ಧಾರವಾಡದಲ್ಲಿ ಬಸವ ಸಂಸ್ಕೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ
38Posts
Auto Updates

Contents
ಮುಕ್ತಾಯಅಭಿಯಾನದಿಂದ ರೋಗ ಪರಿಹಾರ: ಬಿದರಿಗೆ ಸಾಣೇಹಳ್ಳಿ ಶ್ರೀಗಳ ತಿರುಗೇಟುಗಣವೇಷಧಾರಿಗಳಿಗೆ ಪೂಜ್ಯರಿಂದ ಅಭಿನಂದನೆಆಶೀರ್ವಚನ: ಗಂಗಾ ಮಾತಾಜಿಜೋಳ ಮುತ್ತಾಗಿಸಿದ ಬಸವಣ್ಣ: ಇಮ್ಮಡಿ ಸಿದ್ಧರಾಮ ಶ್ರೀತುಂಬಿದ ಸಭಾಂಗಣಶರಣ ತತ್ವದಿಂದ ವ್ಯಸನಮುಕ್ತ ಸಮಾಜ: ಡಾ. ಎಚ್. ಎಸ್. ಅನುಪಮಾವಚನ ಗಾಯನಅನುಭವ ಮಂಟಪ ಕೃತಿ ಲೋಕಾರ್ಪಣೆಸಂಜೆಯ ಸಮಾವೇಶಮುರುಘಾ ಮಠ ತಲುಪಿದ ಮೆರವಣಿಗೆವಚನ ಸಾಹಿತ್ಯ ಮೆರವಣಿಗೆಧಾರವಾಡ ಸಂವಾದದಲ್ಲಿ ಭಾಗವಹಿಸಿದ್ದವರ ಅನಿಸಿಕೆಕಾರ್ಯಕ್ರಮ ಮುಕ್ತಾಯಪ್ರಶ್ನೆ: ಲಿಂಗಾಯತ ಧರ್ಮದ ಅನೇಕ ಶಾಲಾ ಕಾಲೇಜುಗಳಲ್ಲಿ ಎಷ್ಟರ ಮಟ್ಟಿಗೆ ವಚನಸಾಹಿತ್ಯವನ್ನು ಸಾಕಾರಗೊಳಿಸಿದ್ದಾರೆ?ಪ್ರಶ್ನೆ: ಅಕ್ಕಮಹಾದೇವಿ ನಿಜಕ್ಕೂ ದಿಗಂಬರೆಯಾಗಿದ್ದರೇ?ಪ್ರಶ್ನೆ: ಡಾ. ಎಂ. ಎಂ. ಕಲಬುರಗಿಯವರ ಹತ್ಯೆಗೆ ನ್ಯಾಯ ಒದಗಿಲ್ಲ‌. ಒಕ್ಕೂಟ ಹೇಗೆ ಪ್ರಯತ್ನಿಸುತ್ತಿದೆ?ಅಭಿಯಾನ ವಿಡಿಯೋ, ಫೋಟೋಪ್ರಶ್ನೆ: ಅಷ್ಠಾವರಣಗಳಲ್ಲಿ ಬರುವ ಪಾದೋದಕ ಲಿಂಗದ ಮೇಲಿನದಾದರೆ ಇಂದಿನ ಸ್ವಾಮಿಗಳ ಪಾದವನ್ನು ತೊಳೆದು ಅವನ್ನೇ ಪಾದೋದಕ ಎನ್ನುವುದು ಹೇಗೆ ವೈಜ್ಞಾನಿಕ ಹಾಗೂ ಹೇಗೆ ವೈಚಾರಿಕ?ಇಷ್ಠಲಿಂಗ ದೀಕ್ಷೆ ಏಕರೂಪದಲ್ಲೇಕಿಲ್ಲ?ಪ್ರಶ್ನೆ: ಸೂಳೆ ಸಂಕವ್ವೆ ಎಂದು ಇಂದಿಗೂ ಕರೆಯುತ್ತೇವೆ. ಅದು ಎಷ್ಟರ ಮಟ್ಟಿಗೆ ಸರಿ?ಶರಣಸತಿ ಲಿಂಗಪತಿ ಇದರ ನಿಜವಾದ ಅರ್ಥ ಏನು?ಬಸವ ಜಯಂತಿಯಂದು ಉಪ್ಪಿನ ಬೆಟಗೇರಿಯ ಶ್ರೀಗಳು ತಮ್ಮ ಹುಟ್ಟುಹಬ್ಬವನ್ನು ಮಾಡಿಕೊಂಡಿದ್ದಾರೆ. ಇದಕ್ಕೆ ಒಕ್ಕೂಟ ಏನು ಹೇಳುತ್ತದೆ‌?ನೀವು ನಿಮ್ಮ ಮುಂದಿನ ಮಠಾಧಿಪತಿಗಳಾಗಿ ಮಹಿಳೆಯರನ್ನು ನೇಮಿಸುತ್ತೀರಾ?ಫೋಟೋಗಳಲ್ಲಿ ಸಂವಾದ ಕಾರ್ಯಕ್ರಮಪ್ರಶ್ನೆ: ಮೂಢನಂಬಿಕೆಗಳನ್ನು ಹೊಡೆದು ಹಾಕಿದ ಶರಣರ ಹೆಸರುಗಳ ಮಠದಲ್ಲಿ ಎಲ್ಲಾ ಮೂಢನಂಬಿಕೆಗಳನ್ನು ನೀರೆರೆದು ಪೋಷಿಸುತ್ತಿದ್ದಾರೆ?ಪ್ರಶ್ನೆ: ಬಸವಣ್ಣನವರು ಲಿಂಗೈಕ್ಯರಾದರೋ ಅಥವಾ ಆತ್ಮಹತ್ಯೆ ಮಾಡಿಕೊಂಡರೋ?ಬಹುತೇಕ ಪ್ರಶ್ನೆಗಳು ಜಾತಿಯ ಮೇಲೆ ಬರುತ್ತಿವೆ.ಪ್ರಶ್ನೆ: ಬಸವಣ್ಣನವರ ಪ್ರಕಾರ ಬದುಕು ಎಂದರೇನು?ಪ್ರಶ್ನೆ: ಕ್ರಿಯೆ ಮತ್ತು ಜ್ಞಾನ ಎರಡೂ ಬೇಕು. ಆದರೆ ಎಲ್ಲ ಸ್ವಾಮಿಗಳೂ ಜ್ಞಾನವಂತರಾಗಿದ್ದಾರೆ. ಕ್ರಿಯಾವಂತರಾಗಿಲ್ಲ ಎನ್ನುವುದು ನನ್ನ ಭಾವನೆ.ಪ್ರಶ್ನೆ: ಮೂಲತಃ ಕಾಯಕವೇ ಕೈಲಾಸ ಎಂದು ಹೇಳಿದವರು ಯಾರು ಮತ್ತು ಅದರ ತಾತ್ಪರ್ಯ ಏನು?ಪ್ರಶ್ನೆ: 12ನೇ ಶತಮಾನದಲ್ಲಿ ಶರಣರು ಅಂತರ್ಜಾತಿ ವಿವಾಹ ಮತ್ತು ದಲಿತರ ಮನೆಯಲ್ಲಿ ಭೋಜನ ಮಾಡಿದರು. ಆದರೆ ಈಗಿನ ನೀವುಗಳು ಎಷ್ಟು ಜನ ಆ ಕೆಲಸ ಮಾಡಿದ್ದೀರಿ?ಸಾಂಸ್ಕೃತಿಕ ನಾಯಕ ಕೃತಿ ಲೋಕಾರ್ಪಣೆಪ್ರಾಸ್ತಾವಿಕ ನುಡಿ: ಶೇಗುಣಸಿಯ ಮಹಾಂತ ಶ್ರೀಗಳುಉದ್ಘಾಟನೆ, ಸಂವಾದಕ್ಕೆ ಸಜ್ಜುಷಟಸ್ಥಲ ಧ್ವಜಾರೋಹಣ, ಪ್ರಾರ್ಥನೆಬಸವ ರಥಕ್ಕೆ ಸ್ವಾಗತಇಂದಿನ ಕಾರ್ಯಕ್ರಮ

