ಈ ವರ್ಷ ದೆಹಲಿಯಲ್ಲಿ ಬಸವ ಸಮ್ಮೇಳನ: ಅರವಿಂದ ಜತ್ತಿ

ಬಸವ ಮೀಡಿಯಾ
ಬಸವ ಮೀಡಿಯಾ

ಈ ವರ್ಷ ದೆಹಲಿಯಲ್ಲಿ ಬಸವ ಸಮ್ಮೇಳನ ಆಯೋಜಿಸಲಾಗುವುದು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದ್ದಾರೆ.

“10 ವಿದೇಶಿ ಭಾಷೆಗಳಿಗೆ ಅನುವಾದವಾಗಿರುವ ವಚನಗಳ ಕೃತಿಗಳನ್ನು ಆ ರಾಷ್ಟ್ರಗಳ ಪ್ರತಿನಿಧಿಗಳನ್ನು ಆಹ್ವಾನಿಸಿ, ರಾಷ್ಟ್ರಪತಿ ಎದುರಲ್ಲಿ ಬಿಡುಗಡೆ ಮಾಡುವ ಚಿಂತನೆ ಇದೆ,” ಎಂದು ಸೋಮವಾರ ಹೇಳಿದರು.

ನಗರದ ಜಯನಗರದ ಅನುಭವ ಮಂಟಪದಲ್ಲಿ ಕಲಬುರಗಿ ಬಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವ ಸಮಿತಿಯ ವಜ್ರಮಹೋತ್ಸವ ಅಂಗವಾಗಿ ವರ್ಷವಿಡೀ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

ಈ ಮುಂಚೆ ಕಾರ್ಯಕ್ರಮದಲ್ಲಿ ಭಾಲ್ಕಿಯ ಹಿರೇಮಠದ ಬಸವಲಿಂಗ ಪಟ್ಟದ್ದೇವರ ಅವರಿಗೆ 2024ನೇ ಸಾಲಿನ ಡಾ.ಬಿ.ಡಿ.ಜತ್ತಿ ಸಂಶೋಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ‘ಭಾರತದ ದೃಷ್ಟಿಕೋನ ಇಟ್ಟುಕೊಂಡು ನವದೆಹಲಿಯಲ್ಲಿ ದೊಡ್ಡ–ದೊಡ್ಡವರನ್ನು ಸೇರಿಸಿ ಮೂರು ದಿನಗಳ ಕಾಲ ಬಸವ ಸಮ್ಮೇಳನ ಆಯೋಜಿಸಿದರೆ ಅದೊಂದು ಐತಿಹಾಸಿಕ ಕಾರ್ಯವಾಗುತ್ತದೆ,” ಎಂದು ಸಲಹೆ ನೀಡಿದರು.

‘ಈ ಸಮ್ಮೇಳನ ಅರವಿಂದ ಜತ್ತಿ ಅವರಿಂದ ಸಾಕಾರವಾಗಬಲ್ಲದು. ಅರವಿಂದರ ಬೆನ್ನಿಗೆ ಬಿ.ಡಿ.ಜತ್ತಿ ಮಗ ಎಂಬ ಬಲವಿದೆ. ಅದರಿಂದ ಪ್ರಧಾನಿ, ರಾಷ್ಟ್ರಪತಿ ಭವನದ ಪ್ರವೇಶ ಸುಲಭವಾಗತ್ತದೆ. ಈ ಸಮ್ಮೇಳನ ನಡೆದರೆ ಬಿ.ಡಿ.ಜತ್ತಿ ಅವರಿಗೂ ಗೌರವ ಸಲ್ಲಿದಂತಾಗುತ್ತದೆ’ ಎಂದರು.

ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ವೀರಣ್ಣ ದಂಡೆ, ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಜಯಶ್ರೀ ದಂಡೆ ವೇದಿಕೆಯಲ್ಲಿದ್ದರು.

Share This Article
Leave a comment

Leave a Reply

Your email address will not be published. Required fields are marked *