ಬೀದರ
ಬಸವಾದಿ ಶರಣರ ಕುರಿತಾಗಿನ ಶರಣ ಕಿರಣ ಪರೀಕ್ಷೆಯನ್ನು ಮಕ್ಕಳಿಗಾಗಿ ಬರುವ ಫೆ.10, 11 ಹಾಗೂ 12 ರಂದು ಮೂರು ದಿವಸಗಳ ಕಾಲ ಬಸವಸೇವಾ ಪ್ರತಿಷ್ಠಾನ ವತಿಯಿಂದ ಆಯೋಜಿಸುತ್ತಿರುವ ವಚನ ವಿಜಯೋತ್ಸವ ನಿಮಿತ್ತ ನಡೆಸಲಾಗುತ್ತಿದೆ.
ಈ ಕುರಿತು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗಂಗಾಂಬಿಕೆ ಅಕ್ಕ ಅವರು ಪ್ರಕಟಣೆ ನೀಡಿದ್ದು, ಬೀದರ್ ನಗರದ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಓದುತ್ತಿರುವ ಮಕ್ಕಳಿಗೆ ಫೆಬ್ರವರಿ 10ರಂದು ಬೆಳಿಗ್ಗೆ 10.30ಕ್ಕೆ ಶರಣ ಕಿರಣ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆಯನ್ನು (ವಚನಗಳ ಆಧಾರಿತ) ಬಸವ ಸೇವಾ ಪ್ರತಿಷ್ಠಾನ ಹಾಗೂ ಬೀದರನ ಬನ್ಸಲ್ ಕ್ಲಾಸೆಸ್ ಅಕಾಡೆಮಿ ಸಹಯೋಗದೊಂದಿಗೆ ಆಯೋಜಿಸಿದೆ.
ಪ್ರತಿ ಶಾಲೆಯಿಂದ ಗರಿಷ್ಠ ಹತ್ತು ಮಕ್ಕಳಿಗೆ ಮಾತ್ರ ಅವಕಾಶ ಇದ್ದು, ಪರೀಕ್ಷೆಯಲ್ಲಿ ಅಗ್ರ ಶ್ರೇಯಾಂಕ ಪಡೆದ ಪ್ರಥಮ, ದ್ವಿತೀಯ, ತೃತೀಯ ಮಕ್ಕಳಿಗೆ ಸೂಕ್ತ ಬಹುಮಾನ, ಪ್ರಶಸ್ತಿ ನೀಡಿ ವಚನ ವಿಜಯೋತ್ಸವ ಸಮಾರಂಭದಲ್ಲಿ ಗೌರವಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಮಲ್ಲಿನಾಥ ಮಠಪತಿ ಅವರನ್ನು (9972207223) ಸಂಪರ್ಕಿಸಬಹುದಾಗಿದೆ.