ಅಭಿಯಾನದ 12ನೇ ದಿನದ ಲೈವ್ ಬ್ಲಾಗ್

2 months agoSeptember 12, 2025 8:57 pm

ಮುಕ್ತಾಯ

2 months agoSeptember 12, 2025 8:54 pm

ಅಭಿಯಾನದಿಂದ ರೋಗ ಪರಿಹಾರ: ಬಿದರಿಗೆ ಸಾಣೇಹಳ್ಳಿ ಶ್ರೀಗಳ ತಿರುಗೇಟು

2 months agoSeptember 12, 2025 8:21 pm

ಗಣವೇಷಧಾರಿಗಳಿಗೆ ಪೂಜ್ಯರಿಂದ ಅಭಿನಂದನೆ

2 months agoSeptember 12, 2025 8:17 pm

ಆಶೀರ್ವಚನ: ಗಂಗಾ ಮಾತಾಜಿ

ಗಂಡು-ಹೆಣ್ಣು ಎಂಬುದು ಎರಡೇ ಜಾತಿ. ಕದಳಿಗೆ ಲಿಂಗೈಕ್ಯರಾಗಲು ಅಕ್ಕಮಹಾದೇವಿ ಹೋದಾಗ ಬಸವಣ್ಣನವರ ಒಂದು ಆಶಯ ಹಾಗೇ ಉಳಿಯಿತು ಅದೇ ಮಹಿಳಾ ಪೀಠ ಸ್ಥಾಪನೆ.

