ದಾವಣಗೆರೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಸಂಸ್ಕೃತಿ ಅಭಿಯಾನದ 15ನೇ ದಿನ

Contents
ಕಲ್ಯಾಣ ಗೀತೆಯೊಂದಿಗೆ ಸಮಾವೇಶ ಮಂಗಲ.ಆಶೀರ್ವಚನಪೂಜ್ಯ ಶರಣಬಸವ ದೇವರಿಂದ ಅನುಭಾವಕೆ. ನೀಲಾ ಅನುಭಾವಜ್ಯೋತಿ ಬೆಳಗಿಸಿ ಸಮಾವೇಶದ ಉದ್ಘಾಟನೆಸಾರ್ವಜನಿಕ ಸಮಾವೇಶ ಆರಂಭಸಾಮರಸ್ಯ ನಡಿಗೆಧನ್ಯವಾದ ಲಿಂಗಾನಂದ ಕಮ್ಮತ್ತಹಳ್ಳಿ, ಹನುಮಂತಪ್ಪ ಕರೂರಸಂವಾದ ಮುಕ್ತಾಯಫೋಟೋಗಳಲ್ಲಿ ಸಂವಾದಪ್ರಶ್ನೆ: ಎಲ್ಲರನ್ನೂ ಸಮಾನವಾಗಿ ಕಾಣುವ ಲಿಂಗಾಯತ ಧರ್ಮ ಯಾಕೆ ಮುನ್ನಡೆಗೆ ಬರುತ್ತಿಲ್ಲ?ಪ್ರಶ್ನೆ: ವಿಶ್ವಮಾನ್ಯ ಮೌಲ್ಯಗಳು ಇರುವ ಲಿಂಗಾಯತ ಧರ್ಮಕ್ಕೆ ಧರ್ಮ ಮಾನ್ಯತೆ ಯಾಕೆ ಸಿಕ್ಕಿಲ್ಲ?ದೇವನೊಬ್ಬನೆ ಎಂದರೆ ಭಿನ್ನ ಭಿನ್ನ ಅಂಕಿತ ನಾಮವೇಕೆ?ಪ್ರಶ್ನೆ: ಇಸ್ಲಾಂ ಧರ್ಮದಲ್ಲಿ ಮದರಸಾಗಳ ಮೂಲಕ ಬಾಲ್ಯದಲ್ಲಿಯೇ ಧಾರ್ಮಿಕ ಶಿಕ್ಷಣ ಕೊಡಲಾಗುತ್ತದೆ. ಅದರಂತೆ ನಮ್ಮ ಧರ್ಮದಲ್ಲಿ ವಚನ ಶಾಲೆಗಳನ್ನು ತೆರೆದು ಧಾರ್ಮಿಕ ಶಿಕ್ಷಣವನ್ನು ಕೊಡಬಹುದಲ್ಲ?ಪ್ರಶ್ನೆ: ಸುಶಿಕ್ಷಿತರು ಮೌಢ್ಯದಲ್ಲಿ ಮುಳುಗಿದ್ದಾರೆ ಇದಕ್ಕೇನು ಪರಿಹಾರ?ಲಿಂಗ ಪರಿಕಲ್ಪನೆ ಬಸವಣ್ಣನವರ ನಂತರ ಬಂತೆ?ಪ್ರಶ್ನೆ: ಮಕ್ಕಳಿಗೆ ವಚನ ಶಾಲೆ ತೆರೆದು ಧರ್ಮಜಾಗೃತಿ ಮೂಡಿಸಬೇಕುಸಂವಾದದ ಉದ್ಘಾಟನೆಸಂವಾದ ಶುರುಷಟಸ್ಥಲ ಧ್ವಜಾರೋಹಣಸಂವಾದ ವೇದಿಕೆ ಸಜ್ಜುಇಂದಿನ ಕಾರ್ಯಕ್ರಮ
2 months agoSeptember 15, 2025 8:23 pm

ಕಲ್ಯಾಣ ಗೀತೆಯೊಂದಿಗೆ ಸಮಾವೇಶ ಮಂಗಲ.

