ದೇಹವೇ ದೇಗುಲ 1/2

ಉಳ್ಳವರು ಶಿವಾಲಯವ ಮಾಡುವರು…

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ ? ಬಡವನಯ್ಯ.
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ.
ಕೂಡಲಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಇದು ಲಿಂಗಾಯತ ಧರ್ಮದ ಸುಪ್ರಸಿದ್ಧ ವಚನ. ಶೋಷಣೆಯ ಕೇಂದ್ರಗಳಾಗಿದ್ದ ದೇವಾಲಯಗಳನ್ನು ತಿರಸ್ಕರಿಸಿ ಅವುಗಳಿಗೆ ಅದ್ಬುತ ಪರ್ಯಾಯ ಕಲ್ಪಿಸಿದ ಬಸವ ತತ್ವದ ತಿರುಳು ಇದರಲ್ಲಿದೆ.

೧೨ನೇ ಶತಮಾನ ದೇವಾಲಯಗಳ ಯುಗವಾಗಿತ್ತು. ಅವು ಪಾಪದ ಹಣದಿಂದ ನಿರ್ಮಿತಗೊಂಡು, ಅರ್ಚಕ, ವೇಶ್ಯೆ ಮುಂತಾದವರನ್ನು ಸೇರಿಸಿಕೊಂಡು ಬಂದ ದಾನವನ್ನು ಬಡ್ಡಿಯಾಗಿ ನೀಡುತ್ತಿದ್ದವು.

ಆ ಸಮಾಜದಲ್ಲಿ ಬಸವಣ್ಣನವರು ಬಡವರ ಪರ ನಿಂತು ಕಲ್ಲಿನ ಕಟ್ಟಡದ ಪ್ರತಿಯಾಗಿ ದೇಹವನ್ನೇ ದೇವಾಲಯವನ್ನಾಗಿ ಪರಿವರ್ತಿಸಿದರು. ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಕಲಶವಾಯಿತು.

ಕಲ್ಲಿನ ದೇವಾಲಯ ಸಾವಿರ ವರ್ಷವಿದ್ದರೂ ಅದಕ್ಕೆ ಉಳಿವಿಲ್ಲ. ದೇಹ ದೇಗುಲ ನೂರು ವರ್ಷವಿದ್ದರೂ ಅದಕ್ಕೆ ಅಳಿವಿಲ್ಲ. ಅಲ್ಲಿ ಹಣ ಕಟ್ಟಡದ ಸಾಧನ, ಇಲ್ಲಿ ಗುಣ ಕಟ್ಟಡದ ಸಾಧನ.

ಆದರೆ ದೇಹ ದೇವಾಲಯವಾಗಬೇಕಾದರೆ ಅದು ಜಂಗಮ ಅಥವಾ ಚಲನಶೀಲವಾಗಿರಬೇಕು. ಅಂದರೆ ವ್ಯಕ್ತಿತ್ವ ಪರಿವರ್ತನೆಯಾಗಬೇಕು. ಆಗ ಮಾತ್ರ ಸ್ಥಾವರಕ್ಕಳಿವಾದರೂ ಜಂಗಮಕ್ಕಳಿವಿರುವುದಿಲ್ಲ.

(‘ಸ್ಥಾವರಕ್ಕಳಿವುಂಟು- ಜಂಗಮಕ್ಕಳಿವಿಲ್ಲ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)

Share This Article
Leave a comment

Leave a Reply

Your email address will not be published. Required fields are marked *