ಕಲ್ಯಾಣ ಕ್ರಾಂತಿಯ ನಂತರ ಮತ್ತೆ ಮಹಿಳೆಯರ ಪರಿಸ್ಥಿತಿ ಹಳೆಯದೇ ಮರುಕಳಿಸಿತು.

ನಂತರ 1968 ರಲ್ಲಿ ಕಲ್ಯಾಣದಲ್ಲಿ ಮಾತಾಜಿಯವರು ಭಾಷಣ ಮಾಡುತ್ತಾ ಮಹಿಳಾ ಗೋಷ್ಠಿಯಲ್ಲಿ ಪುರುಷರೇ ಇದ್ದಾರೆ ನಾವು ಮಹಿಳಾ ಪೀಠವೊಂದನ್ನು ಮಾಡುತ್ತೇವೆ ಎಂದರು. ಇದಕ್ಕೆ ಅಲ್ಲೇ ವಿರೋಧಗಳು ವ್ಯಕ್ತವಾದವು. ಅದಾವುದಕ್ಕೂ ಜಗ್ಗದ ಪೂಜ್ಯ ಲಿಂಗಾನಂದ ಅಪ್ಪಾಜಿಯವರು ಎರಡೇ ವರ್ಷಗಳಲ್ಲಿ 1970 ರಲ್ಲಿ ಧಾರವಾಡದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ ಸ್ಥಾಪನೆಯಾಯಿತು. ಇದು ವಿಶ್ವದ ಮೊದಲ ಮಹಿಳಾ ಪೀಠ.

2 months agoSeptember 12, 2025 8:03 pm

ಜೋಳ ಮುತ್ತಾಗಿಸಿದ ಬಸವಣ್ಣ: ಇಮ್ಮಡಿ ಸಿದ್ಧರಾಮ ಶ್ರೀ

2 months agoSeptember 12, 2025 7:50 pm

ತುಂಬಿದ ಸಭಾಂಗಣ

ವಿದೂಷಿ ಸುಜಾತ ಗುರವ ಅವರಿಂದ ವಚನ ಗಾಯನ

2 months agoSeptember 12, 2025 7:40 pm

ಶರಣ ತತ್ವದಿಂದ ವ್ಯಸನಮುಕ್ತ ಸಮಾಜ: ಡಾ. ಎಚ್. ಎಸ್. ಅನುಪಮಾ

2 months agoSeptember 12, 2025 7:25 pm

ವಚನ ಗಾಯನ

ಹುಬ್ಬಳ್ಳಿಯ ಗಂಗಾಂಬಿಕಾ ಬಳಗದಿಂದ ವಚನ ಗಾಯನ.

2 months agoSeptember 12, 2025 7:11 pm

ಅನುಭವ ಮಂಟಪ ಕೃತಿ ಲೋಕಾರ್ಪಣೆ

ಚನ್ನಪ್ಪ ಉತ್ತಂಗಿ ಸಂಪಾದಿತ ‘ಅನುಭವ ಮಂಟಪ ಐತಿಹಾಸಿಕ ಕೃತಿ’ ಬಿಡುಗಡೆ. ಶಂಕ್ರಣ್ಣ ಕೋಳಿವಾಡ ದಂಪತಿಗಳು ಮುದ್ರಣ ಸೇವೆ.

2 months agoSeptember 12, 2025 7:09 pm

ಸಂಜೆಯ ಸಮಾವೇಶ

ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳಿಂದ ಸ್ವಾಗತ.

2 months agoSeptember 12, 2025 6:00 pm

ಮುರುಘಾ ಮಠ ತಲುಪಿದ ಮೆರವಣಿಗೆ

ಜೋರು ಮಳೆಯಿಂದ ಸ್ಥಗಿತಗೊಂಡ ಮೆರವಣಿಗೆ ಮತ್ತೆ ಮುಂದುವರೆದು ಮುರುಘಾ ಮಠ ಮುಟ್ಟಿತು.

2 months agoSeptember 12, 2025 4:40 pm

ವಚನ ಸಾಹಿತ್ಯ ಮೆರವಣಿಗೆ

ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನದಿಂದ ಮುರುಘಾಮಠದವರೆಗೆ ಸಾಗುತ್ತಿರುವ ವಚನ ಸಾಹಿತ್ಯದ ಭವ್ಯ ಮೆರವಣಿಗೆ.

ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನದಿಂದ ಮುರುಘಾಮಠದವರೆಗೆ ಸಾಗಿದ ವಚನ ಸಾಹಿತ್ಯದ ಭವ್ಯ ಮೆರವಣಿಗೆ.

2 months agoSeptember 12, 2025 3:55 pm

ಧಾರವಾಡ ಸಂವಾದದಲ್ಲಿ ಭಾಗವಹಿಸಿದ್ದವರ ಅನಿಸಿಕೆ

ಧಾರವಾಡ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನೀಲಕ್ಕ ಪಾಟೀಲ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ಅನಿಸಿಕೆಗಳು.

