ಗಂಗಾವತಿ:
ವಿಜಯದಶಮಿ ಅಂಗವಾಗಿ, ಮನ-ಮನೆ ಪರಿವರ್ತನೆಗಾಗಿ, ಗಂಗಾವತಿ ನಗರದ ರಾಷ್ಟ್ರೀಯ ಬಸವದಳದ ನೇತೃತ್ವದಲ್ಲಿ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಾರ್ಯಕ್ರಮ ಇದೇ ಅಕ್ಟೋಬರ್ 03ರಿಂದ 12ರವರೆಗೆ ಜರುಗಲಿದೆ.
12ನೇ ಶತಮಾನದಲ್ಲಿ ಕಲ್ಯಾಣಕ್ರಾಂತಿ ಅಪೂರ್ವ-ದಿಟ್ಟ ಹೆಜ್ಜೆಯ ಹೋರಾಟದ ಫಲಶೃತಿ ಭಾರತ ದೇಶದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಬ್ಬರು ವರ್ಣೀಯರ ನಡುವೆ ನಂಟಸ್ತಿಕೆ, ಬಸವಣ್ಣನವರ ನೇತೃತ್ವದಲ್ಲಿ ಜರುಗಿತ್ತು. ಆ ಘಟನೆಗೆ ಬಸವಣ್ಣನವರನ್ನು ಗಡಿಪಾರು ಮಾಡಲಾಯಿತು. ಹರಳಯ್ಯ,ಮದುವರಸ, ಶೀಲವಂತರನ್ನು ಎಳೆಹೂಟೆ ಶಿಕ್ಷೆಗೆ ಗುರಿಪಡಿಸಲಾಯಿತು.
ಈ ಎಲ್ಲಾ ಬಲಿದಾನವಾದುದು ಸ್ವಾರ್ಥಕ್ಕಾಗಿ ಅಲ್ಲ ಮತ್ತು ಹೆಣ್ಣು ಹೊನ್ನು ಮಣ್ಣಿನ ಆಸೆಗೆ ಅಲ್ಲ, ಇವೆಲ್ಲವೂ ಸಮಾನತೆಯನ್ನು ಸಾಧಿಸಲಿಕ್ಕೆ ಎಂಬ ಅಂಶವನ್ನು ಬಿಂಬಿಸುವ ಉದ್ದೇಶವೇ ಕಲ್ಯಾಣ ಕ್ರಾಂತಿ ಕಥಾ ಪಠಣದ ಉದ್ದೇಶ. ಗಂಗಾವತಿ ಪಟ್ಟಣದ ವಿವಿಧ ಶರಣರ ಮನೆಯಲ್ಲಿ ಕಲ್ಯಾಣ ಕ್ರಾಂತಿ ಕಥಾ ಪಠಣ ಜರುಗಲಿದೆ.
12ನೇ ಅಕ್ಟೋಬರ್ ಬೆಳಿಗ್ಗೆ 09 ಗಂಟೆಗೆ ಬಸವ ಮಂಟಪದಲ್ಲಿ ಕಲ್ಯಾಣ ಕ್ರಾಂತಿಯ ಕಥಾ ಪಠಣ ಮಂಗಲ ಸಮಾರೋಪ ಹಾಗೂ ಬಸವ ಧರ್ಮ ವಿಜಯೋತ್ಸವ ಜರುಗಲಿದೆ.
ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ ಎಂದು ರಾಷ್ಟ್ರೀಯ ಬಸವದಳದ ಸರ್ವ ಸದಸ್ಯರು ತಿಳಿಸಿದ್ದಾರೆ.