ಜಮಖಂಡಿ
ಲಿಂಗಾಯತ ಧರ್ಮಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಗಿ ಮಾತನಾಡಿರುವ ವಿಜಯಪುರ ಶಾಸಕ ಶ್ರೀ ಬಸನಗೌಡ ಪಾಟೀಲ ಯತ್ನಾಳ ಅವರ ವರ್ತನೆಯನ್ನು ಬಸವ ಕೇಂದ್ರವು ತೀವ್ರವಾಗಿ ಖಂಡಿಸಿದೆ.
ವಿಶ್ವ ಗುರು ಬಸವಣ್ಣನವರು ಇಡೀ ವಿಶ್ವಕ್ಕೆ ಸಮಾನತೆ ಸಂದೇಶ ಕೊಟ್ಟಿದ್ದಾರೆ. ಇಡೀ ವಿಶ್ವವೇ ಅವರನ್ನು ಮನ್ನಿಸಿದೆ. ಕರ್ನಾಟಕ ಸರಕಾರ ಗುರು ಬಸವಣ್ಣನವರನ್ನು “ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿದೆ. ಅಂಥ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಯತ್ನಾಳ ಅವರು ನಡೆ ಖಂಡನೀಯವಾಗಿದೆ.
ರಾಜ್ಯದ ರಾಜ್ಯಪಾಲರು ತಕ್ಷಣ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಹಾಗೂ ರಾಜ್ಯ ಭಾಜಪ ಅಯೋಗ್ಯ ವರ್ತನೆಯ ಯತ್ನಾಳ ಅವರ ಮೇಲೆ ಯೋಗ್ಯ ಕ್ರಮ ಜರುಗಿಸಬೇಕೆಂದು ಸಂಘಟನೆ ಒತ್ತಾಯಿಸಿ ಮನವಿಪತ್ರ ಕಳಿಸಿದೆ ಎಂದು ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ, ಪ್ರದಾನ ಕಾರ್ಯದರ್ಶಿ ಮಹಾಂತೇಶ ಅಂಗಡಿ, ಖಜಾಂಚಿ ಅಣ್ಣಾಸಾಬ ಜಗದೇವ, ಉಪಾಧ್ಯಕ್ಷ ರಾವಸಾಬ ಜಕ್ಕಪ್ಪನ್ನವರ ತಿಳಿಸಿದ್ದಾರೆ.