2 months agoSeptember 15, 2025 7:42 pm

ಆಶೀರ್ವಚನ

ಪಾಂಡೋಮಟ್ಟಿ ಗುರುಬಸವ ಸ್ವಾಮಿಗಳಿಂದ, ಡಾ. ಗಂಗಾ ಮಾತಾಜಿ ಅವರಿಂದ ಡಾ. ಬಸವಪ್ರಭು ಸ್ವಾಮೀಜಿಯವರಿಂದ, ನಿಜಗುಣಾನಂದ ಶ್ರೀಗಳಿಂದ, ಭಾಲ್ಕಿ ಶ್ರೀಗಳಿಂದ, ಸಾಣೇಹಳ್ಳಿ ಶ್ರೀಗಳಿಂದ ಆಶೀರ್ವಚನ.

2 months agoSeptember 15, 2025 7:04 pm

ಪೂಜ್ಯ ಶರಣಬಸವ ದೇವರಿಂದ ಅನುಭಾವ

ವಿಷಯ: ‘ಶರಣರು ಆಶಾಪಾಶ ವಿರಹಿತರು’

2 months agoSeptember 15, 2025 6:41 pm

ಕೆ. ನೀಲಾ ಅನುಭಾವ

ಚಿಂತಕಿ ಕೆ. ನೀಲಾ ಅವರಿಂದ ‘ವ್ಯಕ್ತಿತ್ವ ವಿಕಸನದಲ್ಲಿ ವಚನಕಾರರ ಪಾತ್ರ’ ವಿಷಯವಾಗಿ ಅನುಭಾವ.

2 months agoSeptember 15, 2025 6:28 pm

ಜ್ಯೋತಿ ಬೆಳಗಿಸಿ ಸಮಾವೇಶದ ಉದ್ಘಾಟನೆ

ಪೂಜ್ಯರು, ಗಣ್ಯರು ಜ್ಯೋತಿ ಬೆಳಗಿಸಿ ಸಮಾವೇಶ ಉದ್ಘಾಟಿಸಿದರು. ಬಸವ ಮೂರ್ತಿಗೆ ಪುಷ್ಪಾರ್ಪಣೆ. ಜಾ.ಲಿಂ.ಮಹಾಸಭಾದ ಎಂ. ಶಿವಕುಮಾರ ಸ್ವಾಗತ ಕೋರಿದರು. ಪ್ರಾಸ್ತಾವಿಕ ನುಡಿ ಅಣಬೇರು ರಾಜಣ್ಣ.

2 months agoSeptember 15, 2025 6:09 pm

ಸಾರ್ವಜನಿಕ ಸಮಾವೇಶ ಆರಂಭ


ಬಸವ ಬಳಗದ ಶರಣೆಯರು ಹಾಗೂ ಬಸವಕಲಾ ಲೋಕದಿಂದ ಬಸವ ಪ್ರಾರ್ಥನೆ.

2 months agoSeptember 15, 2025 4:57 pm

ಸಾಮರಸ್ಯ ನಡಿಗೆ

ಮೋತಿ ವೀರಪ್ಪ ಕಾಲೇಜಿನಿಂದ ಬಾಪೂಜಿ ಬ್ಯಾಂಕ್ ಸಮುದಾಯ ಭವನದವರೆಗೆ ಸಾಗಿದ ಸಾಮರಸ್ಯ ನಡಿಗೆ.

