ಎಲ್ಲರೂ ಹಿಂದೂ ಎನ್ನುವ ಶ್ವಾಸ ಗುರು ವಚನಾನಂದ ಶ್ರೀಗಳಿಗೆ ಬಹಿರಂಗ ಪತ್ರ

ಪೂಜ್ಯರೆ ಇತ್ತೀಚೆಗೆ ತಮ್ಮ ಒಂದು ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀರಶೈವರು, ಲಿಂಗಾಯತರು, ಜೈನರು ಎಲ್ಲರೂ ಹಿಂದು ಎಂದು ಹೇಳಿದ್ದೀರಿ.

ಭೌಗೋಳಿಕವಾಗಿ ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಈ ದೇಶದಲ್ಲಿ ವಾಸವಿರುವ ಪ್ರತಿಯೊಬ್ಬರೂ ಸಹ ಭೌಗೋಳಿಕವಾಗಿ ಹಿಂದುಗಳೇ.

ಧಾರ್ಮಿಕವಾಗಿ ತೆಗೆದುಕೊಂಡರೆ ಮೊದಲನೆಯದಾಗಿ ಹಿಂದು ಒಂದು ಧರ್ಮವೇ ಅಲ್ಲ ಅಂತ ಈ ದೇಶದ ಸುಪ್ರೀಂಕೋರ್ಟ್ ಹೇಳಿದೆ, ಹಾಗಿದ್ದ ಮೇಲೇ ನಮ್ಮ ಧರ್ಮ ಹಿಂದೂ ಧರ್ಮ ಆಗಲು ಹೇಗೆ ಸಾಧ್ಯ.

ಹಿಂದೂ ಧರ್ಮದ ಆಧಾರ ಸ್ಥಂಭ ಅಂದರೆ ವೇದಗಳು ಶಾಸ್ತ್ರಗಳು ಪುರಾಣಗಳು ಮುಕ್ಕೋಟೀ ದೇವರುಗಳು ದೇವಸ್ಥಾನಗಳು
ಜಾತಿ ಪದ್ಧತಿಗಳು, ಸ್ತ್ರೀ ಪುರುಷರ ಭೇಧಗಳು, ಗುರು ಶ್ರೇಷ್ಠ ಶಿಷ್ಯ ಕನಿಷ್ಠ ಎಂಬ ತಾರತಮ್ಯಗಳು.

ಇಂಥಹ ಸಾವಿರಾರು ವಿಚಾರದಲ್ಲಿ ಹಿಂದೂ ಧರ್ಮದ ಸಂಪ್ರದಾಯ ಆಚಾರಣೆಗಳನ್ನು ಧಿಕ್ಕರಿಸಿದವರು ಶರಣರು. ಈಗಲೂ ಹಿಂದೂ ಧರ್ಮ ಶರಣರು ಹೇಳಿದ ವೇದಗಳನ್ನು ಪುರಾಣಗಳನ್ನು ಶಾಸ್ತ್ರಗಳನ್ನು ದೇವಾಸ್ಥಾನಗಳನ್ನು ಪೂಜಾರಿ ಪುರೋಹಿತರನ್ನು ಧಿಕ್ಕರಿಸಿದರೆ ನಾವು ಈಗಲೂ ಸಹ ಹಿಂದೂ ಧರ್ಮದ ಭಾಗವಾಗಲು ಸಿದ್ದ.

ನಿಮ್ಮ ಪಂಚಮಸಾಲಿ ಪೀಠ ಶತಮಾನಗಳಿಂದ ಪಂಚಾಚರ್ಯರ ಅಧೀನದಲ್ಲಿ ಇತ್ತು. ನೀವು ಏಕೆ ಹೊರಗೆ ಬಂದಿದ್ದು ಹೇಳಿ.

ವೈಧಿಕತೆಯನ್ನು ಧಿಕ್ಕರಿಸಿದ ಅವೈಧಿಕ ಧರ್ಮ ಲಿಂಗಾಯತ ಧರ್ಮ.

ನೀವು ಬೇಕಾದರೆ ಹಿಂದೂ ಧರ್ಮದ ಭಾಗವಾಗಿಯೇ ಇರಿ ನಿಮ್ಮ ಅನುಕೂಲಕ್ಕಾಗಿ ಇಡೀ ಲಿಂಗಾಯತ ಸಮುದಾಯವನ್ನು ವೈದಿಕರ ಗುಲಾಮರನ್ನಾಗಿ ಮಾಡಬೇಡಿ.

ಶರಣು ಶರಣಾರ್ಥಿ ಗಳೊಂದಿಗೆ
ವಿಶ್ವೇಶ್ವರಯ್ಯ ಬಿಎಂ ಹೆಮ್ಮನಬೇತೂರು
ಪ್ರದಾನ ಕಾರ್ಯದರ್ಶಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು
ದಾವಣಗೆರೆ ತಾಲ್ಲೂಕು ದಾವಣಗೆರೆ

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು