ಡಿಸೆಂಬರ್ 9 ಸುವರ್ಣ ವಿಧಾನ ಸೌಧದಲ್ಲಿ ‘ಅನುಭವ ಮಂಟಪ’ ಚಿತ್ರ ಅನಾವರಣ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ನೂತನವಾಗಿ ರಚಿಸಿರುವ ‘ಅನುಭವ ಮಂಟಪ’ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುರ್ವಣ ವಿಧಾನ ಸೌಧದಲ್ಲಿ ಡಿಸೆಂಬರ್ 9 ಅನಾವರಣ ಮಾಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಸಕರಿಗೆ ಪತ್ರ ಬರೆದಿರುವ ಸಭಾಧ್ಯಕ್ಷ ಯು.ಟಿ. ಖಾದರ್ ಅನುಭವ ಮಂಟಪ ಸಾಂಸ್ಕೃತಿಕ ನಾಯಕ ಬಸವಣ್ಣನವರ ನೇತೃತ್ವದಲ್ಲಿ ಸ್ಥಾಪಿಸಲಾಗಿದ್ದ ಪ್ರಪಂಚದ ಮೊದಲ ಸಂಸತ್ತಾಗಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.

ಅನುಭವ ಮಂಟಪವು ಸರ್ವಜನಾಂಗದ ಶರಣರಾದ ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಬಹುರೂಪಿ ಚೌಡಯ್ಯ, ಕೇತಲದೇವಿ, ದುಗ್ಗಳೆ, ಕಾಳವ್ವ ಹೀಗೆ ಸಮಾಜದ ಎಲ್ಲಾ ವರ್ಗಗಳ ಜನರ ಆಚಾರ-ವಿಚಾರಗಳ ಚಿಂತನ-ಮಂಥನದ ಕೇಂದ್ರವಾಗಿತ್ತು, ಅಲ್ಲಮಪ್ರಭು ಅದರ ಮೊದಲ ಸಭಾಧ್ಯಕ್ಷರಾಗಿದ್ದರು, ಎಂದು ಪತ್ರದಲ್ಲಿ ಹೇಳಿದ್ದಾರೆ.

Share This Article
6 Comments
  • ಸರ್ಕಾರಕ್ಕೆ ಧನ್ಯವಾದಗಳು. ಸರ್ಕಾರ ಮಟ್ಟದಲ್ಲಿ ಶರಣರ ಯೋಜನೆಗಳು ರೂಪಿತವಾದರೆ ವಿಶ್ವಕ್ಕೆ ಮುಟ್ಟಿಸಲು ಸಾಧ್ಯ ಆದ್ದರಿಂದ ಈ ಅನುಭವ ಮಂಟಪದ ಚಿತ್ರಣ ಕಾರ್ಯಕ್ರಮವು ಉಪಯುಕ್ತವಾಗಿದೆ.

  • ಸರ್ಕಾರಕ್ಕೆ ತುಂಬು ಹೃದಯದ ಶರಣಾಥಿ೯ಗಳು.

  • ಕರ್ನಾಟಕ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು

  • ಕರ್ನಾಟಕ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು..

  • ಕರ್ನಾಟಕ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು..

Leave a Reply

Your email address will not be published. Required fields are marked *