2 months agoSeptember 15, 2025 4:57 pm

ಧನ್ಯವಾದ ಲಿಂಗಾನಂದ ಕಮ್ಮತ್ತಹಳ್ಳಿ, ಹನುಮಂತಪ್ಪ ಕರೂರ

ಫೋಟೋ, ವಿಡಿಯೋ, ಮಾಹಿತಿಗೆ

2 months agoSeptember 15, 2025 1:08 pm

ಸಂವಾದ ಮುಕ್ತಾಯ

ಶರಣು ಸಮರ್ಪಣೆ, ಜಯ ಕಲ್ಯಾಣ ಗೀತೆಯೊಂದಿಗೆ

2 months agoSeptember 15, 2025 1:06 pm

ಫೋಟೋಗಳಲ್ಲಿ ಸಂವಾದ

ಬಂದ ಇತರ ಕೆಲವು ಪ್ರಶ್ನೆಗಳು

ಬಸವಾದಿ ಶರಣರ ಆಶಯಗಳು ಜಾರಿಗೆ ಬಂದಿವೆಯೇ?
ಕಾಯಕ ದಾಸೋಹ ತತ್ವಗಳು ಜನರಿಂದ ದೂರ ಆಗಿದೆಯಾ?
ವಚನ ಸಾಹಿತ್ಯ, ಸಿದ್ದಾಂತ ಶಿಖಾಮಣಿ – ಯಾವುದು ಜನ ಪರ?
ಲಿಂಗಾಯತ ಧರ್ಮ ಮಾನ್ಯತೆ ಪಡೆಯಲು ಯಾವ ಪ್ರಯತ್ನ ನಡೆಯುತ್ತಿದೆ?
ಮಹಿಳಾ ಮಠಾಧೀಶರನ್ನು ನೇಮಿಸಲು ನಿಮ್ಮ ಒಪ್ಪಿಗೆಯಿದೆಯೇ?

2 months agoSeptember 15, 2025 1:01 pm

ಪ್ರಶ್ನೆ: ಎಲ್ಲರನ್ನೂ ಸಮಾನವಾಗಿ ಕಾಣುವ ಲಿಂಗಾಯತ ಧರ್ಮ ಯಾಕೆ ಮುನ್ನಡೆಗೆ ಬರುತ್ತಿಲ್ಲ?

ಭಾಲ್ಕಿ ಶ್ರೀ: ಪ್ರಚಾರ, ಪ್ರಸಾರದ ಕೊರತೆ ಇದೆ, ಇವು ಹೆಚ್ಚಾಗಬೇಕು.

2 months agoSeptember 15, 2025 1:00 pm

ಪ್ರಶ್ನೆ: ವಿಶ್ವಮಾನ್ಯ ಮೌಲ್ಯಗಳು ಇರುವ ಲಿಂಗಾಯತ ಧರ್ಮಕ್ಕೆ ಧರ್ಮ ಮಾನ್ಯತೆ ಯಾಕೆ ಸಿಕ್ಕಿಲ್ಲ?

ಭಾಲ್ಕಿ ಶ್ರೀ: ನಮ್ಮಲ್ಲಿ ಒಗ್ಗಟ್ಟು, ಜಾಗೃತಿಯ ಕೊರತೆ ಇದೆ. ಮಾನ್ಯತೆ ಸಿಗುವ ಕಾಲ ಬಂದೇ ಬರುತ್ತದೆ. ಬೇಗ ಜಾಗೃತಿ, ಒಗ್ಗಟ್ಟು ಬಂದರೆ ಬೇಗ ಧರ್ಮ ಮಾನ್ಯತೆ ಸಿಗುತ್ತದೆ.

2 months agoSeptember 15, 2025 12:51 pm

ದೇವನೊಬ್ಬನೆ ಎಂದರೆ ಭಿನ್ನ ಭಿನ್ನ ಅಂಕಿತ ನಾಮವೇಕೆ?

ಭಾಲ್ಕಿ ಶ್ರೀ: ಅಂಕಿತ ನಾಮ ತಮ್ಮ ತಮ್ಮ ಇಷ್ಟಲಿಂಗಕೆ ಪ್ರೀತಿಯಿಂದ ಕೊಟ್ಟಿರುವ ಹೆಸರು. ಭಿನ್ನ ಭಿನ್ನ ದೇವರ ಹೆಸರಲ್ಲ. ಅನೇಕರು ಶರಣರು ತಮ್ಮ ತಮ್ಮ ಹೆಸರಿನಲ್ಲಿಯೇ ವಚನ ಬರೆದಿದ್ದಾರೆ.

2 months agoSeptember 15, 2025 12:32 pm

ಪ್ರಶ್ನೆ: ಇಸ್ಲಾಂ ಧರ್ಮದಲ್ಲಿ ಮದರಸಾಗಳ ಮೂಲಕ ಬಾಲ್ಯದಲ್ಲಿಯೇ ಧಾರ್ಮಿಕ ಶಿಕ್ಷಣ ಕೊಡಲಾಗುತ್ತದೆ. ಅದರಂತೆ ನಮ್ಮ ಧರ್ಮದಲ್ಲಿ ವಚನ ಶಾಲೆಗಳನ್ನು ತೆರೆದು ಧಾರ್ಮಿಕ ಶಿಕ್ಷಣವನ್ನು ಕೊಡಬಹುದಲ್ಲ?