2 months agoSeptember 12, 2025 1:31 pm

ಕಾರ್ಯಕ್ರಮ ಮುಕ್ತಾಯ

2 months agoSeptember 12, 2025 1:06 pm

ಪ್ರಶ್ನೆ: ಲಿಂಗಾಯತ ಧರ್ಮದ ಅನೇಕ ಶಾಲಾ ಕಾಲೇಜುಗಳಲ್ಲಿ ಎಷ್ಟರ ಮಟ್ಟಿಗೆ ವಚನಸಾಹಿತ್ಯವನ್ನು ಸಾಕಾರಗೊಳಿಸಿದ್ದಾರೆ?

ಎಲ್ಲ ಮಠಗಳಲ್ಲಿಯೂ ಸಾಹಿತ್ಯಗಳು ಪ್ರಕಟಗೊಂಡಿವೆ. ಧರ್ಮಕ್ಕೆ ಸಂಬಂಧ ಪಟ್ಟಂತೆ ಹಲವಾರು ಪುಸ್ತಕಗಳನ್ನು ತೆಗೆದುಕೊಳ್ಳಬಹುದು.
(ಉತ್ತರ ನಿಜಗುಣ ಶ್ರೀಗಳು)

2 months agoSeptember 12, 2025 1:06 pm

ಪ್ರಶ್ನೆ: ಅಕ್ಕಮಹಾದೇವಿ ನಿಜಕ್ಕೂ ದಿಗಂಬರೆಯಾಗಿದ್ದರೇ?

ಅನುಮಾನವೇ ಇಲ್ಲ. ಅವರು ದಿಟ್ಟ ದಿಗಂಬರೆಯಾಗಿದ್ದರು.
(ಉತ್ತರ ಭಾಲ್ಕಿ ಶ್ರೀಗಳು)

2 months agoSeptember 12, 2025 1:05 pm

ಪ್ರಶ್ನೆ: ಡಾ. ಎಂ. ಎಂ. ಕಲಬುರಗಿಯವರ ಹತ್ಯೆಗೆ ನ್ಯಾಯ ಒದಗಿಲ್ಲ‌. ಒಕ್ಕೂಟ ಹೇಗೆ ಪ್ರಯತ್ನಿಸುತ್ತಿದೆ?

ಅದರ ಬಗ್ಗೆ ಆಯೋಗ ರಚನೆ ಆಗಿದೆ. ನಮ್ಮ ಬೆಂಬಲವೂ ಅದಕ್ಕಿದೆ.

(ಉತ್ತರ ಸಾಣೇಹಳ್ಳಿ ಶ್ರೀಗಳು)

2 months agoSeptember 12, 2025 1:00 pm

ಅಭಿಯಾನ ವಿಡಿಯೋ, ಫೋಟೋ

2 months agoSeptember 12, 2025 12:51 pm

ಪ್ರಶ್ನೆ: ಅಷ್ಠಾವರಣಗಳಲ್ಲಿ ಬರುವ ಪಾದೋದಕ ಲಿಂಗದ ಮೇಲಿನದಾದರೆ ಇಂದಿನ ಸ್ವಾಮಿಗಳ ಪಾದವನ್ನು ತೊಳೆದು ಅವನ್ನೇ ಪಾದೋದಕ ಎನ್ನುವುದು ಹೇಗೆ ವೈಜ್ಞಾನಿಕ ಹಾಗೂ ಹೇಗೆ ವೈಚಾರಿಕ?

ಗದಗ ಶ್ರೀಗಳ ಉತ್ತರ

ಎಲ್ಲಾ ವಿಚಾರಗಳೂ ವೈಜ್ಞಾನಿಕವಾಗಿರುವುದಿಲ್ಲ. ಅಷ್ಠಾವರಣಗಳಲ್ಲಿ ಗುರು-ಲಿಂಗ-ಜಂಗಮ‌ ಪಾದೋದಕ ಎಂಬುದಿದೆ. ಎಲ್ಲವನ್ನೂ ತಿರಸ್ಕರಿಸಲಾಗುವುದಿಲ್ಲ ಹಾಗೇ ಎಲ್ಲವನ್ನೂ ಒಪ್ಪಲಿಕ್ಕಾಗುವುದಿಲ್ಲ

(ಡಾ. ಶಂಭು ಹೆಗಡಾಳ ಧ್ವನಿಗೂಡಿಸಿದರು)

