ಲಿಂಗಾಯತ ಗಾಣಿಗರು 2ಎ ಮೀಸಲಾತಿಗೆ ಅರ್ಹರು: ಮಹತ್ವದ ಹೈಕೋರ್ಟ್ ತೀರ್ಪು

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಹಿಂದುಳಿದ ಜಾತಿಗಳಿಗೆ ಮೀಸಲಾತಿ ತಪ್ಪುತ್ತದೆ ಎಂಬ ವದಂತಿಗೆ ಹೈಕೋರ್ಟ್ ಮಂಗಳ ಹಾಡಿದೆ.

ಲಿಂಗಾಯತ ಗುಂಪಿನೊಳಗೆ ವಿಶಿಷ್ಟ ಜಾತಿಯಾಗಿರುವ ಗಾಣಿಗರು ಸಂವಿಧಾನಾತ್ಮಕವಾಗಿ 2ಎ ಮೀಸಲಾತಿಗೆ ಅರ್ಹರು ಎಂದು ಗುರುವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

‘ಲಿಂಗಾಯತ ಗಾಣಿಗ’ ಪೊಲೀಸ್ ಸಬ್ ಇನ್ಸ್​ಪೆಕ್ಟರ್​​ ಒಬ್ಬರಿಗೆ ನೀಡಿದ್ದ ಜಾತಿ ಪ್ರಮಾಣ ಪತ್ರವನ್ನು ಪ್ರಶ್ನಿಸಿದ್ದ ಅರ್ಜಿಯೊಂದನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ. ಜೊತೆಗೆ ಲಿಂಗಾಯತ ಗಾಣಿಗ ಸಮುದಾಯಕ್ಕೆ 2ಎ ಮೀಸಲಾತಿ ನೀಡಿರುವುದನ್ನು ಎತ್ತಿಹಿಡಿದಿದೆ.

ಲಿಂಗಾಯತ ಧಾರ್ಮಿಕ ಗುರುತಾದರೆ, ಗಾಣಿಗ (ಎಣ್ಣೆ ತೆಗೆಯುವವರು) ವೃತ್ತಿಯ, ಜಾತಿಯ ಗುರುತು. ಇವೆರಡು ಕಾನೂನಿನಲ್ಲಿ ಪ್ರತ್ಯೇಕ ಗುರುತುಗಳಲ್ಲ, ಒಟ್ಟಿಗೆ ಸಹಯೋಗದಲ್ಲಿ ಇರಬಹುದಾದ ಗುರುತುಗಳು, ಎಂದು ಹೈಕೋರ್ಟ್ ಸ್ಪಷ್ಡಪಡಿಸಿದೆ.

ತಮ್ಮ ವೃತ್ತಿಪರ ಮತ್ತು ಸಾಮಾಜಿಕ ಗುರುತನ್ನು ಉಳಿಸಿಕೊಂಡ ವಿಭಿನ್ನ ಜಾತಿ – ಪಂಗಡಗಳನ್ನು ಸೇರಿಸುವ ಮೂಲಕ ಲಿಂಗಾಯತ ಸಮುದಾಯವು ವಿಕಸನಗೊಂಡಿದೆ. ಗಾಣಿಗವು ವಿಶಾಲವಾದ ಲಿಂಗಾಯತ ಗುಂಪಿನೊಳಗೆ ಒಂದು ವಿಶಿಷ್ಟವಾದ ವೃತ್ತಿಪರ ಜಾತಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

“ಲಿಂಗಾಯತ(ಧಾರ್ಮಿಕ ಸಮುದಾಯ) ಮತ್ತು ಗಾಣಿಗ(ಎಣ್ಣೆ ತೆಗೆಯುವವರು) ಪರಸ್ಪರ ಪ್ರತ್ಯೇಕ ಗುರುತುಗಳು, ಗಾಣಿಗವು ವಿಶಾಲ ಲಿಂಗಾಯತ/ವೀರಶೈವ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದಾದ ಒಂದು ವಿಶಿಷ್ಟವಾದ ವೃತ್ತಿಪರ ಜಾತಿಯಾಗಿದೆ. ಒಬ್ಬ ವ್ಯಕ್ತಿಯು ಧಾರ್ಮಿಕ ಸಂಬಂಧದಿಂದ ಏಕಕಾಲದಲ್ಲಿ ಲಿಂಗಾಯತ ಮತ್ತು ಜಾತಿ ವರ್ಗೀಕರಣದಿಂದ ಗಾಣಿಗ ಆಗಿರಬಹುದು,” ಎಂದು ತೀರ್ಪಿನಲ್ಲಿ ಹೇಳಿದೆ.