ಭಾಲ್ಕಿ ಶ್ರೀ: ಪ್ರಶ್ನೆ ಮೂಲಕ ಗುರುಗಳಿಗೆ ಸಂದೇಶ ನೀಡಿದ್ದೀಯಾ. ನಾವು ಈಗಾಗಲೇ ಆಲೋಚಿಸಿದಂತೆ ವಚನಗಳ ಪಠ್ಯಕ್ರಮ ರಚಿಸಿ ಮಕ್ಕಳಿಗೆ ನೀಡುತ್ತೇವೆ. ಮಕ್ಕಳು ವಚನಗಳನ್ನು ವೃತ, ನಿಯಮದಂತೆ ಓದಬೇಕು. ವಚನಗಳಿಂದ ಉತ್ತಮ ಸಂಸ್ಕಾರ ಎಲ್ಲರಿಗೂ ಆಗುತ್ತದೆ. ವಚನಗಳಿಂದ ಸಂಕುಚಿತತೆ ಹೋಗಿ, ವಿಶಾಲ ಭಾವ, ಮನಸ್ಸು, ಬುದ್ಧಿ ಬೆಳೆಯುತ್ತದೆ. ವಚನಗಳಿಂದ ವಿಶ್ವಮಾನವರಾಗುತ್ತೀರಿ.

ಸಾಣೆಹಳ್ಳಿ ಶ್ರೀ: ನಮ್ಮ ಗುರುಗಳು 1950 ರಿಂದ ವಚನ ಪರೀಕ್ಷೆ ನಡೆಸುತ್ತಿದ್ದರು. ನೀವು ಕೇಳಿದ್ದಕ್ಕೆ ನಮ್ಮೆಲ್ಲರಿಂದ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.

2 months agoSeptember 15, 2025 12:32 pm

ಪ್ರಶ್ನೆ: ಸುಶಿಕ್ಷಿತರು ಮೌಢ್ಯದಲ್ಲಿ ಮುಳುಗಿದ್ದಾರೆ ಇದಕ್ಕೇನು ಪರಿಹಾರ?

ಮೌಡ್ಯ ಪರಿಹಾರ ವಚನ ಸಾಹಿತ್ಯದಿಂದ ಸಾಧ್ಯ. ಕುಟುಂಬಗಳು ಬಸವಮಯ ಆಗಬೇಕು. ನೀವೆಲ್ಲಾ ಕೆಲವು ಕುಟುಂಬಗಳನ್ನಾದರೂ ಬಸವಮಯ ಮಾಡುವ ಪ್ರಯತ್ನ, ಸಂಕಲ್ಪ ಮಾಡಿ. ಪ್ರೀತಿ ವಿಶ್ವಾಸದಿಂದ ಜನರಿಗೆ ವಚನ ಸಾಹಿತ್ಯವನ್ನು ತಿಳಿಸಿಕೊಡಬೇಕು. ವಚನ ಅಧ್ಯಯನ ಹೆಚ್ಚಾಗಬೇಕು. ಅಂದಾಗ ಮೌಢ್ಯ ತಾನೆ ಹೋಗುತ್ತೆ.

(ಉತ್ತರ ಭಾಲ್ಕಿ ಶ್ರೀ)

2 months agoSeptember 15, 2025 11:57 am

ಲಿಂಗ ಪರಿಕಲ್ಪನೆ ಬಸವಣ್ಣನವರ ನಂತರ ಬಂತೆ?

ಬಸವಣ್ಣ ಸ್ಥಾವರ ಪೂಜೆ ನಿರಾಕರಿಸಿದರು. ಸಮಾನತೆಯ ಸಮಾಜ ನಿರ್ಮಿಸಲು ನಿರಾಕಾರ ಸ್ವರೂಪದ ದೇವರನ್ನು ಸ್ಥಾಪಿಸಲು ಲಿಂಗ ಪೂಜೆ ಶುರು ಮಾಡಿದರು.

