ಫೆಬ್ರವರಿ 19 ಜಂಟಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಡಾ. ಗಂಗಾ ಮಾತಾಜಿಗೆ ಅಹ್ವಾನ

ಬಸವ ಮೀಡಿಯಾ
ಬಸವ ಮೀಡಿಯಾ

“ಮಾತಾಜಿಯವರು ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ, ಅಭಿಯಾನದಲ್ಲಿ ರಾಷ್ಟ್ರೀಯ ಬಸವದಳ ಸಕ್ರಿಯವಾಗಿ ಭಾಗವಹಿಸಲಿದೆ,” ಎಂದು ಅವರ ಆಪ್ತರೊಬ್ಬರು ಹೇಳಿದರು.

ಬೆಂಗಳೂರು

ಲಿಂಗಾಯತ ಧರ್ಮ ಜಾಗೃತ ಅಭಿಯಾನವನ್ನು ರೂಪಿಸಲು ಇದೇ ತಿಂಗಳ 19ರಂದು ಧಾರವಾಡದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ಬಸವದಳದ ಪೂಜ್ಯ ಡಾ ಗಂಗಾ ಮಾತಾಜಿ ಅವರಿಗೆ ಅಧಿಕೃತ ಅಹ್ವಾನ ನೀಡಲಾಗಿದೆ.

ಜಂಟಿ ಸಮಿತಿಯ ಸದಸ್ಯ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ರೊಟ್ಟಿಯವರು ಮಾತಾಜಿಯವರಿಗೆ ಬುಧವಾರ ಕರೆ ಮಾಡಿ ಅಧಿಕೃತ ಆಹ್ವಾನ ನೀಡಿದ್ದಾರೆ.

ಮಾತಾಜಿಯವರು ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ, ಎಂದು ಅವರ ಆಪ್ತರೊಬ್ಬರು ಬಸವ ಮೀಡಿಯಾಗೆ ಹೇಳಿದರು.

”ಮಾತಾಜಿಯವರಿಗೆ ಫೆಬ್ರವರೀ 19 ಬಿಡುವಿದ್ದರೆ ಅವರೇ ಧಾರವಾಡಕ್ಕೆ ಹೋಗುತ್ತಾರೆ. ಇಲ್ಲವಾದರೆ ಪ್ರತಿನಿಧಿಯೊಬ್ಬರನ್ನು ಕಳುಹಿಸಲು ನಿರ್ಧರಿಸಿದ್ದಾರೆ. ಲಿಂಗಾಯತ ಧರ್ಮ ಜಾಗೃತ ಅಭಿಯಾನದಲ್ಲಿ ರಾಷ್ಟ್ರೀಯ ಬಸವದಳ ಸಕ್ರಿಯವಾಗಿ ಭಾಗವಹಿಸಲಿದೆ,” ಎಂದು ಅವರು ಹೇಳಿದರು.

ಇತ್ತೀಚೆಗೆ ರಚನೆಯಾದ ಜಂಟಿ ಸಮಿತಿಯಲ್ಲಿ ರಾಷ್ಟ್ರೀಯ ಬಸವದಳದ ಪ್ರತಿನಿಧಿ ಇಲ್ಲದಿದ್ದುದ್ದು ಬಹಳ ಜನರ ಹುಬ್ಬೇರಿಸಿತ್ತು.

ಲಿಂಗಾಯತ ಧರ್ಮದ ರಕ್ಷಣೆಗೆ ಹುಟ್ಟಿದ ದೊಡ್ಡ ಗಣಾಚಾರಿ ಪಡೆ ರಾಷ್ಟ್ರೀಯ ಬಸವದಳ. ಎಲ್ಲಾ ಜಿಲ್ಲೆಗಳಲ್ಲಿಯೂ ಸಕ್ರಿಯವಾಗಿರುವ ಸಂಘಟನೆಯ ಬೆಂಬಲದಿಂದಲೇ ಅಭಿಯಾನ ನಡೆಯಬೇಕೆಂದು ಎಂದು ನೆನ್ನೆ ರಾಷ್ಟ್ರೀಯ ಬಸವದಳದ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ಪ್ರೊಫೆಸ್ಸರ್ ವೀರಭದ್ರಯ್ಯ ಬಸವ ಮೀಡಿಯಾಗೆ ಬರೆದಿದ್ದ ಲೇಖನದಲ್ಲಿ ಹೇಳಿದ್ದರು.

“ಇಷ್ಟು ದೊಡ್ಡ ಸಂಘಟನೆಯನ್ನು ಸಕ್ರಿಯವಾಗಿ ಜೋಡಿಸಿಕೊಂಡರೆ ಮಾತ್ರ ಅಭಿಯಾನ ಜನರನ್ನು ಮುಟ್ಟುತ್ತದೆ.

ಅಭಿಯಾನದ ಜಂಟಿ ಸಮಿತಿಯಲ್ಲಿ ಭಾಗವಹಿಸುವಂತೆ ಡಾ. ಗಂಗಾ ಮಾತಾಜಿ ಅವರನ್ನು ಆಹ್ವಾನಿಸುವುದು ಬಹಳ ಅವಶ್ಯವಿದೆ. ಅಥವಾ ಅವರು ಸೂಚಿಸಿದ ಪ್ರತಿನಿಧಿಯನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು,” ಎಂದು ಅವರು ಬರೆದಿದ್ದರು.

ಇಂದು ಸಂಜೆ 8.30ಗೆ ಬಸವ ಮೀಡಿಯಾದ ಗೂಗಲ್ ಮೀಟಿನಲ್ಲಿ ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಏನ್ ಅಭಿಯಾನದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *