ದಾವಣಗೆರೆ
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಬುಧವಾರ ಸಂಜೆ ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆ ನಡೆಸಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಂ. ಶಿವಕುಮಾರ, ಹಿರಿಯ ಉಪಾಧ್ಯಕ್ಷರಾಗಿ ಗೋಪನಾಳ್ ರುದ್ರೇಗೌಡ, ವನಜಾ ಮಹಾಲಿಂಗಯ್ಯ, ಉಪಾಧ್ಯಕ್ಷರಾಗಿ ಬಸವನಾಳ ಮರುಳಸಿದ್ಧಯ್ಯ, ಎನ್. ಎಸ್. ರಾಜು, ವೀಣಾ ಮಂಜುನಾಥ ಆಯ್ಕೆಗೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಪ್ರಭು ಕಲ್ಬುರ್ಗಿ, ಕಾರ್ಯದರ್ಶಿ ವಿಶ್ವೇಶ್ವರಯ್ಯ ಬಿ.ಎಂ., ಶಶಿಧರ ಬಸಾಪುರ, ಪ್ರೇಮಾ ಮಂಜುನಾಥ, ಖಜಾಂಚಿಯಾಗಿ
ದೇವಿಗೆರೆ ಗಿರೀಶ ಆಯ್ಕೆಗೊಂಡರು.
ಸದಸ್ಯರಾಗಿ ಆವರಗೆರೆ ರುದ್ರಮುನಿ, ಶಿವಮೂರ್ತಯ್ಯ ಹಿರೆಮೆಗಳಗೆರೆ, ಸೋಗಿ ಶಾಂತಕುಮಾರ, ಸೃಜನ್ ಅಂಗಡಿ, ಹಂಸಬಾವಿ ಕರಿಬಸಪ್ಪ, ಜಿ.ಎಂ. ಕುಮಾರಪ್ಪ, ಕರೆಗೌಡರ ಮಂಜುನಾಥ, ಕೆ. ಸಿ. ನಾಗರಾಜ, ಹೆಚ್.ಎನ್. ಸುಧಾ, ಮಲೆಬೆನ್ನೂರು ನರೇಶಪ್ಪ ಇವರುಗಳನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.
ಕೊನೆಯಲ್ಲಿ ಶತಾಯುಷಿ ಸಿದ್ಧರಾಮ ಶರಣರಿಗೆ ವರ್ಷದ ಶ್ರದ್ಧಾಂಜಲಿ ಅರ್ಪಿಸಲಾಯಿತು.