ಪ್ರತಿ ವರ್ಷದ ಬಸವ ಪಂಚಮಿ/ನಾಗರ ಪಂಚಮಿ ಹಬ್ಬ ಬಂದಾಗಲೂ ಬಸವಣ್ಣನವರ ಈ ಪ್ರಸಿದ್ಧ ವಚನ ಮತ್ತು ಸಂಬಂದಿಸಿದ ಚಿತ್ರ ಇರಲ್ ಆಗುತ್ತವೆ. ಈ ವರ್ಷವೂ ಇದಕ್ಕೆ ಹೊರತಾಗಲಿಲ್ಲ.
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