ಗುರು-ಲಿಂಗ-ಜಂಗಮ ವ್ಯಕ್ತಿಗತವಾಗಿ ತೆಗೆದುಕೊಂಡರೆ ಅದು ಅವೈಜ್ಞಾನಿಕವಾಗುತ್ತದೆ. ಅದೇ ತತ್ವಗತವಾಗಿ ತೆಗೆದುಕೊಂಡರೆ ಅದು ವೈಜ್ಞಾನಿಕ. ಆಧ್ಯಾತ್ಮ ಹುಟ್ಟಿದ ನಂತರ ವಿಜ್ಞಾನ ಹುಟ್ಟಿದೆ. ಅದು ತನ್ನದೇ ಆದ ಮಿತಿಗಳನ್ನು ಹೊಂದಿದೆ. ಆದರೆ ಯಾವದೇ ಮಿತಿಯನ್ನು ಹೊಂದದೇ ಇರುವ ಆಧ್ಯಾತ್ಮವನ್ನು ಪ್ರತಿ ಬಾರಿಯೂ ವೈಜ್ಞಾನಿಕ ಓರೆಗೆ ಹಚ್ಚುವುದು ತಪ್ಪಾಗುತ್ತದೆ. ವಿಜ್ಞಾನ ಒಪ್ಪದಿದ್ದರೆ ಅದು ಇಲ್ಲ ಎಂದು ಹೇಳಲಾಗುವುದಿಲ್ಲ. ಪಾದೋದಕವು ಗುರು ಶಿಷ್ಯ ಸಂಯೋಗದಿಂದ ಹುಟ್ಟುವ ಅಪರೂಪದ ಅಮೃತ. ಪಾದೋದಕದ ಬಗ್ಗೆ ಸರಳ ಮಾತುಕತೆಗಳು ಸಲ್ಲುವುದಿಲ್ಲ.

2 months agoSeptember 12, 2025 12:49 pm

ಇಷ್ಠಲಿಂಗ ದೀಕ್ಷೆ ಏಕರೂಪದಲ್ಲೇಕಿಲ್ಲ?

ಭಾಲ್ಕಿ ಶ್ರೀಗಳು

ದೀಕ್ಷಾ ಸಂದರ್ಭದಲ್ಲಿ ವಚನಗಳು ಹಾಗೂ ಸ್ವಲ್ಲ ವ್ಯತ್ಯಾಸವಾಗಬಹುದು. ಆದರೆ ಉದ್ದೇಶ ಒಂದೇ. ಇನ್ನು ಮುಂದಿನ ದಿನಗಳಲ್ಲಿ ನಾವೆಲ್ಲಾ ಸೇರಿ ಚಿಂತನೆ ಮಾಡಿ ಏಕರೂಪತೆಯನ್ನು ತರಲು ಪ್ರಯತ್ನಿಸುತ್ತೇವೆ.

2 months agoSeptember 12, 2025 12:48 pm

ಪ್ರಶ್ನೆ: ಸೂಳೆ ಸಂಕವ್ವೆ ಎಂದು ಇಂದಿಗೂ ಕರೆಯುತ್ತೇವೆ. ಅದು ಎಷ್ಟರ ಮಟ್ಟಿಗೆ ಸರಿ?

ಅವರ ವೃತ್ತಿಯನ್ನು ತೋರಿಸುವದರಿಂದ ಹಾಗೆ ಕರೆಯಲಾಗುತ್ತದೆ. ಒಂದು ವೇಳೆ ಮಾದಾರ ಚನ್ನಯ್ಯರನ್ನು ಕೇವಲ ಚನ್ನಯ್ಯ ಎಂದು ಕರೆದಿದ್ದರೆ, ಇಂದಿನ ವೀರಶೈವರು ಅವರೂ ನಮ್ಮ ಹಿರಿಯರು ಎಂದು ಹೇಳಿಕೊಳ್ಳುತ್ತಿದ್ದರು. ಅಂತಹ ಶರಣರೆಲ್ಲ ತಮ್ಮ ಪೂರ್ವಾಶ್ರಮದ ವೃತ್ತಿಯನ್ನು ತೊರೆದು ಶರಣರಾದರು ಹಾಗೂ ಅವರ ಇತಿಹಾಸವನ್ನು ತಿಳಿಸಲೆಂದು ಅದೇ ಹೆಸರಿನಿಂದ ಕರೆಯುತ್ತಿದ್ದರು.

(ಉತ್ತರ ಭಾಲ್ಕಿ ಶ್ರೀಗಳು)

2 months agoSeptember 12, 2025 12:43 pm

ಶರಣಸತಿ ಲಿಂಗಪತಿ ಇದರ ನಿಜವಾದ ಅರ್ಥ ಏನು?

ಜಗತ್ತಿನಲ್ಲಿ ಎಲ್ಲರೂ ಪೂಜೆ ಮಾಡುವಾಗ ಹೆಣ್ಣು ಎಂಬ ಭಾವನೆಯಿಂದ ಅವನನ್ನು ಒಲಿಸಿಕೊಳ್ಳಬೇಕೆಂದು, ಆತ್ಮದ ಜೊತೆ ಪರಮಾತ್ಮನ ಸಾಂಗತ್ಯ ಬಯಸುವುದೇ ಶರಣಸತಿ ಲಿಂಗಪತಿ ಎಂಬುದು.

