ಗುಳೆ ಗ್ರಾಮದಲ್ಲಿ ಯಶಸ್ವೀ ಮಾತಾಜಿ ಸಂಸ್ಮರಣೆ ಕಾರ್ಯಕ್ರಮ

ಯಲಬುರ್ಗಾ

ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದ ವಿಶ್ವಗುರು ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗು ರಾಷ್ಟ್ರೀಯ ಬಸವ ದಳ ಯುವ ಘಟಕದ ವತಿಯಿಂದ, ಬಸವ ಧರ್ಮ ಪೀಠದ ಪ್ರಥಮ ಮಹಿಳಾ ಜದ್ಗುರುಗಳಾದ ಪೂಜ್ಯ ಡಾ. ಮಾತೆ ಮಹಾದೇವಿ ತಾಯಿಯವರ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಬಸವರಾಜ ಹೂಗಾರ, ಗುರು ಬಸವಣ್ಣನವರು ಕೊಟ್ಟಂತ ಮಹಿಳಾ ಸ್ವಾತಂತ್ರ್ಯದ ಫಲವಾಗಿ ಜಗತ್ತಿನ ಯಾವ ಧರ್ಮದಲ್ಲೂ ಮಹಿಳೆಯರಿಗೆ ಸಿಗದ ಧರ್ಮಗುರುವಿನ ಪಟ್ಟ ಲಿಂಗಾಯತ ಧರ್ಮದಲ್ಲಿ ಸಿಕ್ಕಿದೆ. ಅದಕ್ಕೆ ಮೊಟ್ಟ ಮೊದಲು ಖಾವಿ ಧರಿಸಿ ಬಸವ ಧರ್ಮ ಪೀಠವನ್ನೇರಿದ ಪ್ರಥಮ ಮಹಿಳೆ ಡಾ. ಮಾತೆ ಮಹಾದೇವಿ ತಾಯಿಯವರು.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಒಬ್ಬ ಮಹಿಳೆಯಾಗಿ ಹಳ್ಳಿಗೆ ಏಕ ರಾತ್ರಿ, ಪಟ್ಟಣಕ್ಕೆ ಪಂಚ ರಾತ್ರಿಯಂತೆ 12 ನೇ ಶತಮಾನದಲ್ಲಿ ರಚಿಸಿರುವಂತ ಬಸವಾದಿ ಶರಣರ ವಚನ ಸಾಹಿತ್ಯ ಹೊತ್ತುಕೊಂಡು, ಸಾಹಿತ್ಯದ ತಿರುಳನ್ನ ದೇಶ ವಿದೇಶದ ಜನ ಮನಗಳಿಗೆ ಬಿತ್ತರಿಸುವಲ್ಲಿ ಶ್ರೀಗಂಧದ ಕಟ್ಟಿಗೆಯಂತೆ ತಮ್ಮ ಜೀವನ ಸವೆಸಿದ್ದಾರೆ.

ಲಿಂಗೈಕ್ಯರಾಗಿರುವ ಮಾತೆ ಮಹಾದೇವಿ ಅವರ ಬದುಕು 1946, ಮಾರ್ಚ್ 13ರಂದು ಚಿತ್ರದುರ್ಗದ ಸಾಸಲಹಟ್ಟಿಯಲ್ಲಿ ಶ್ರೀ ಮತಿ ಗಂಗಮ್ಮ ಮತ್ತು ಡಾ. ಬಸಪ್ಪ ದಂಪತಿಯ ಉದರದಲ್ಲಿ ಜನಿಸಿದ ರತ್ನಾ ಅವರು ಗುರು ಲಿಂಗಾನಂದ ಸ್ವಾಮಿಗಳವರಿಂದ ಸ್ಫೂರ್ತಿದಾಯಕ ಇಷ್ಟಲಿಂಗ ದೀಕ್ಷೆ ಪಡೆದ ನಂತರ 1996ರಲ್ಲಿ ಮಾತೆ ಮಹಾದೇವಿಯಾದರು.

ಅರವತ್ತರ ದಶಕದಿಂದಲೇ ಬಸವಧರ್ಮ ತತ್ವಗಳ ಬಗ್ಗೆ ಅಪರಿಮಿತ ಆಸಕ್ತಿ ಬೆಳೆಸಿಕೊಂಡಿದ್ದ ಮಾತೆ ಮಹಾದೇವಿ ಅವರು ಜಂಗಮ ದೀಕ್ಷೆ ಪಡೆದ ಬಳಿಕ ಸಾಕಷ್ಟು ಧರ್ಮಸೇವೆಗಳನ್ನು ಮಾಡಿದ್ದಾರೆ. 1970ರಲ್ಲಿ ಅಕ್ಕ ಮಹಾದೇವಿ ಅನುಭವ ಪೀಠ ಸ್ಥಾಪಿಸಿದರು. ಇದು ವಿಶ್ವದ ಮೊತ್ತಮೊದಲ ಮಹಿಳಾ ಜಗದ್ಗುರು ಪೀಠವಾಗಿದೆ. ಇದರ ಪೀಠಾಧ್ಯಕ್ಷರಾಗಿ ಮಾತೆ ಮಹಾದೇವಿ ಅವರು ವಿಶ್ವದ ಮೊದಲ ಮಹಿಳಾ ಜಂಗಮರೆನಿಸಿದ್ದಾರೆ.

ಹಾಗೆಯೇ, ಮಾತೆ ಮಹಾದೇವಿ ಅವರು “ಬಸವ ತತ್ವ ದರ್ಶನ”, “ಹೆಪ್ಪಿಟ್ಟ ಹಾಲು” ಸೇರಿದಂತೆ ಹಲವು ಕೃತಿಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ, ಅವರ ಜೀವನದ ಮೌಲ್ಯಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು.

ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಪೂಜ್ಯ ವಿರತೀಶಾನಂದ ಸ್ವಾಮಿಗಳು, ವಿರಕ್ತ ಮಠ ಮನಗೂಳಿ ಇವರು ಮಾತನಾಡಿ, ಬಸವತತ್ವ, ವಚನ ಸಾಹಿತ್ಯ ಮತ್ತು ಲಿಂಗಾಯತ ಧರ್ಮದ ಪ್ರಚಾರಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟದ್ದ ಪೂಜ್ಯ ಡಾ. ಮಾತೆ ಮಹಾದೇವಿ ಅವರ ಲಿಂಗೈಕ್ಯ ಸಂಸ್ಮರಣೆಯನ್ನು ಮಾಡಿಕೊಳ್ಳುತ್ತಾ, ಭಕ್ತಿಪೂರ್ವಕವಾಗಿ ನಮನಗಳನ್ನ ಸಲ್ಲಿಸಬೇಕಾಗುತ್ತದೆ.

ಮಾತಾಜಿಯವರು ಪಂಚ ