ಕೊಪ್ಪಳ
ಗವಿಮಠದ ಭಕ್ತರಾದ ಡಾ. ಎಂ. ಬಿ. ಪಾಟೀಲ್ ಕಳೆದ ಏಳು ವರ್ಷಗಳಿಂದ ತಮ್ಮ ತಂದೆ ಬಾಳನಗೌಡ ಪಾಟೀಲ್ ಸ್ಮರಣಾರ್ಥ ಗವಿಸಿದ್ಧೇಶ್ವರ ಹಾಸ್ಟೆಲ್ ಮಕ್ಕಳಿಗೆ ವಿಶೇಷ ತಿನಿಸುಗಳ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಈ ವರ್ಷ ಅವರು ಹಾಸ್ಟೆಲ್‌ನಲ್ಲಿರುವ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ 50 ಸಾವಿರ ಪಾನಿಪುರಿಗಳನ್ನು ಮಾಡಿಸಿ ಕೊಟ್ಟಿದ್ದಾರೆ.
ಯಾವ ತಿಂಡಿ ಮಾಡಿಸಬೇಕೆಂದು ಯೋಚಿಸುತ್ತಿದ್ದಾಗ ಶ್ರೀಗಳ ಸೂಚನೆಯಂತೆ ಪಾನಿಪುರಿ ಮಾಡಿಸಿದ್ದಾರೆ. ಈಗ ಗವಿಮಠ ಶ್ರೀಗಳು ಕೈಗೆ ಪೆಟ್ಟಾಗಿದ್ದ ಮಗುವಿಗೆ ಪಾನಿಪುರಿ ತಿನ್ನಿಸಿರುವ ವಿಡಿಯೋ ಕೂಡ ವೈರಲ್ ಆಗಿದೆ.