ದಾವಣಗೆರೆ
ನಗರದ ವಿರಕ್ತಮಠದಲ್ಲಿ ಜುಲೈ 28 ಬೆಳಿಗ್ಗೆ 10 ಗಂಟೆಗೆ, ಮಹಿಳಾ ಬಸವಕೇಂದ್ರದ ಸದಸ್ಯರಿಂದ ಬಸವ ಪಂಚಮಿ ‘ಹಾಲು ಕುಡಿಸುವ ಹಬ್ಬ’ ನಡೆಯಲಿದೆ.
‘ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲಾಗಲಿ’ ಘೋಷಣೆಯೊಂದಿಗೆ ನಡೆಯುತ್ತಿರುವ ಕಾರ್ಯಕ್ರಮ ಡಾ. ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದೆ.
ಜುಲೈ 24 ರಿಂದ ಆಗಸ್ಟ್ 23ರವರೆಗೆ ಪ್ರತಿದಿನ ಸಂಜೆ 6:30 ರಿಂದ 8 ಗಂಟೆಯವರೆಗೆ ವಿರಕ್ತಮಠದಲ್ಲಿ ‘ವಚನಾನುಷ್ಠಾನ’ ಕಾರ್ಯಕ್ರಮವೂ ನಡೆಯಲಿದೆ.
ಶ್ರೀಮಠದಲ್ಲಿ 1911 ರಲ್ಲಿ ಪ್ರಾರಂಭವಾದ 115ನೇ ವರ್ಷದ ವಚನಾನುಷ್ಠಾನ ಪ್ರವಚನವನ್ನು, 24ರ ಗುರುವಾರ ಸಂಜೆ 6 ಗಂಟೆಗೆ ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ವಿರಕ್ತಮಠದ ಚರಮೂರ್ತಿ ಡಾ. ಬಸವಪ್ರಭು ಸ್ವಾಮಿಗಳು ವಹಿಸಲಿದ್ದಾರೆ. ಪ್ರವಚನವನ್ನು ಗದುಗಿನ ಬಿ.ಎಮ್. ಪಂಚಾಕ್ಷರಿ ಶಾಸ್ತ್ರಿಗಳು ನಡೆಸಿಕೊಡುತ್ತಾರೆ. ಮುಖ್ಯ ಅತಿಥಿಗಳು ಉಪಸ್ಥಿತರಿರಲಿದ್ದಾರೆ. ದಾವಣಗೆರೆ ಬಸವ ಕಲಾಲೋಕದಿಂದ ವಚನ ಗಾಯನ ನಡೆಯಲಿದೆ.