ಧಾರವಾಡ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವ ಕೇಂದ್ರ, ಕರ್ನಾಟಕ ಲಿಂಗಾಯತ ಒಳಪಂಗಡಗಳ ಏಕತಾ ಸಮಿತಿ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವಚನ ದರ್ಶನ ಮಿಥ್ಯ v/s ಸತ್ಯ ಗ್ರಂಥದ ಬಿಡುಗಡೆ ಸಮಾರಂಭ ಲಿಂಗಾಯತ ಭವನದಲ್ಲಿ ಎಪ್ರಿಲ್ 19, 2025ರ ಮುಂಜಾನೆ 10-30 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು, ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಪೂಜ್ಯ ಜ್ಞಾನೇಶ್ವರಿ ಮಾತಾಜಿ ವಹಿಸಲಿದ್ದಾರೆ.
ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಅಧ್ಯಕ್ಷತೆ ವಹಿಸಿ ಸಮಾರಂಭ ಉದ್ಘಾಟನೆ ಮಾಡಲಿದ್ದಾರೆ. ಜಾ.ಲಿಂ.ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಗ್ರಂಥ ಬಿಡುಗಡೆ ಹಾಗೂ ಆಶಯ ನುಡಿ ಆಡಲಿದ್ದಾರೆ.
ಶರಣ ಸಾಹಿತಿ ಡಾ. ವೀರಣ್ಣ ರಾಜೂರ ಅವರು ಗ್ರಂಥ ಪರಿಚಯ ಮಾಡಿಕೊಡುತ್ತಾರೆ. ಮುಖ್ಯ ಅತಿಥಿಗಳಾಗಿ ಜಿ. ವಿ. ಕೊಂಗವಾಡ, ಎನ್. ಜಿ. ಮಹಾದೇವಪ್ಪ, ಸಿ.ಎಂ. ಕುಂದಗೋಳ, ರವೀಶ ಸಿ.ಆರ್. ಭಾಗವಹಿಸುವರು.
ಗೌರವ ಉಪಸ್ಥಿತಿ ಪ್ರದೀಪಗೌಡ ಪಾಟೀಲ, ಸಂಗಮೇಶ ಲೋಕಾಪುರ, ಲಿಂಗರಾಜ ಅಂಗಡಿ, ಶಶಿಧರ ಕರವೀರಶೆಟ್ಟರ ವಹಿಸುತ್ತಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜೆ.ಎಲ್.ಎಂ. ಯುವ ಘಟಕದ ಅಧ್ಯಕ್ಷ ಶರಣ ಸಿ.ಜಿ. ಪಾಟೀಲ ವಿನಂತಿಸಿಕೊಂಡಿದ್ದಾರೆ.