(ಉತ್ತರ ನಿಜಗುಣ ಶ್ರೀಗಳು)

2 months agoSeptember 12, 2025 12:42 pm

ಬಸವ ಜಯಂತಿಯಂದು ಉಪ್ಪಿನ ಬೆಟಗೇರಿಯ ಶ್ರೀಗಳು ತಮ್ಮ ಹುಟ್ಟುಹಬ್ಬವನ್ನು ಮಾಡಿಕೊಂಡಿದ್ದಾರೆ. ಇದಕ್ಕೆ ಒಕ್ಕೂಟ ಏನು ಹೇಳುತ್ತದೆ‌?

ಬಸವಣ್ಣನವರ ಜಯಂತಿಯಂದು ನಮ್ಮ ವೈಯಕ್ತಿಕ ಹಬ್ಬದ ಆಚರಣೆ ತುಂಬಾ ತಪ್ಪು

(ಉತ್ತರ ಗದಗ ಶ್ರೀಗಳು)

2 months agoSeptember 12, 2025 12:42 pm

ನೀವು ನಿಮ್ಮ ಮುಂದಿನ ಮಠಾಧಿಪತಿಗಳಾಗಿ ಮಹಿಳೆಯರನ್ನು ನೇಮಿಸುತ್ತೀರಾ?

ಅದನ್ನು ಇವಾಗಲೇ ಹೇಳಲು ಬರುವುದಿಲ್ಲ. ಅಂತಹ ಸಂದರ್ಭ ಬಂದಾಗ ವಿಚಾರ ಮಾಡುತ್ತೇವೆ.

(ಉತ್ತರ ಸಾಣೇಹಳ್ಳಿ ಶ್ರೀಗಳು)

2 months agoSeptember 12, 2025 12:15 pm

ಫೋಟೋಗಳಲ್ಲಿ ಸಂವಾದ ಕಾರ್ಯಕ್ರಮ

2 months agoSeptember 12, 2025 12:09 pm

ಪ್ರಶ್ನೆ: ಮೂಢನಂಬಿಕೆಗಳನ್ನು ಹೊಡೆದು ಹಾಕಿದ ಶರಣರ ಹೆಸರುಗಳ ಮಠದಲ್ಲಿ ಎಲ್ಲಾ ಮೂಢನಂಬಿಕೆಗಳನ್ನು ನೀರೆರೆದು ಪೋಷಿಸುತ್ತಿದ್ದಾರೆ?

ಮಠದಲ್ಲಿ ಹಲವು ಕಂದಾಚಾರಗಳು ಜಾರಿಯಲ್ಲಿವೆ. ಧಾರವಾಡದ ಮೃತ್ಯುಂಜಯ ಅಪ್ಪಂಗಳು ಯಾರಿಗೂ ಯಂತ್ರ-ತಂತ್ರ ಕಟ್ಟದೇ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಹೀಗೆ ಹಲವಾರು ಸ್ವಾಮಿಗಳು ಇಂತಹ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಅಂತಹ ಮಂತ್ರವಾದಿಗಳ ಬಗ್ಗೆ ನಿಮ್ಮನ್ನು ಎಚ್ಚರಿಸಲೆಂದೇ ಈ ಅಭಿಯಾನ

(ಉತ್ತರ ನಿಜಗುಣ ಶ್ರೀಗಳು)

2 months agoSeptember 12, 2025 12:09 pm

ಪ್ರಶ್ನೆ: ಬಸವಣ್ಣನವರು ಲಿಂಗೈಕ್ಯರಾದರೋ ಅಥವಾ ಆತ್ಮಹತ್ಯೆ ಮಾಡಿಕೊಂಡರೋ?

ಬಸವಣ್ಣ ಕಲ್ಯಾಣ ಕಟ್ಟಿದ ಕಾರಣಿಕ ಪುರುಷ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಾಗಿರಲಿಲ್ಲ. ಇದು ಸಂಪೂರ್ಣ ಸುಳ್ಳು. ಇದನ್ನು ಉದ್ದೇಶಪೂರ್ವಕವಾಗಿ ಹೇಳಲಾಗುತ್ತಿದೆ. ಕೂಡಲಸಂಗಮಕ್ಕೆ ಬಂದ ಅವರು ಲಿಂಗೈಕ್ಯರಾದರು.

(ಉತ್ತರ ಭಾಲ್ಕಿ ಶ್ರೀಗಳು)

2 months agoSeptember 12, 2025 11:57 am

ಬಹುತೇಕ ಪ್ರಶ್ನೆಗಳು ಜಾತಿಯ ಮೇಲೆ ಬರುತ್ತಿವೆ.

2 months agoSeptember 12, 2025 11:54 am

ಪ್ರಶ್ನೆ: ಬಸವಣ್ಣನವರ ಪ್ರಕಾರ ಬದುಕು ಎಂದರೇನು?

ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು ಎಂಬ ಬಸವಣ್ಣನವರ ವಚನ ತಿಳಿಸುತ್ತದೆ. ಗುರು, ದೇವರಲ್ಲಿ ನಿಷ್ಠೆ ಇಟ್ಟುಕೊಂಡು ಬದುಕಬೇಕು ಎಂಬುದು ಬಸವಣ್ಣನವರ ಬದುಕಿನ ಉಕ್ತಿ.

