ದಾವಣಗೆರೆಯಲ್ಲಿ ವೇದಿಕೆ ಮೇಲೆ ನುಗ್ಗಿ ವಚನಾನಂದ ಶ್ರೀಗಳಿಗೆ ಪ್ರತಿಭಟನಾ ಪತ್ರ ಸಲ್ಲಿಸಿದ ಲಿಂಗಾಯತ ಯುವಕರು

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ದಾವಣಗೆರೆಯ ಕಾರ್ಯಕ್ರಮವೊಂದರಲ್ಲಿ ಶನಿವಾರ ವೇದಿಕೆ ಮೇಲೆ ಹೋಗಿ ಲಿಂಗಾಯತ ಯುವಕರು ವಚನಾನಂದ ಶ್ರೀಗಳಿಗೆ ಪ್ರತಿಭಟನಾ ಪತ್ರ ಸಲ್ಲಿಸಿದರು.

ಕುವೆಂಪು ಕನ್ನಡ ಭವನದಲ್ಲಿ ಮಾಗನೂರು ಬಸಪ್ಪ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸುತ್ತಿದ್ದ ವಚನಾನಂದ ಶ್ರೀಗಳಿಗೆ ದಾವಣಗೆರೆ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು ಪ್ರತಿಭಟನಾ ಪತ್ರ ಕೊಟ್ಟರೆಂದು ಘಟಕದ ಅಧ್ಯಕ್ಷ ವಿಶ್ವೇಶ್ವರಯ್ಯ ಬಿ ಎಂ ಹೇಳಿದರು.

೫೦೦ ಜನರಿದ್ದ ಸಭಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ವಾಮದೇವಪ್ಪನವರು ಬೆಳಿಗ್ಗೆ ೧೧.೩೦ ಹೊತ್ತಿಗೆ ಭಾಷಣ ಮಾಡುತ್ತಿದ್ದಾಗ ಲಿಂಗಾಯತ ಯುವಕರು ವೇದಿಕೆ ಹತ್ತಿ ವಚನಾನಂದ ಶ್ರೀಗಳ ಬಳಿ ಹೋಗಿ ಪತ್ರ ಕೊಟ್ಟರು.

ಶ್ರೀಗಳು ಯಾವುದೇ ಪ್ರತಿರೋಧವಿಲ್ಲದೆ ಸೌಮ್ಯವಾಗಿ ಪಾತ್ರ ಸ್ವೀಕರಿಸಿದರು. ನಂತರ ತಂಡ ವೇದಿಕೆಯಲ್ಲಿದ್ದ ಗಣ್ಯರಿಗೆ ಮತ್ತು ಅಲ್ಲಿದ್ದ ಪತ್ರಕರ್ತರಿಗೆ ಪತ್ರದ ಒಂದು ಪ್ರತಿ ಕೊಡಲಾಯಿತು. ಘಟನೆಯಿಂದ ಸ್ವಲ್ಪ ಹೊತ್ತು ಸಭಾಂಗಣದಲ್ಲಿ ಗಲಿಬಿಲಿವುಂಟಾಯಿತು.

ನಂತರ ಮಾತನಾಡುತ್ತ ಚಿಂತಕ ವೀರಣ್ಣ ರಾಜೂರ ಅವರು ವಚನಗಳು ಬಂಡಾಯ ಸಾಹಿತ್ಯವಲ್ಲ ಎನ್ನುವುದು ಸುಳ್ಳು ಎಂದರು. ವಚನ ದರ್ಶನ ಪುಸ್ತಕವನ್ನು ವಿವಿಧ ನಗರಗಳಲ್ಲಿ ಬಿಡುಗಡೆ ಮಾಡುವ ಮೂಲಕ ವೈದಿಕಶಾಹಿಗಳು ವಚನಗಳ ಸಿದ್ದಾಂತವನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆಂದು ಹೇಳಿದರು.

ವಚನಗಳನ್ನು ವಿರೂಪಾಗಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿದ್ದರೂ ಅವು ಸಫಲವಾಗುವುದಿಲ್ಲ ಎಂದು ಹೇಳಿದರು. ಈ ಮಾತನ್ನು ಕೇಳಿದ ವಚನಾನಂದ ಶ್ರೀಗಳು ಯಾವುದೇ ಪ್ರತಿಕ್ರಿಯೆ ವ್ಯಕ್ತ ಪಡಿಸದೆ ಮೌನವಾಗಿ ಕುಳಿತ್ತಿದ್ದರು.

ಪತ್ರದ ಮೂಲಕ ಹಲವಾರು ವಚನಾನಂದ ಶ್ರೀಗಳಿಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ.

Share This Article
Leave a comment

Leave a Reply

Your email address will not be published. Required fields are marked *