ಧಾರವಾಡದ 35 ಅಂಗಡಿ, ಮನೆಗಳಲ್ಲಿ ನಿಜಾಚರಣೆಯ ದೀಪಾವಳಿ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಧಾರವಾಡ

ಇಲ್ಲಿನ ಬಸವ ಕೇಂದ್ರದ ಸದಸ್ಯರು ದೀಪಾವಳಿ ಹಬ್ಬವನ್ನು ವಚನ ದೀಪೋತ್ಸವ ಹಾಗೂ ಚೆನ್ನಬಸವಣ್ಣನವರ ಜಯಂತಿಯನ್ನಾಗಿ ನಗರದ ವಿವಿಧ ವ್ಯವಹಾರ ಸಂಸ್ಥೆ, ಅಂಗಡಿ, ಮನೆಗಳಲ್ಲಿ ಆಚರಿಸಿದರು.

ಮುಂಜಾನೆಯಿಂದ ಮಧ್ಯಾಹ್ನದವರೆಗೆ ನಗರದಾದ್ಯಂತ ಸುಮಾರು ಮೂವತ್ತೈದು ಕಡೆಗಳಲ್ಲಿ ವಚನಾಧಾರಿತ ಪೂಜಾ ಕಾರ್ಯಕ್ರಮ ನಡೆದವು.

ವಚನಮೂರ್ತಿ ಬಸವಂತ ತೋಟದ ಹಾಗೂ ಬಸವಕೇಂದ್ರದ ಸದಸ್ಯರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಪ್ರತಿ ವರ್ಷವೂ ವಚನಾಧಾರಿತ ಪೂಜಾ ಕಾರ್ಯಕ್ರಮ ಮಾಡುತ್ತೇವೆ. ಕಳೆದ ವರ್ಷ 25 ರಿಂದ 30 ಅಂಗಡಿ, ಉದ್ಯಮಗಳು ಇದ್ದವು. ಈ ವರ್ಷ ಅವು 35ಕ್ಕೇರಿವೆ. ಜನರಲ್ಲಿ ವಚನಾಧಾರಿತ ಪೂಜಾ ಆಚರಣೆಯ ಬಗ್ಗೆ ಜಾಗೃತಿ ಮೂಡುತ್ತಿದೆ ಎನ್ನುತ್ತಾರೆ ತೋಟದ ಅವರು.

ಬಸವ ಕೇಂದ್ರದ 20 ಜನ ವಚನಮೂರ್ತಿಗಳನ್ನು ಒಳಗೊಂಡ ನಾಲ್ಕು ತಂಡಗಳು ರಚಿಸಿಕೊಂಡಿದ್ದೆವು. ಬಸವಂತಪ್ಪ ತೋಟದ, ಅನಿಲ ಅಂಗಡಿ, ಅರುಣ ಮೋಡಿ, ಶೇಖರ ಕುಂದಗೋಳ ತಂಡದ ನಾಯಕತ್ವ ವಹಿಸಿಕೊಂಡಿದ್ದರು ಎಂದು ತೋಟದ ಅವರು ಹೇಳಿದರು.

ವಚನಾಧಾರಿತ ಪೂಜಾ ಕಾರ್ಯವೆಂದರೇನು ವಿವರಿಸಿದರು.

ಶರಣ ಚೆನ್ನಬಸವಣ್ಣನವರ ಜಯಂತಿ ಆಗಿದ್ದರಿಂದ ಬಸವಣ್ಣ ಹಾಗೂ ಚೆನ್ನಬಸವಣ್ಣ ಅವರ ಫೋಟೋಗಳನ್ನು ಜೊತೆಗೆ ಅಂಗಡಿಗಳ ಲೆಕ್ಕದ ಪುಸ್ತಕಗಳನ್ನು ಪೂಜೆಗೆ ಇಟ್ಟಿದ್ದೆವು.

ಮೊದಲಿಗೆ ಮನೆಯವರಿಗೆಲ್ಲಾ ವಿಭೂತಿ ಹಚ್ಚಿಕೊಳ್ಳಲು ಹೇಳುತ್ತೇವೆ, ಆಮೇಲೆ ಮನೆಯವರ ಕಡೆಯಿಂದ ಪೂಜೆ ಮಾಡಿಸುತ್ತೇವೆ, ಪೂಜೆಗೆ ಸಂಬಂಧಿಸಿದ ವಚನಗಳನ್ನು ನಾವು ಹೇಳುತ್ತ ಹೋಗುತ್ತೇವೆ, ಅವರು ಅದರಂತೆ ಪೂಜೆ ಮಾಡುತ್ತಾರೆ.