(ಉತ್ತರ ಸಂಪನ್ಮೂಲ ವ್ಯಕ್ತಿ)

2 months agoSeptember 15, 2025 11:49 am

ಪ್ರಶ್ನೆ: ಮಕ್ಕಳಿಗೆ ವಚನ ಶಾಲೆ ತೆರೆದು ಧರ್ಮಜಾಗೃತಿ ಮೂಡಿಸಬೇಕು

ಒಕ್ಕೂಟದ ಕಡೆಯಿಂದ ವಚನಗಳ ಪಠ್ಯಕ್ರಮ ರಚಿಸಿ ನೀಡಲಾಗುವುದು. ಮಕ್ಕಳು ವಚನ ಓದಿದ್ದರೆ ಸಂಸ್ಕಾರ ಬರುತ್ತದೆ. ಭಾವ, ಮನಸ್ಸು ವಿಶಾಲವಾಗುತ್ತದೆ.

(ಉತ್ತರ ಭಾಲ್ಕಿ ಶ್ರೀ)

2 months agoSeptember 15, 2025 11:41 am

ಸಂವಾದದ ಉದ್ಘಾಟನೆ

ಪೂಜ್ಯರು, ಗಣ್ಯರು ಜ್ಯೋತಿ ಬೆಳಗಿಸಿ, ಬಸವಣ್ಣನವರಿಗೆ ಪುಷ್ಪಾರ್ಚನೆ ಮಾಡಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಅಭಿಯಾನ ಸಮಿತಿಯ ಅಧ್ಯಕ್ಷರಾದ ಅಣಬೇರು ರಾಜಣ್ಣ ಅವರು ಉದ್ಘಾಟನಾ ಮಾತುಗಳನ್ನು ಆಡಿದರು.

2 months agoSeptember 15, 2025 11:20 am

ಸಂವಾದ ಶುರು

2 months agoSeptember 15, 2025 11:15 am

ಷಟಸ್ಥಲ ಧ್ವಜಾರೋಹಣ

ಷಟಸ್ಥಲ ಧ್ವಜಾರೋಹಣವನ್ನು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ನೆರವೇರಿಸಿದರು. ಹಲವಾರು ಪೂಜ್ಯರು, ಗಣ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದಾವಣಗೆರೆ

2 months agoSeptember 15, 2025 11:01 am

ಸಂವಾದ ವೇದಿಕೆ ಸಜ್ಜು

2 months agoSeptember 15, 2025 11:00 am

ಇಂದಿನ ಕಾರ್ಯಕ್ರಮ

ಸಂವಾದ:
ಮುಂಜಾನೆ 11ಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ವಚನ ಸಂವಾದ ಎವಿಕೆ ಕಾಲೇಜಿನಲ್ಲಿ.

ಮೆರವಣಿಗೆ:
ಸಂಜೆ 4 ಗಂಟೆಗೆ ಸಾಮರಸ್ಯ ನಡಿಗೆ, ಮೋತಿ ವೀರಪ್ಪ ಕಾಲೇಜಿನಿಂದ ಬಾಪೂಜಿ ಬ್ಯಾಂಕ್ ಸಮುದಾಯ ಭವನದವರೆಗೆ.

ಸಾರ್ವಜನಿಕ ಸಮಾರಂಭ:
ಸಂಜೆ 6 ಗಂಟೆಗೆ ಬಹಿರಂಗ ಸಭೆ, ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ.

ನಾಟಕ ಪ್ರದರ್ಶನ:
ರಾತ್ರಿ 9 ಗಂಟೆಗೆ ‘ಜಂಗಮದೆಡೆಗೆ’ ನಾಟಕ, ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ.

Share This Article
1 Comment
  • ಅದ್ಭುತ ಯಶಸ್ಸು.
    ಎಲ್ಲ ಮಠಾಧೀಶರಲ್ಲಿ ಭಕ್ತಿ ಪೂರ್ವಕ ವಿನಂತಿ.
    MB Patil ಸಚಿವರಿಂದ & ಎಲ್ಲಾ ಲಿಂಗಾಯತ ಸಚಿವರುಗಳಿಂದ ನಾಡಿನ ಸಮಸ್ಹ ಜನತೆಗೆ ಹೇಳಿಕೆ ನೀಡಿಸಿರಿ…..
    ಜಾತಿ ಗಣತಿಯಲ್ಲಿ ಲಿಂಗಾಯತ ಧರ್ಮ ಎಂದು ಬರೆಯಿಸಿ ಎಂದು

Leave a Reply

Your email address will not be published. Required fields are marked *