ಬೀದರ
ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೀದರದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಜಾಥಾಕ್ಕೆ ಸಚಿವ ಈಶ್ವರ ಖಂಡ್ರೆ ‘ಬಸವ ಸಂಸ್ಕೃತಿ’ ಎಂದು ಬರೆದ ಫಲಕದ ಬಲೂನುಗಳನ್ನು ಹಾರಿಬಿಟ್ಟು ಚಾಲನೆ ನೀಡಿದ್ರು. ಬೀದರನ ಬಸವೇಶ್ವರ ಸರ್ಕಲ್‌ನಿಂದ ಆರಂಭಗೊಂಡ ಜಾಥಾ ಬೊಮ್ಮಗೊಂಡೇಶ್ವರ ವೃತ್ತದ ಮಾರ್ಗವಾಗಿ ಬಿ.ವಿ. ಭೂಮರಡ್ಡಿ ಕಾಲೇಜುವರೆಗೆ ನಡೆಯಿತು.
ಬೃಹತ್ ಜಾಥಾದುದ್ದಕ್ಕೂ ಬಸವಭಕ್ತರು ವಚನಗ್ರಂಥ ತಲೆ ಮೇಲೆ ಹೊತ್ತು ಸಾಗಿದ್ರು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಹರಳಯ್ಯ, ಮಾದಯ್ಯ, ಚೌಡಯ್ಯ, ನಾಗಲಾಂಬಿಕೆ ಸೇರಿದಂತೆ ಹಲವಾರು ಶರಣರ ವೇಷಧಾರಿಗಳು ಗಮನ ಸೆಳೆದರು.
ಈ ವೇಳೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಬಸವಣ್ಣ ಕರ್ನಾಟಕಕಷ್ಟೇ ಅಲ್ಲ ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕ. ಬಸವ ಸಂಸ್ಕೃತಿ ಅಂದ್ರೆ ಸಮಾನತೆ, ಮಾನವೀಯತೆ, ಸಾಮರಸ್ಯದ ಸಂಸ್ಕೃತಿಯಾಗಿದ್ದು, ಇಡೀ ವಿಶ್ವದಲ್ಲೇ ಬಸವ ಸಂಸ್ಕೃತಿ ಶ್ರೇಷ್ಠವಾಗಿದೆ ಎಂದರು.
ಮೌಲ್ಯಯುತ ಜೀವನ ನಡೆಸಲು ವಚನ ಸಾಹಿತ್ಯ ಓದುವುದು ಅವಶ್ಯವಾಗಿದೆ. ವಚನ ಸಾಹಿತ್ಯದಲ್ಲಿ ಮೌಲ್ಯಯುತ ಜೀವನ ನಡೆಸಲು ಬೇಕಾಗುವ ಎಲ್ಲ ಅಂಶಗಳು ಉಲ್ಲೇಖವಾಗಿವೆ. ಹಾಗಾಗಿ ಮುಂದಿನ ಪೀಳಿಗೆಗೆ ವಚನ ಸಾಹಿತ್ಯದ ಮಹತ್ವ ತಿಳಿಸುವುದು ಅವಶ್ಯವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ರು.