‘ಹಿಂದೂ ರಾಷ್ಟ್ರದ ಸ್ಥಾಪನೆಗೆ ಮರಳಿ ಬರುತ್ತಿರುವ ಎರಡು ಹಿಂದೂ ಹುಲಿಗಳಿಗೆ ಸ್ವಾಗತ’
ಹುಬ್ಬಳ್ಳಿ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಜಾಮೀನು ದೊರೆತು ಮೊದಲ ಭಾರಿಗೆ ನಗರಕ್ಕೆ ಆಗಮಿಸಿರುವ ಇಬ್ಬರು ಕೊಲೆ ಆರೋಪಿಗಳನ್ನು ಸ್ವಾಗತಿಸಿ ಬ್ಯಾನರ್‌ಗಳನ್ನು ಕಟ್ಟಲಾಗಿದೆ.
‘ಹಿಂದೂ ರಾಷ್ಟ್ರದ ಸ್ಥಾಪನೆಗೆ ಮರಳಿ ಬರುತ್ತಿರುವ ಎರಡು ಹಿಂದೂ ಹುಲಿಗಳಿಗೆ ಸ್ವಾಗತ’ ಎಂದು ಬರೆದಿರುವ ಬ್ಯಾನರ್‌ಗಳು ಆರೋಪಿಗಳಾದ ಅಮಿತ್ ಬದ್ದಿ ಮತ್ತು ಗಣೇಶ ಮಿಸ್ಕಿನ್ ಅವರಿಗೆ ಸ್ವಾಗತ ಕೋರುತ್ತಿವೆ.
ಬ್ಯಾನರ್ ನಲ್ಲಿ ಶಿವಾಜಿ, ಸಹಸ್ರಾರ್ಜುನ, ಅಮಿತ್ ಬದ್ದಿ, ಗಣೇಶ ಮಿಸ್ಕಿನ್, ಹುಲಿಗಳ ಪೋಟೋ ಮುದ್ರಿಸಲಾಗಿದೆ.
ಇದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ತುಳುಜಾ ಭವಾನಿ ದೇವಸ್ಥಾನದ ಮುಖ್ಯಬಾಗಿಲ ಬಳಿ ಇದ್ದ ಬ್ಯಾನರ್ ಅನ್ನು ಮಂದಿರದ ಆಡಳಿತ ಮಂಡಳಿಯು ತೆಗೆದು ಹಾಕಿದೆ ಎಂದು ವರದಿಯಾಗಿದೆ.
ಜೈಲಿನಿಂದ ಹೊರ ಬಂದ ಇಬ್ಬರೂ ಸಿದ್ಧಾರೂಢ ಮಠದ ಗದ್ದುಗೆ ದರ್ಶನ ಪಡೆದರು. ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು ಎಂದು ಮಾಧ್ಯಮಗಳು ವರದಿಮಾಡಿವೆ.
2017ರ ಸೆಪ್ಟೆಂಬರ್ 5ರಂದು ನಡೆದ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಗಣೇಶ್ ವಿಸ್ಕಿನ್, ಅಮಿತ್ ಬದ್ದಿ ಆರೋಪಿಗಳಿಗೆ ಶಿಕ್ಷೆ ಆಗಿತ್ತು. ಏಳು ವರ್ಷಗಳ ಕಾಲ ಜೈಲಲ್ಲಿದ್ದ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ವಿಜಯಪುರದಲ್ಲಿ ಗೌರಿ ಹತ್ಯೆಯ ಬೇರೆ ಇಬ್ಬರು ಆರೋಪಿಗಳಿಗೆ ಹಿಂದೂ ಸಂಘಟನೆಗಳು ನೀಡಿದ ಅದ್ದೂರಿ ಸ್ವಾಗತ, ಸನ್ಮಾನ ದೊಡ್ಡ ವಿವಾದ ಹುಟ್ಟುಹಾಕಿತ್ತು.
ಲಿಂಗಾಯತ ಧರ್ಮ ಪರ ಹುಲಿಗಳು ಹೆಚ್ಚಾಗಬೇಕಾಗಿದೆ,ಘರ್ಜಿಸಬೇಕಿದೆ ಇಲ್ಲದಿದ್ದಲ್ಲಿ ಲಿಂಗಾಯತ ಪರರ ಮೇಲೆ ದೌರ್ಜನ್ಯಗಳು ನಡೆಯುತ್ತಲೆ ಇರುತ್ತವೆ.
ಇವರು ಕೊಂದದ್ದು ಲಿಂಗಾಯತ ಚಿಂತಕಿಯನ್ನು
ಹೋಗಿದ್ದು ಸಿದ್ಧಾರೂಢ ಮಠಕ್ಕೆ.
ಬ್ಯಾನರ್ ನಲ್ಲಿ ಶಿವಾಜಿ ಫೋಟೊ
ಅಂದರೆ ಇವರ ಪ್ರಕಾರ ಕೊಲೆ ಮಾಡಲು ಸಿದ್ಧಾರೂಢರು ಶಿವಾಜಿ ಪ್ರೇರಣೆಯಾ ?
ಲಿಂಗಾಯತರು ಉತ್ತರಿಸಲಿ
ಇಂತಹ ಕೊಲೆ ಮಾಡುವವರು, ಅವರಿಗೆ ಶುಭ ಕೋರುವವರು ಇದೇ ಹಿಂದೂ ರಾಷ್ರ್ರ ಪರಿಕಲ್ಪನೆ ಎಂದರೆ,ಇವರ ಬಗ್ಗೆ ಅಸಹ್ಯ ಭಾವನೆ ಮೂಡುವುದು ,ಇವರ ಕಾಲ್ಪನಿಕ ಹಿಂದೂ ರಾಷ್ರ್ರ ಒಂದು ಸ್ಪಷ್ಟ ಹಿಂಸಾತ್ಮಕ ಚಿಂತನೆ ಎಂದೇ ಅರ್ಥ , ಇವರು ಸಮಾಜದ ಶಾಂತಿ ಭಂಗ ಮಾಡುವರು ಅಷ್ಟೇ.