ಬೀದರ
ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಫೆಬ್ರವರಿ 10 ರಿಂದ 12 ರವರೆಗೆ ವಚನ ವಿಜಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮತ್ತು ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ. ಗಂಗಾಂಬಿಕಾ ಅಕ್ಕ ಹೇಳಿದರು.
ಅವರು ನಗರದ ಶರಣ ಉದ್ಯಾನದಲ್ಲಿ ವಚನ ವಿಜಯೋತ್ಸವ ನಿಮಿತ್ಯ ನಡೆದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿಕೊಂಡು ಮಾತನಾಡಿ, 12ನೇ ಶತಮಾನದಲ್ಲಿ ಶರಣರ ಅನುಭಾವದಿಂದ ಮೂಡಿ ಬಂದ ವಚನಗಳನ್ನು 21ನೇ ಶತಮಾನದಲ್ಲಿ ಉಳಿಸಿಕೊಟ್ಟಿದ್ದರ ಹಿಂದೆ ಅನೇಕ ಶರಣ ತ್ಯಾಗ ಬಲಿದಾನವಿದೆ. ವಚನ ಸಾಹಿತ್ಯ ಸಂರಕ್ಷಣೆಗಾಗಿ ತ್ಯಾಗ-ಬಲಿದಾನಗೈದ ಶರಣರ ಸ್ಮರಣೆಗಾಗಿ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಕಳೆದ 23 ವರ್ಷಗಳಿಂದ ವಚನ ವಿಜಯೋತ್ಸವ ಆಚರಿಸಲಾಗುತ್ತಿದೆ, ಸಮಾರಂಭದಲ್ಲಿ ಇಷ್ಟಲಿಂಗ ಇಷ್ಟಲಿಂಗಪೂಜೆ, ವಚನ ಪಠಣ, ಗುರು ಬಸವ ಪುರಸ್ಕಾರ ಪ್ರದಾನ, ಬಸವೇಶ್ವರ ವೃತ್ತದಿಂದ ಬಸವಗಿರಿಯವರೆಗೆ ವಚನಗಳಿಗೆ ಹೂವಿನ ರಥದಲ್ಲಿ ಮೆರವಣಿಗೆ ಮಾಡಿ ಪಟ್ಟಗಟ್ಟಿ ಗೌರವ ಸಲ್ಲಿಸಲಾಗುತ್ತದೆ ಎಂದು ನುಡಿದರು.
ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಮಾತನಾಡಿ, ನಾವೆಲ್ಲರೂ ಈ ಕಾರ್ಯಕ್ರಮಕ್ಕೆ ತನು-ಮನ- ಧನ, ಸಮಯದಿಂದ ಸಂಪೂರ್ಣ ಬೆಂಬಲ, ಸಹಕಾರ ನೀಡಬೇಕು ಎಂದರು.
ಬೀದರ ವಾಣಿಜ್ಯೊದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ಮಾತನಾಡಿ, ವಚನ ವಿಜಯೋತ್ಸವ ಕಾರ್ಯಕ್ರಮ ಬೀದರಗೆ ಗೌರವ ತಂದು ಕೊಡುತ್ತದೆ. ಒಳ್ಳೆಯ ಉಪನ್ಯಾಸಕರು, ಅತಿಥಿಗಳನ್ನು ಕರೆಸಲು ಸಲಹೆ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಬಸವರಾಜ ಧನ್ನೂರು ಮಾತನಾಡಿ, ವ್ಯಕ್ತಿಗೆ ಪಟ್ಟಗುಟ್ಟುವುದಲ್ಲ ವಚನಕ್ಕೆ ಪಟ್ಟ ಗಟ್ಟುವ ಕಾರ್ಯ ವಿಶೇಷವಾಗಿದೆ. ತಲೆಯ ಮೇಲೆ ವಚನ ಸಾಹಿತ್ಯ ಹೊತ್ತು ನಡೆಯುವ ಮೆರವಣಿಗೆ ವೈಶಿಷ್ಟ್ಯವಾಗಿದ್ದು ಎಲ್ಲರೂ ಒಮ್ಮನಸ್ಸಿನಿಂದ ಆಚರಿಸಬೇಕು ಎಂದರು.
ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ನಾವೆಲ್ಲ ತನು-ಮನ-ಧನದಿಂದ ಕಾರ್ಯಕ್ರಮ ಯಶಸ್ಸಿಗೆ ದುಡಿಯೋಣ ಎಂದರು.
ಶಕುಂತಲಾ ಬೆಲ್ದಾಳೆ, ಚಿಂತಕ ಸೋಮನಾಥ ಯಾಳವಾರ, ಮುಖಂಡ ಬಸವರಾಜ ಬುಳ್ಳಾ, ಡಿಸಿಸಿ ಬ್ಯಾಂಕ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ವಿಜಯಲಕ್ಷ್ಮಿ ಗಡ್ಡೆ, ಬಸವಕಲ್ಯಾಣ ರಾಷ್ಟ್ರೀಯ ಬಸವದಳದ ಅಧ್ಯಕ್ಷ ರವೀಂದ್ರ ಕೊಳಕೂರ, ಲಿಂಗಾಯತ ಸಮಾಜ ಅಧ್ಯಕ್ಷರಾದ ಕುಶಾಲ ಪಾಟೀಲ ಖಾಜಾಪೂರ, ಜಿ.ಪಂ.ಮಾಜಿ ಅಧ್ಯಕ್ಷರಾದ ಕುಶಾಲ ಪಾಟೀಲ ಗಾದಗಿ, ಬಸವರಾಜ ಬುಳ್ಳಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರೊ. ಶಂಭುಲಿಂಗ ಕಾಮಣ್ಣಾ, ಬಸವ ಕೇಂದ್ರದ ಶಿವಶಂಕರ ಟೋಕರೆ, ಬಸವರಾಜ ರುದ್ರವಾಡಿ, ಜೇವರ್ಗಿಯ ಶಿವಶರಣಪ್ಪ ಕಲ್ಲಾ, ಕಲಬುರಗಿಯ ಶಿವಶರಣಪ್ಪ ಕೋಳಾರ, ವೀರಭದ್ರಪ್ಪ ಬುಯ್ಯ, ಚಂದ್ರಶೇಖರ ತುಂಗಾ ಮುಸ್ತರಿ, ಶಕುಂತಲಾ ಬೆಲ್ದಾಳೆ, ಅಶೋಕ ಕರಂಜಿ, ಚಂದ್ರಕಾಂತ ಶಟಕಾರ, ಜಗದೀಶ ಖೂಬಾ, ರೇವಣಸಿದ್ದಪ್ಪಾ ಜಲಾದೆ, ಶರಣಬಸವ ಕಲ್ಲಾ, ಚಂದ್ರಕಾಂತ ಹೂಗಾರ, ರವೀಂದ್ರ ಪಾವಡೆ, ಡಾ ವಿಜಯಶ್ರೀ ಬಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಸದಸ್ಯರಾದ ಪ್ರೊ. ಮಲ್ಲಮ್ಮಾಆರ್. ಪಾಟೀಲ ಉಪಸ್ಥಿತರಿದ್ದು ಸಲಹೆ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಶಂಕರರಾವ ಹೊನ್ನ ಅಧ್ಯಕ್ಷತೆ ವಹಿಸಿದ್ದರು. ಉಷಾ ಮರ್ಚೆ ಸ್ವಾಗತಿಸಿದರೆ, ರಾಜೇಂದ್ರ ಜೊನ್ನಿಕೇರಿ ನಿರೂಪಿಸಿದರು.