ಗುಜರಾತಿನಿಂದ ಬಂದು ಶರಣ ಚಳುವಳಿಯಲ್ಲಿ ಪಾಲ್ಗೊಂಡ ಆದಯ್ಯ

ಬೆಳಗಾವಿ

ವಚನ ಪಿತಾಮಹ ಡಾ ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಶರಣ ಮಾಸದ ಸತ್ಸಂಗ ಕಾರ್ಯಕ್ರಮ ಗುರುವಾರ ನಡೆಯಿತು.

ಬೆಳಗಾವಿ ಬಸವತತ್ವ ಅನುಭಾವ ಕೇಂದ್ರದ ಪೂಜ್ಯ ವಾಗ್ದೇವಿ ತಾಯಿ ಅವರು ಶರಣರ ಜೀವನ ಸಂದೇಶ ಪ್ರವಚನ ನೀಡಿದರು.

ಅವರು ಅನುಭಾವ ನೀಡುತ್ತ, ಬಸವಾದಿ ಶರಣ ಆದಯ್ಯನವರು ಮೂಲತಃ ಸೌರಾಷ್ಟದವರು. ಅಂದರೆ ಈಗಿನ ಗುಜರಾತಿಗೆ ಸೇರಿದವರು. ಬನಿಯಾ ಅಥವಾ ಬಣಜಿಗರಾದ ಇವರು ಊರಿಂದ ಊರಿಗೆ ವಲಸೆ ಹೋಗುತ್ತಾ, ವ್ಯಾಪಾರ ಮಾಡುತ್ತಿರುತ್ತಾರೆ. ಪದ್ಮಾವತಿಯವರನ್ನು ಕಲ್ಯಾಣವಾಗಿ ಅವರಿಗೂ ಲಿಂಗದಿಕ್ಷೆ ನೀಡುತ್ತಾರೆ. ಶರಣರ ಸಂಪಕ೯ದಲ್ಲಿ ಬಂದು ಬಹುದೊಡ್ಡ ವಚನಗಳನ್ನು ಬರೆಯುತ್ತಾರೆ. ಇವರು ವಚನಗಳಲ್ಲಿ ಸೌರಾಷ್ಟ ಸೊಮೇಶ್ವರ ಎಂಬ ಅಂಕಿತವನ್ನು ಬಳಸುತ್ತಾರೆ. ಇಂತಹ ಅಪೂವ೯ ವಚನಕಾರರಾದ ಆದಯ್ಯ ಗುಜರಾತದಿಂದ ಕನ್ನಡ ನೆಲಕ್ಕೆ ಬಂದು, ಇಲ್ಲಿನ ಶರಣ ಚಳುವಳಿಯಲ್ಲಿ ಪಾಲ್ಗೊಂಡು ಅಂಗ ಲಿಂಗ ಆಭೇದ್ಯದ ಅರಿವನ್ನು ನೀಡಿ, ಸಮಷ್ಟಿಯ ಬಂಧನದ ಜೊತೆಗೆ ಪ್ರಗತಿ ಕಾಣುವ ಹಂಬಲ ಅವರದು ಎಂದರು.

ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ ಅರಳಿ ದಾಸೋಹ ಸೇವೆಗೈದರು.

ಆರಂಭದಲ್ಲಿ ಕುಮುದಿನಿ ತಾಯಿ ಅವರು ಪ್ರಾಥ೯ನೆ ಮಾಡಿದರು.

ಅಶೋಕ ಇಟಗಿ, ಸಿದ್ದಪ್ಪ ಸಾರಾಪೂರಿ, ಬಸವರಾಜ ಬಿಜ್ಜರಗಿ, ಸುಜಾತಾ ಮತ್ತಿಕಟ್ಟಿ, ಶೋಭಾ ದೇಯಣ್ಣವರ, ರತ್ನಾ ಬೆಣಚನಮರಡಿ, ಶಾಂತಾ ತಿಗಡಿ, ಶೋಭಾ ಅಂಗಡಿ, ರತ್ನಾ ಮುಂಗರವಾಡಿ, ಪ್ರೀತಿ ಗುರಯ್ಯ ಮಠದ, ಲೀಲಾವತಿ ರಾಚೋಟಿಮಠ, ರಾಜಶ್ರೀ ಖನಗಣಿ, ಶ್ರೀದೇವಿ ಕಾಡಣ್ಣವರ, ಶಿವಪುತ್ರಯ್ಯ ಪೂಜಾರ, ಮಹಾಂತೇಶ ತೊರಣಗಟ್ಟಿ, ವಿ.ಕೆ. ಪಾಟೀಲ, ಬಸವರಾಜ ಹಣಬರ, ಮಹಾಂತೇಶ ಮೆಣಸಿನಕಾಯಿ, ಶಿವಾನಂದ ನಾಯಕ, ಬಸನಗೌಡ ಪಾಟೀಲ, ಮಹಾದೇವಿ ಅರಳಿ, ಕಮಲಾ ಗಣಾಚಾರಿ, ದೀಪಾ ಪಾಟೀಲ, ಲಕ್ಷ್ಮಿ ಜೇವಣಿ, ಶರಣ ಶರಣೆಯರು ಉಪಸ್ಥಿತರಿದ್ದರು.

ಸುರೇಶ ನರಗುಂದ ಸ್ವಾಗತಿಸಿದರು, ಸಂಗಮೇಶ ಅರಳಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *