ಧಾರವಾಡ
ನಗರದ 30ಕ್ಕೂ ಹೆಚ್ಚು ವ್ಯಾಪಾರಸ್ಥರು ಬುಧವಾರ ತಮ್ಮ ಅಂಗಡಿ, ಕಂಪನಿ, ಹೋಟೆಲ್, ವಸತಿಗೃಹ, ಆಸ್ಪತ್ರೆ ಮತ್ತು ಮನೆಗಳಲ್ಲಿ ಚೆನ್ನಬಸವಣ್ಣನವರ ಜಯಂತಿ ಮತ್ತು ವಚನ ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.

ನಡಕಟ್ಟಿ, ತೋಟದ, ಮರಳಪ್ಪನವರ, ಶರಣ್ಣನವರ, ಮತ್ತಿತರ ಕುಟುಂಬದವರ ಅಂಗಡಿ ಮುಂಗಟ್ಟುಗಳಲ್ಲಿ ಬಸವ ಕೇಂದ್ರದ ಸದಸ್ಯರು ನಾಲ್ಕೈದು ತಂಡಗಳಲ್ಲಿ ಕ್ರಿಯಾಮೂರ್ತಿಗಳಾಗಿ ಪೂಜಾ ಕಾರ್ಯ ನಡೆಸಿಕೊಟ್ಟರು.

ಬಸವಣ್ಣ, ಚೆನ್ನಬಸವಣ್ಣ ಮತ್ತಿತರ ಶರಣರ ಭಾವಚಿತ್ರಗಳನ್ನು ಎಲ್ಲ ಅಂಗಡಿ, ಮನೆಗಳಲ್ಲಿ ಇಟ್ಟು ವಚನಾಧಾರಿತ ಪೂಜೆ ಹಾಗೂ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು.

ಬಸವ ಕೇಂದ್ರದ ಮುಖ್ಯಸ್ಥರಾದ ಬಸವಂತಪ್ಪ ತೋಟದ, ಅನಿಲ ಅಂಗಡಿ, ಶೇಖರ ಕುಂದಗೋಳ, ಶಿವಪ್ಪ ಕಿತ್ತೂರ ಮತ್ತಿತರರು ಕ್ರಿಯಾಮೂರ್ತಿಗಳಾಗಿದ್ದರು.

