ದುಬೈ ವಿಶ್ವಶಾಂತಿ ಯಾತ್ರೆಗೆ ಪರುಷ ಕಟ್ಟೆಯಿಂದ ಚಾಲನೆ

ಬಸವಕಲ್ಯಾಣ

ಬಸವಣ್ಣನವರ ಸಹೋದರತ್ವ ಭಾವನೆ ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ವಿದೇಶದ ದುಬೈನಲ್ಲಿ 6 ನೇ ಅಂತರರಾಷ್ಟ್ರೀಯ ಮಟ್ಟದ ಬಸವತತ್ವ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶದಲ್ಲಿ ಭಾರತದ ಅನೇಕ ರಾಜ್ಯದಿಂದ ಬಸವ ಭಕ್ತರು ಉತ್ಸಾಹದಿಂದ ಪಾಲ್ಗೊಳ್ಳಲು ಮುಂಚಿತವಾಗಿ ವಿಮಾನದ ಟಿಕೆಟ್ ಮಾಡಿಕೊಂಡಿದ್ದಾರೆ ಎಂದು ಬಸವ ಧರ್ಮ ಪೀಠದ ಕುಂಬಳಗೊಡು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮಿಜಿ ನುಡಿದರು.

ದುಬೈ ಅಂತರಾಷ್ಟ್ರೀಯ ಬಸವತತ್ವ ಸಮ್ಮೇಳನ ಹಾಗೂ ವಿಶ್ವ ಶಾಂತಿಯಾತ್ರೆ ಪ್ರಯುಕ್ತ ಅವರು ಇಂದು ಪಟ್ಟಣದ ಬಸವೇಶ್ವರ ಪರುಷ ಕಟ್ಟೆಯಲ್ಲಿ ಪೂಜೆಯನ್ನು ಸಲ್ಲಿಸಿ ಮಾತನಾಡಿದರು.

ದುಬೈಯಲ್ಲಿ ನಡೆಯುವ ಬಸವತತ್ವ ಸಮಾವೇಶವನ್ನು ರಾಷ್ಟ್ರೀಯ ಬಸವದಳ, ಗುರುಬಸವ ಫೌಂಡೇಶನ್ ಹೈದರಾಬಾದ್, ಶ್ರೀ ಚನ್ನಬಸವೇಶ್ವರ ಸಾಹಿತ್ಯಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಜಗನ್ನಾಥ ಆರ್ಟ್ ಹೈದರಾಬಾದ್ ಇವರ ಸಹಯೋಗದೊಂದಿಗೆ ದುಬೈನಲ್ಲಿ ಆಯೋಜಿಸಲಾಗಿದೆ ಎಂದರು.

ನೇಪಾಳದಲ್ಲಿ ಪ್ರಥಮ ಸಮಾವೇಶ 2022 ರಲ್ಲಿ ಜರುಗಿತು. ಹಾಗೇ ಅನೇಕ ರಾಷ್ಟ್ರಗಳಲ್ಲಿ ಬಸವತತ್ವ ಜನತೆಗೆ ತಲುಪಿಸುವ ಸಂಕಲ್ಪ ಪೂಜ್ಯ ಡಾ ಮಾತೆ ಮಹಾದೇವಿಯವರದಾಗಿತ್ತು. ಆ ಸಂಕಲ್ಪ ನಾವು ವಿದೇಶಗಳಲ್ಲಿ ಆಯೋಜನೆ ಮಾಡುತ್ತ ಬಸವಧರ್ಮದ ತತ್ವಗಳನ್ನು ನಾವು ಪ್ರಸಾರ ಮಾಡುತ್ತಿದ್ದೇವೆ. ಸಮಾಜದಲ್ಲಿ ಅನೇಕ ಸ್ವಾಮೀಜಿಗಳು ಮಾಡುತ್ತಿದ್ದಾರೆ ಇನ್ನೂ ಬಸವಧರ್ಮ ತತ್ವ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರವಾಗಬೇಕಿದೆ ಎಂದು ಪೂಜ್ಯರು ನುಡಿದರು.

ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಪೂಜ್ಯ ಚನ್ನಬಸವಾನಂದ ಸ್ವಾಮಿಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಅನೇಕರು ಭಾಗವಹಿಸುತ್ತಿದ್ದಾರೆ. ಹಾಗೂ ಬಸವಧರ್ಮದ ತತ್ವ ವಿಶ್ವಮಟ್ಟದಲ್ಲಿ ಸ್ವಾಮೀಜಿಯವರು ಪ್ರಚಾರ ಮಾಡುತ್ತಿರುವುದು ಅಭಿನಂದನೀಯವಾಗಿದೆ ಎಂದರಲ್ಲದೆ ವಿಶ್ವಶಾಂತಿ ಯಾತ್ರೆಗೆ, ವಿಶ್ವ ಮಟ್ಟದ ಸಮಾವೇಶಕ್ಕೆ ಪರುಷ ಕಟ್ಟೆಯಲ್ಲಿ ಬಸವ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಶುಭಹಾರೈಸಿದರು.

ಮೊದಲಿಗೆ ಪರುಷಕಟೆಯಲ್ಲಿ ಗುರುಬಸವ ಪೂಜೆಯೊಂದಿಗೆ ಗುರುಬಸವ ಪಠಣ ಸ್ತೋತ್ರ ಮಾಡಲಾಯಿತು. ಇದೇ ವೇಳೆ ಬೀದರ ಬಸವ ಮಂಟಪದ ಪೂಜ್ಯ ಸತ್ಯದೇವಿ ಮಾತಾಜಿ, ಹೈದರಾಬಾದ್ ಗುರುಬಸವ ಫೌಂಡೇಶನ್ ಅಧ್ಯಕ್ಷ ನಾಗನಾಥ ಪಾಟೀಲ, ಪತ್ರಕರ್ತ ಧರ್ಮೆಂದ್ರ ಪೂಜಾರಿ, ಸರಸ್ವತಿ ಶೆಟಕಾರ್, ವಿಜಯಕುಮಾರ ದಿಂಡೆ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ನಿರ್ಮಲಾ ನಿಲಂಗೆ, ಶ್ರೀನಾಥ ಕೋರೆ ಸೇರಿದಂತೆ ಹಲವರಿದ್ದರು.

ವಚನ ಗಾಯನವನ್ನು ಚಂದ್ರಕಲಾ ಪಾಟೀಲ ನೆರವೇರಿಸಿದರು. ತಬಲಾ ಸಾಥ್ ಶರಣಪ್ಪ ಗದಗ ನೀಡಿದರು. ರಾಷ್ಟ್ರೀಯ ಬಸವ ದಳದ ಪ್ರಮುಖರಾದ ಶಿವಶರಣಪ್ಪ ಪಾಟೀಲ. ಶ್ರೀನಾಥ್ ಕೋರೆ, ಧರ್ಮೇಂದ್ರ ಪೂಜಾರಿ, ಬಗ್ದೂರಿ ದರ್ಶನ, ಬಸವರಾಜ ದಿಂಡೆ, ಚಂದ್ರಕಲಾ ಪಾಟೀಲ, ಶರಣಪ್ಪ ಗದಗ, ನಿರ್ಮಲಾ ನಿಲಂಗೆ, ಸರಸ್ವತಿ ಶೆಟ್ಟಕಾರ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಚಿಂತಕರು, ಬೀದರ