದ ವತಿಯಿಂದಲೇ ಆ ರೂಡಿ ಜೀವಂತವಾಗಿ ಉಳಿಯಲು ಕಾರಣ ಆದರು.. ..
ದಸರಾ ದರ್ಬಾರ್ ದ ಕುರಿತ ವೀರೋದ ಹೋರಾಟ ಮಾಡುವ ಸಭೆ .. ರಾತ್ರೋರಾತ್ರಿ ಸಭೆ ರದ್ಧು ಪಡಿಸಿದರು … ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ?