ವೀರಶೈವ ಏಕತಾ ಸಮಾವೇಶ ಬಹಿಷ್ಕರಿಸಿ: ಮೃತ್ಯುಂಜಯ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಹುಬ್ಬಳ್ಳಿಯಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಸಮಾವೇಶದಲ್ಲಿ ಪಂಚಮಸಾಲಿ ಸಮಾಜದವರು ಭಾಗವಹಿಸಬಾರದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಕರೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮಹಾಸಭೆಯು ಸಹಕಾರ ನೀಡಿಲ್ಲ. ನಮ್ಮ ಮೇಲೆ ಲಾಠಿಚಾರ್ಜ್ ನಡೆದಾಗಲೂ ಸಮಾಧಾನದ ಮಾತನ್ನಾಡಲಿಲ್ಲ. ಹಾಗಾಗಿ ನಾನು ಎಲ್ಲ ನನ್ನ ಸಮಾಜದ ಮುಖಂಡರಿಗೆ ಈ ಮೂಲಕ ಸಂದೇಶ ನೀಡುತ್ತಿದ್ದೇನೆ. ಯಾರು ನಮ್ಮ ಪಂಚಮಸಾಲಿ ಮುಖಂಡರು ಹಾಗೂ ಜನರು ಆ ಸಮಾವೇಶಕ್ಕೆ ಹೋಗಬೇಡಿ. ಸಮಾವೇಶಕ್ಕೆ ಹೋಗಿ ಗೊಂದಲ ಸೃಷ್ಟಿಸುವ ಕೆಲಸ ಯಾರೂ ಮಾಡಬಾರದು” ಎಂದರು.

“ಪಂಚಮಸಾಲಿಗರು ಲಿಂಗಾಯತ ಧರ್ಮದ ಭಾಗವೇ ಆಗಿದ್ದಾರೆ. ನಾವೇ ಮೂಲ ಲಿಂಗಾಯತರು. ಅದೇ ರೀತಿ ನಾವು ಮೂಲತಃ ವೀರಶೈವರೂ ಅಲ್ಲ. ಹಾಗಾಗಿ, ವೀರಶೈವ ಪದ ನಮಗೆ ಸಂಬಂಧಿಸಿದ್ದಲ್ಲ. ನಮ್ಮ ಹಿರಿಯರ ದಾಖಲಾತಿಗಳು ಮತ್ತು ಎಲ್ಲ ಸಮುದಾಯ ಭವನಗಳ ಮೇಲೆ ಲಿಂಗಾಯತ ಅಂತಾನೇ ಇದೆ” ಎಂದು ಪ್ರಶ್ನೆಯೊಂದಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.

ಹರಿಹರ ಪೀಠದ ವಚನಾನಂದ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಇಷ್ಟು ದಿನ ಅವರು ಪಾಪ ವೀರಶೈವ ಅಂತ ಹೇಳುತ್ತಾ ಬಂದಿದ್ದರು. ಸದ್ಯ ಅವರು ಇವಾಗ ಲಿಂಗಾಯತ ಅಂತ ಬಂದಿದ್ದಾರೆ. ನಮ್ಮೆಲ್ಲರ ಧ್ವನಿ ಒಂದೇ ಇದೆ. ಲಿಂಗಾಯತ ಪಂಚಮಸಾಲಿ ಅಂತಾನೇ ಇದೆ. ನಮ್ಮಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಮುಂದಿನ ಹಂತದಲ್ಲಿ ಎಲ್ಲವನ್ನು ಸರಿಪಡಿಸಿಕೊಂಡು ಹೋಗುತ್ತೇವೆ” ಎಂದರು.

ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಆರ್.ಸಿ.ಪಾಟೀಲ, ಮುಖಂಡರಾದ ಅಡಿವೇಶ ಇಟಗಿ, ಗುಂಡು ಪಾಟೀಲ, ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಿಂಗಪ್ಪ ಕುಕಟ್ಟಿ ಇತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
5 Comments
    • ಸಮಾಜವನ್ನು ಯಾರೂ ಒಡೆಯುತ್ತಿಲ್ಲ. ಲಿಂಗಾಯತದ ಅಸ್ಮಿತೆಯನ್ನು ದೇಶದಲ್ಲಿ ಎತ್ತಿ ಹಿಡಿಯಬೇಕಾಗಿದೆ. ಜಾಗತಿಕಮಟ್ಟದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ.

    • ಬೇಡಜಂಗಮರೆಂದು ದಲಿತರ ಮೀಸಲಾತಿ‌ಕಬಳಿಸಲು ಹೋದಾಗಲೇ ಸಮಾಜ ಒಡೆದಿದೆ, ಒಂದು ಕಡೆ ಬೇಡ ಜಂಗಮ ಎಂದು ದಲಿತರ ಹೊಟ್ಟೆ‌ಮೇಲೆ ಹೊಡೆಯುವ, ಇನ್ನೊಂದು ಕಡೆ ವೀರಶೈವ ಎಂದು ‌ಲಿಂಗಾಯತರ ಹೆಗಲ ಮೇಲೆ ಕುಳಿತು ಅವರಿಗೆ ಗುರುಗಳಾಗಿರುವ ಹುನ್ನಾರ ಪಂಚಪೀಠಗಳದ್ಸು.

      ಇದರ ಮಧ್ಯೆ ಪಂಚಮಸಾಲಿಗಳು ಲಿಂಗಾಯತರು ಎನ್ನುವ ಕೂಡಲಸಂಗಮ ಶ್ರೀಗಳ‌ನಿಲುವು ಸರಿ ಇದೆ . ಧರ್ಮದ ಕಾಲಂನಲ್ಲಿ ಇತರೆ ಎಂದು ಬರೆದು ಲಿಂಗಾಯತ ಬರೆಸಲು ಕರೆಕೊಡಬೇಕಿತ್ತು, ಆದರೆ ಅವರ ಮೇಲೆಯೂ ಒತ್ತಡ ಇದೆ, ಮುಂದಿನ ದಿನಗಳಲ್ಲಿ ಲಿಂಗಾಯತ ಧರ್ಮ ಮಾನ್ಯತೆ ಸಿಗಲಿದೆ.

  • ವಚನನಂದ ಶ್ರೀಗಳು ಈಗಲಾದರೂ ನಾವು ಹಿಂದೂ ಎನ್ನುವದನ್ನು ಬಿಟ್ಟು ಲಿಂಗಾಯತರಾಗಿ ಲಿಂಗಾಯತದ ಅಸ್ಮಿತೆಗಾಗಿ ಹೋರಾಡಬೇಕೆಂದು ಪೂಜ್ಯರಲ್ಲಿ ವಿನಂತಿ.

    • Innocent Lingayats want to call themselves as Hindus. As per the caste system Lingayats shall fall under “Shudras”. History has enought evidence of the treatment to such people. Dalits are a living example. To eradicate such inequalities Basavanna founded Lingayat. Let’s uphold this and not associate ourselves with hate and fear mongering Vedic wisdom Hindus / Brahamins.

Leave a Reply

Your email address will not be published. Required fields are marked *