(ಉತ್ತರ: ಗದಗ ಶ್ರೀಗಳು)

2 months agoSeptember 12, 2025 11:53 am

ಪ್ರಶ್ನೆ: ಕ್ರಿಯೆ ಮತ್ತು ಜ್ಞಾನ ಎರಡೂ ಬೇಕು. ಆದರೆ ಎಲ್ಲ ಸ್ವಾಮಿಗಳೂ ಜ್ಞಾನವಂತರಾಗಿದ್ದಾರೆ. ಕ್ರಿಯಾವಂತರಾಗಿಲ್ಲ ಎನ್ನುವುದು ನನ್ನ ಭಾವನೆ.

ನಿನ್ನ ಅಭಿಪ್ರಾಯ ತಪ್ಪು. ನಾವೆಲ್ಲಾ ಸ್ವಾಮಿಗಳು ಜ್ಞಾನವಂತರೂ ಹಾಗೂ ಕ್ರಿಯಾವಂತರೂ ಆಗಿದ್ದೇವೆ.

(ಉತ್ತರ: ಸಾಣೇಹಳ್ಳಿ ಶ್ರೀಗಳು)

2 months agoSeptember 12, 2025 11:52 am

ಪ್ರಶ್ನೆ: ಮೂಲತಃ ಕಾಯಕವೇ ಕೈಲಾಸ ಎಂದು ಹೇಳಿದವರು ಯಾರು ಮತ್ತು ಅದರ ತಾತ್ಪರ್ಯ ಏನು?

ಮೂಲತಃ ಇದನ್ನು ಹೇಳಿದವರು ಆಯ್ದಕ್ಕಿ ಮಾರಯ್ಯನವರು. ಹಾಗೂ ಸತ್ಯ ನಿಷ್ಠೆಯಿಂದ ಮಾಡುವುದೇ ಕಾಯಕ

(ಉತ್ತರ: ಸಾಣೇಹಳ್ಳಿ ಶ್ರೀಗಳು)

2 months agoSeptember 12, 2025 11:52 am

ಪ್ರಶ್ನೆ: 12ನೇ ಶತಮಾನದಲ್ಲಿ ಶರಣರು ಅಂತರ್ಜಾತಿ ವಿವಾಹ ಮತ್ತು ದಲಿತರ ಮನೆಯಲ್ಲಿ ಭೋಜನ ಮಾಡಿದರು. ಆದರೆ ಈಗಿನ ನೀವುಗಳು ಎಷ್ಟು ಜನ ಆ ಕೆಲಸ ಮಾಡಿದ್ದೀರಿ?

ಗದಗಿನ ಶ್ರೀಗಳು ಹಾಗೂ ಇಲಕಲ್ಲದ ಶ್ರೀಗಳು ಸೇರಿ ದೇವದಾಸಿ ಪಿನರ್ವಸತಿ ಕೇಂದ್ರದಲ್ಲಿ 440 ದೇವದಾಸಿಯರ ಮಕ್ಕಳ ಮದುವೆ ಮಾಡಿದ್ದಾರೆ. 120 ಜನ ದೇವದಾಸಿ ಮಕ್ಕಳು ಪುನರ್ವಸತಿ ಕೇಂದ್ರದಲ್ಲಿದ್ದಾರೆ.

(ಉತ್ತರ: ಬಿ. ಎಲ್. ಪಾಟೀಲ )

ಈ ವೇದಿಕೆಯ ಮೇಲಿರುವ ಎಲ್ಲಾರೂ ಆ ಕೆಲಸ ಮಾಡಿದ್ದಾರೆ. ಹಾಗೂ ನೀವು ಒಳಪಂಗಡಗಳನ್ನು ಮುರಿದು ಹೊರಬಂದು ಇಂತಹ ಮದುವೆಗಳನ್ನು ಮಾಡಲು ಕರೆ ಕೊಡಬೇಕು. ಯಾರೇ ಲಿಂಗಧಾರಿಗಳಾದರೂ ಅವರ ಮದುವೆ ಅಂತರ್ಜಾತಿ ಎನಿಸುವುದಿಲ್ಲ.

(ಉತ್ತರ: ಭಾಲ್ಕಿ ಶ್ರೀಗಳು)

2 months agoSeptember 12, 2025 11:47 am

ಸಾಂಸ್ಕೃತಿಕ ನಾಯಕ ಕೃತಿ ಲೋಕಾರ್ಪಣೆ

ಅಥಣಿಯ ಬಿ. ಎಲ್. ಪಾಟೀಲರು ರಚಿಸಿರುವ ಪುಸ್ತಕ ‘ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು’ ಕೃತಿಯ ಲೋಕಾರ್ಪಣೆ.

