ಧಾರವಾಡ :
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೂತನ ವಿಪಕ್ಷ ನಾಯಕ ರಾಜಶೇಖರ ಕಮತಿಯವರು ತಮ್ಮ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ಕಾರ್ಯ ಆರಂಭಿಸಿದರು.
ಸಾಮಾನ್ಯವಾಗಿ ಎಲ್ಲರೂ ಲಕ್ಷ್ಮಿ ಸರಸ್ವತಿ ಗಣಪತಿ ಫೋಟೋ ಇಟ್ಟು ಪೂಜೆ ಮಾಡುವುದು ವಾಡಿಕೆ, ಆದರೆ ಕಮತಿ ಅವರು ಬಸವಣ್ಣನವರ ಭಾವಚಿತ್ರ ಇಟ್ಟು ಕಚೇರಿ ಆರಂಭಿಸಿ ಆದರ್ಶವಾಗಿದ್ದಾರೆ.
ಮೂರುಸಾವಿರ ಮಠದ ಜಗದ್ಗುರು ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಪಕ್ಷದ ನಾಯಕರು ಪಾಲಿಕೆ ಸದಸ್ಯರು ಅವರಿಗೆ ಶುಭವನ್ನು ಕೋರಿದರು.
ನಗರದಲ್ಲಿ ರಸ್ತೆಗಳು ಎಲ್ಲಾ ಹದಗೆಟ್ಟು ಹೋಗಿವೆ ಅವುಗಳ ದುರಸ್ತಿ ಕಾರ್ಯ ಶೀಘ್ರವಾಗಿ ನೆರವೇರಬೇಕು ಹಾಗೂ ಮಹಾನಗರಗಳನ್ನು ಸ್ವಚ್ಛ ಮತ್ತು ಸುಂದರವಾಗಿ ಇಡುವಂತೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ರಾಜಕೀಯ ಮುಖಂಡರಾದ ಅನಿಲ್ ಕುಮಾರ್ ಪಾಟೀಲ್ ಶಿವಲೀಲಾ ಕುಲಕರ್ಣಿ ಪಾಲಿಕೆ ಸದಸ್ಯರಾದ ದೊರೆರಾಜ ಮಣಿಕುಂಟ್ಲ, ಇಮ್ರಾನ್ ಎಲಿಗಾರ, ಬಸವಂತಪ್ಪ ತೋಟದ ಮುಂತಾದವರು ಇದ್ದರು.