ಡಾ. ಶ್ರೀಶೈಲಪ್ಪ ಲಿಂಗೈಕ್ಯ, ನಿಜಾಚರಣೆ ವಿಧಿಗಳೊಂದಿಗೆ ನಡೆದ ಅಂತಿಮ ಸಂಸ್ಕಾರ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ನಗರದಲ್ಲಿ ಲಿಂಗೈಕ್ಯರಾದ ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಶ್ರೀಶೈಲಪ್ಪ ಎಂ. ಕುದರಿ ಅವರ ಅಂತಿಮ ಸಂಸ್ಕಾರವನ್ನು ಸೋಮವಾರ ಜಿಗಣಿಯ ಲಿಂಗಾಯತ – ವೀರಶೈವ ರುದ್ರಭೂಮಿಯಲ್ಲಿ ಲಿಂಗಾಯತ ಧರ್ಮ ನಿಜಾಚರಣೆಯಂತೆ ನಡೆಸಲಾಯಿತು.

ಅಂತಿಮ ಸಂಸ್ಕಾರವನ್ನು ವಚನಮೂರ್ತಿ ಶ್ರೀಶೈಲ ಮಸೂತೆ ಅವರು ಬಸವ ತತ್ವದ ಪ್ರಕಾರ ನಡೆಸಿಕೊಟ್ಟರು.

ಲಿಂಗೈಕ್ಯ ಕುದರಿ ಅವರ ಪತ್ನಿ ಶರಣೆ ಇಂದುಮತಿ, ಪುತ್ರಿಯರಾದ ಅರುಣಾ ಕರ್ಪೂರ್, ಅರ್ಚನಾ, ಅಳಿಯರಾದ ಮಹೇಶ ಕರ್ಪೂರ್, ಮೊಮ್ಮಕ್ಕಳಾದ ಅಮೇಯ, ಆಹನಾ, ಇತರ ಕುಟುಂಬ ಸದಸ್ಯರು, ಮಿತ್ರರು, ಅನೇಕ ವಿದ್ಯಾರ್ಥಿಗಳು ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಘಟಕದ ಉಪಾಧ್ಯಕ್ಷ ಸಂಜೀವ ಕಡಗದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ಶರಣು ಸಮರ್ಪಿಸಿದರು.

ಲಿಂಗೈಕರು ರಸಾಯನಶಾಸ್ತ್ರ ವಿಷಯದ ಪ್ರಾಧ್ಯಾಪಕರಾಗಿ 32 ವರ್ಷ ಸೇವೆ ಸಲ್ಲಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ರಸಾಯನಶಾಸ್ತ್ರ ವಿಷಯದಲ್ಲಿ ಪಿಎಚ್ಡಿ ಪಡೆದವರಾಗಿದ್ದಾರೆ.

ವಚನ ಮೂರ್ತಿ ಶ್ರೀಶೈಲ ಮಸೂತಿಯವರು ಲಿಂಗೈಕ್ಯರ ವಿದ್ಯಾರ್ಥಿಯಾಗಿದ್ದರು. “ನನ್ನ ಗುರುಗಳ ಲಿಂಗೈಕ್ಯದ ಅಂತ್ಯ ಸಂಸ್ಕಾರ ಮಾಡುವ ಅವಕಾಶ ನನಗೆ ಒದಗಿ ಬಂದದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ,” ಎಂದು ಮಸೂತೆ ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
1 Comment

Leave a Reply

Your email address will not be published. Required fields are marked *