2 months agoSeptember 12, 2025 11:45 am

ಪ್ರಾಸ್ತಾವಿಕ ನುಡಿ: ಶೇಗುಣಸಿಯ ಮಹಾಂತ ಶ್ರೀಗಳು

ಮಕ್ಕಳೊಂದಿಗೆ ಸಂವಾದವನ್ನು ಏಕೆ ಮಾಡಬೇಕೆಂದರೆ, ಇಡೀ ಜಗತ್ತಿನಲ್ಲಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ಯಾವುದಾದರೂ ಇದ್ದರೆ ಅದು ನಮ್ಮ ಭಾರತ.

ಏನೇ ಆದರೂ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಜಪಾನಿನಲ್ಲಿ ಹೋಂಡಾ ಕಂಪನಿ ಮೂರು ಸಾರಿ ಕಂಪನಿ ಕಟ್ಟಿದರೂ ಅದು ಸುನಾಮಿಯಿಂದ ನೆಲಸಮವಾಗುತ್ತದೆ. ನಾಲ್ಕನೇ ಸಮಯದಲ್ಲಿ ಕಂಪನಿಯನ್ನು ಪುನಃ ಸ್ಥಾಪಿಸಲು ಹೋದಾಗ ಅವರನ್ನು ಒಬ್ವರು ಪ್ರಶ್ನೆ ಮಾಡುತ್ತಾರೆ‌. ಏಕೆ ಪದೇ ಪದೇ ಕಟ್ಟುತ್ತೀರಿ. ನಿನ್ಮ ಕಂಪನಿಯನ್ನು ಸುನಾಮಿ ಮತ್ತೆ ನಾಶ ಮಾಡುತ್ತದೆ ಎಂದಾಗ ಆ ಕಂಪನಿ ಮಾಲೀಕ ಹೇಳಿದ ಮಾತು, ‘ಈ ಸುನಾಮಿ ನನ್ನ ಹೊರಗಿನ ಕಟ್ಟಡವನ್ನು ನೆಲಸಮ ಮಾಡಬಹುದೇ ವಿನಃ, ನನ್ನೊಳಗಿನ ಆತ್ಮವಿಶ್ವಾಸವನ್ನಲ್ಲ’ ಎಂದರಂತೆ.

2 months agoSeptember 12, 2025 11:17 am

ಉದ್ಘಾಟನೆ, ಸಂವಾದಕ್ಕೆ ಸಜ್ಜು

2 months agoSeptember 12, 2025 10:37 am

ಷಟಸ್ಥಲ ಧ್ವಜಾರೋಹಣ, ಪ್ರಾರ್ಥನೆ

ಮುರುಘಾ ಮಠದಲ್ಲಿ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಅಭಿಯಾನ ಸಮಿತಿ, ಲಿಂಗಾಯತ ಬಸವಪರ ಸಂಘಟನೆಗಳ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

ಮಹಾಲಯದ ವಿದ್ಯಾರ್ಥಿಗಳಿಂದ ವಚನ ಪ್ರಾರ್ಥನೆ ನಡೆಯಿತು.

2 months agoSeptember 12, 2025 10:36 am

ಬಸವ ರಥಕ್ಕೆ ಸ್ವಾಗತ

ಮುರುಘಾಮಠದಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಮಿತಿಯ ಸದಸ್ಯರು ಬಸವ ರಥವನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿ.ವಿ. ಕೊಂಗವಾಡ, ಸಿದ್ದರಾಮ ನಡಕಟ್ಟಿ, ನಾಗರಾಜ ಪಟ್ಟಣಶೆಟ್ಟಿ, ಬಸವಂತಪ್ಪ ತೋಟದ, ಸಿ.ಜಿ. ಪಾಟೀಲ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

2 months agoSeptember 12, 2025 10:33 am

ಇಂದಿನ ಕಾರ್ಯಕ್ರಮ

11 ಗಂಟೆಗೆ ಕೆಎಲ್ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ.

3.30ಕ್ಕೆ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನದಿಂದ ಶ್ರೀ ಮುರುಘಾಮಠದವರೆಗೆ ಬಸವೇಶ್ವರರ ಭಾವಚಿತ್ರ ಮತ್ತು ವಚನ ಸಾಹಿತ್ಯದ ಭವ್ಯ ಮೆರವಣಿಗೆ, ಪಾದಯಾತ್ರೆ.

6 ಗಂಟೆಗೆ ಸಾರ್ವಜನಿಕ ಸಮಾರಂಭ ಉಪನ್ಯಾಸ ಕಾರ್ಯಕ್ರಮ, ಶ್ರೀ ಶಿವಯೋಗೀಶ್ವರ ಸಭಾಭವನ ಶ್ರೀ ಮುರುಘಾಮಠದಲ್ಲಿ.

ರಾತ್ರಿ 8 ಗಂಟೆಗೆ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ.

ಧಾರವಾಡ

Share This Article
Leave a comment

Leave a Reply

Your email address will not be published. Required fields are marked *