ಬೀದರ್
ಬೆಂಗಳೂರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಆಯೋಜಿಸುವ ಜವಾಬ್ದಾರಿಯನ್ನು ಬಸವರಾಜ ಧನ್ನೂರ ಅವರಿಗೆ ವಹಿಸಲಾಗಿದೆ.
ಬುಧವಾರ ಸಂಜೆ ಅಭಿಯಾನದ ಕಾರ್ಯಕ್ರಮದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸ್ವಾಮೀಜಿಗಳು ಇದನ್ನು ಘೋಷಿಸಿ ಕಾರ್ಯಕ್ರಮದಲ್ಲಿ ಘೋಷಿಸಿ ಧನ್ನೂರ ದಂಪತಿಗಳನ್ನು ಗೌರವಿಸಿದರು.
‘ಬಸವರಾಜ ಧನ್ನೂರ ಅವರಿಗೆ ಸಮಾರೋಪ ಸಮಾರಂಭದ ಸಂಪೂರ್ಣ ಜವಾಬ್ದಾರಿ ವಹಿಸಲು ಮಠಾಧಿಪತಿಗಳ ಒಕ್ಕೂಟದಿಂದ ತೀರ್ಮಾನಿಸಲಾಗಿದೆ’ ಎಂದು ಡಂಬಳ–ಗದಗ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಬಸವ ಸಂಸ್ಕೃತಿ ಅಭಿಯಾನ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕು. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಯಾವ ರೀತಿ ರಾಷ್ಟ್ರಮಟ್ಟದಲ್ಲಿ ಆಚರಿಸಲಾಗುತ್ತದೋ ಅದೇ ರೀತಿ ಬಸವಣ್ಣನವರ ಜಯಂತಿ ಕೂಡ ಆಚರಿಸಬೇಕು ಎಂದು ಹೇಳಿದರು.
ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಅಕ್ಟೋಬರ್ 5ರಂದು ನಡೆಯಲಿದೆ.