ಗದಗ:
ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣೆ ಸರೋಜಿನಿ ಮಹದೇವಪ್ಪ ಹಂಚಿನಾಳ ಅವರ ಮನೆಯಲ್ಲಿ ಶುಕ್ರವಾರ ನಡೆಯಿತು.
ಶರಣೆ ಅಕ್ಕಮ್ಮನವರ ವಚನ ಚಿಂತನೆಯನ್ನು ಶರಣರಾದ ಸಂಗನಬಸವ ಶ್ರೀಪಾದ ಹಾದಿಮನಿ ಅವರು ಮಾಡಿದರು.
ಶರಣ/ ಶರಣೆಯರಾದ ಪ್ರಕಾಶ ಅಸುಂಡಿ, ಎಂ.ಬಿ. ಲಿಂಗದಾಳ, ಮಾರುತಿ ಹೊಸೂರ, ರಾಮಣ್ಣ ಕಳ್ಳಿಮನಿ, ಗೌರಕ್ಕ ಬಡಿಗಣ್ಣವರ, ನಾಗರತ್ನ ಅಸುಂಡಿ, ಸರೋಜಾ ಮುಗದ, ಮಂಜುಳಾ ಹಾಸಲಿಕರ, ಸರೋಜಾ ಲಿಂಗದಾಳ, ಸಂಜೀವಿನಿ ಹೊಸೂರ ಹಾಗೂ ಗಂಗಿಮಡಿ ನಗರದ ಜನ ಭಾಗಿಯಾಗಿದ್ದರು.