“ಗಾಣಿಗರು ಲಿಂಗಾಯತ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದು ಎಂದರೆ ಪ್ರತಿಯೊಬ್ಬ ಲಿಂಗಾಯತರು ಗಾಣಿಗ ಗುರುತನ್ನು ಪಡೆಯಬಹುದು ಎಂದಲ್ಲ. ಗುರುತುಗಳ ಸಹಬಾಳ್ವೆ ಕಾನೂನು ಸಾಧ್ಯತೆಯ ವಿಷಯವಾಗಿದೆ.

ಪೂರ್ವಜರ ದಾಖಲೆಗಳಲ್ಲಿ ‘ಲಿಂಗಾಯತ’ ಎಂದು ವಿವರಿಸಲಾದ ವ್ಯಕ್ತಿಯು, ಪುರಾವೆಗಳ ಆಧಾರದ ಮೇಲೆ, ಆ ಗುಂಪಿನೊಳಗೆ ಗಾಣಿಗ ಗುರುತನ್ನು ಸ್ಥಾಪಿಸಬಹುದು ಎಂದು ಏಕಸದಸ್ಯ ಪೀಠ ಆದೇಶಿಸಿದೆ,” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ

ಮೈಸೂರಿನಲ್ಲಿ ಪೊಲೀಸ್ ಕಾನ್ಸ್​​​ಟೇಬಲ್ ಆಗಿ ಕೆಲಸ ಮಾಡುತ್ತಿರುವ ಅರ್ಜಿದಾರರಾದ ಟಿ.ಎನ್.ಜಗದೀಶ್ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದು, ಅವರು ಸಬ್ ಇನ್ಸ್​ಪೆಕ್ಟರ್ ಹುದ್ದೆ ಆಕಾಂಕ್ಷಿಯಾಗಿದ್ದರು.

ಅವರು ಬಾಗಲಕೋಟೆಯ ರಾಜಕುಮಾರ್ ವೈ.ಬೀಳಗಿ ಇತರ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿ ಮೀಸಲಾತಿ ಪಡೆಯಲು, ಲಿಂಗಾಯತ-ಗಾಣಿಗ ಎಂಬ ಸುಳ್ಳು ಪ್ರಮಾಣಪತ್ರವನ್ನು ನೀಡಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
2 Comments
  • ಮಂತ್ರಿ ಮಂಡಲದ ಆಗು ಹೋಗುಗಳ ಬಗ್ಗೆ
    ಮಾತನಾಡುವುದು ಸ್ವಾಮೀಜಿ ಆದವರಿಗೆ ಉಚಿತವಲ್ಲ. ಎಲ್ಲ ಸಮುದಾಯಗಳ ಸ್ವಾಮೀಜಿ ಗಳು ಒಂದೊಂದು ವಿಧ ಹೇಳಿಕೆ ನೀಡುವುದರಿಂದ ಕರ್ನಾಟಕದ ಆಡಳಿತ ಯಂತ್ರ ತನ್ನತನವನ್ನು ಕಳೆದುಕೊಂಡು ಸಮುದಾಯಗಳಿಗೆ ಸೀಮಿತ ವಾಗುತ್ತದೆ. ಕರ್ನಾಟಕದ ಸಮಗ್ರ ಸಮಾಜವನ್ನು ಸರಕ್ಷಿತ್ ಸುಸಂಸ್ಕೃತ ವಾಗಿ ಮುನ್ನಡೆಸಿಕೊಂಡು ಹೋಗುವ ನೇತಾರರು ಮಂತ್ರಿ ಗಳಾದರೆ ಸಾಕು.
    ಮಂತ್ರಿ ಆದ ವರ್ಷ ದ ಒಳಗೆ ಜೈಲು ಸೇರುವ ವ್ಯಕ್ತಿ ಮಂತ್ರಿ ಆದರೆ ಏನು ಪ್ರಯೋಜನ.
    ಖಂಡ್ರೆ ಅವರಿಗೆ ಯೋಗ್ಯತೆ ಇದ್ದೇ ಇದೆ. ಅದನ್ನು ಹೇಳಿ ಸ್ವಾಮೀಜಿ ಸ್ಥಾನಕ್ಕೆ ಚ್ಯುತಿ ತರುವುದು ಸೂಕ್ತವಲ್ಲ.

Leave a Reply

Your email address will not be published. Required fields are marked *