ಬೀದರ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಇಂದು ಬೀದರನ ಚನ್ನಬಸವ ಪ್ರಸಾದ ನಿಲಯದಲ್ಲಿ “ಬಸವ ಸಂಸ್ಕೃತಿ ಅಭಿಯಾನ” ದ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಬಸವತತ್ವ ನಿಷ್ಠರಾದ, ಜಾಗತಿಕ ಲಿಂಗಾಯತ ಮಹಾಸಭಾ ಬೀದರ ಜಿಲ್ಲಾಧ್ಯಕ್ಷರಾದ ಬಸವರಾಜ ಧನ್ನೂರ ಅವರನ್ನು ಸರ್ಮಾನುಮತದಿಂದ ಬಸವ ಸಂಸ್ಕೃತಿ ಅಭಿಯಾನ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.
ಇಂದಿನ ಸಭೆಯಲ್ಲಿ ಹುಲಸೂರಿನ ಪೂಜ್ಯರಾದ ಶಿವಾನಂದ ಮಹಾಸ್ವಾಮಿಗಳು, ಭಾಲ್ಕಿ ಹಿರೇಮಠದ ಪೂಜ್ಯರಾದ ಗುರುಬಸವ ಪಟ್ಟದ್ದೇವರು, ಬಸವಧರ್ಮ ಪೀಠದ ಪೂಜ್ಯರಾದ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಡಾ. ಗಂಗಾಂಬಿಕೆ ಹಾಗು ಲಿಂಗಾಯತ ಮಹಾಮಠದ ಪೂಜ್ಯರಾದ ಪ್ರಭುದೇವ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಲಿಂಗಾಯತ ಸಮಾಜ ಅಧ್ಯಕ್ಷರಾದ ಕುಶಾಲರಾವ ಪಾಟೀಲ ಖಾಜಾಪುರ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಜೈರಾಜ ಖಂಡ್ರೆ, ರಾಜೇಂದ್ರ ಗಂದಗೆ, ಸಿದ್ದಯ್ಯಾ ಕಾವಡಿ, ಮಲ್ಲಿಕಾರ್ಜುನ ಪಂಚಾಕ್ಷರಿ, ಚಂದ್ರಕಾಂತ ಮಿರ್ಚೆ, ಉಷಾ ಮಿರ್ಚೆ, ಜಯದೇವಿ ಯದಲಾಪೂರೆ, ಸುವರ್ಣಾ ಧನ್ನೂರ, ನಿರ್ಮಲಾ ಮಸೂದಿ ಮತ್ತಿತರರು ಇದ್ದರು.
ಯೋಗೇಂದ್ರ ಯದಲಾಪೂರೆ ನಿರೂಪಿಸಿದರೆ, ಉಮಾಕಾಂತ ಮೀಸೆ ಸ್ವಾಗತ ಕೋರಿದರು.