ಆಮೇಲೆ ನಾಲ್ಕು ಐದು ವಚನಗಳನ್ನು ಮನೆಯವರ ಕಡೆಯಿಂದ ಸಾಮೂಹಿಕವಾಗಿ ಹೇಳಿಸುತ್ತೇವೆ. ಬಸವಣ್ಣ ಚೆನ್ನಬಸವಣ್ಣನವರ ವಚನಗಳನ್ನು ಹೇಳುತ್ತಾ, ಎಂಟು ಸಾರಿ ಅವರಿಂದ ಶರಣರ ಭಾವಚಿತ್ರಕ್ಕೆ ಹೂವು ಹಾಕಿಸುತ್ತೇವೆ. ಕೊನೆಗೆ ಜಯ ಗುರು ಜಯ ಗುರು ಬಸವಣ್ಣ ಎಂಬ ಗೀತೆಯೊಂದಿಗೆ ಮಂಗಳ ಮಾಡುತ್ತೇವೆ.

ಪ್ರಮುಖವಾಗಿ ನಡಕಟ್ಟಿ ಅವರ ನಾಲ್ಕು ಅಂಗಡಿಗಳು, ತೋಟದ ಕುಟುಂಬದ ನಾಲ್ಕು ಸಂಸ್ಥೆಗಳು,
ಮರಳಪ್ಪನವರ ಅವರ ಮೂರು ಸಂಸ್ಥೆಗಳು, ಬಿರಾದಾರ ಅವರ ಎರಡು ಸಂಸ್ಥೆಗಳು, ಶರಣನ್ನವರ ಅವರ ಎರಡು ಸಂಸ್ಥೆಗಳು, ಡಾ. ಎಸ್. ಆರ್. ಜಂಬಗಿ ಆಸ್ಪತ್ರೆ, ಬೆಟಗೇರಿ ಇಂಜಿನಿಯರ ಆಫೀಸ್, ರುದ್ರಣ್ಣ ಹೊಸಕೇರಿ ಆಫೀಸ್, ಹೂಲಿ ಅವರ ಬಂಗಾರದ ಅಂಗಡಿ ಮುಂತಾದ ಸಂಸ್ಥೆಗಳಲ್ಲಿ ವಚನಗಳನ್ನು ಹೇಳುವ, ಹಾಡುವ ಮುಖಾಂತರ ವಚನಾಧಾರಿತ ಪೂಜಾ ಕಾರ್ಯ ನೆರವೇರಿಸಲಾಯಿತು.

Share This Article
3 Comments
  • ಹುಬ್ಬಳ್ಳಿಯಲ್ಲಿ ಶಂಕರ ಕೋಳಿವಾಡ ಅವರು ಕೋಳಿವಾಡ ಮಾರ್ಬಲ್ಸ್ & ಗ್ರಾನೈಟ್ಸ‌ನಲ್ಲಿ ಕೂಡ ದೀಪಾವಳಿ ಹಬ್ಬವನ್ನು ಬಸವಣ್ಣನವರ ಭಾವಚಿತ್ತವಿಟ್ಟು ವಚನ ಪಠಣಗಳ ಮೂಲಕವೇ ಬೆಳಕಿನ ಹಬ್ಬವನ್ನು ಆಚರಿಸಲಾಯಿತು.

  • ಶರಣು ಶರಣಾರ್ಥಿಗಳು…. ತುಂಬಾ ಸಂತೋಷ ಆಯಿತು. 🙏🙏 ಒಳ್ಳೆಯ ಬೆಳವಣಿಗೆ.. ಎಲ್ಲಾ ಬಸವಮಾಯ.
    ನಾವು ಓಮನ್ ದೇಶದಲ್ಲಿ ಸುಮಾರು 17 ವರ್ಷದಿಂದ ಇದ್ದೇವೆ.
    ಮೂಲತಃ ಬಾದಾಮಿ, ಹತ್ತಿರ ಚೋಳಚಗುಡ್ಡ ದವರು.
    ನಾನು ಕೂಡಾ ದೀಪಾವಳಿ ದಿನದಂದು ಬಸವಣ್ಣ ಹಾಗೂ ಚನ್ನಬಸವಣ್ಣನವರ ಪೂಜ ಮಾಡುತ್ತೇವೆ.
    ನಿಮ್ಮ ಬಸವಮೀಡಿಯಾ ಸುದ್ಧಿ ಓದಿ ಖುಷಿಯಾಗಿ ನನ್ನ ಅಭಿಪ್ರಾಯ ಹಂಚಿಕೊಂಡೆ. ಧನ್ಯವಾದಗಳು sir 🙏🙏

Leave a Reply

Your email address will not be published. Required fields are marked *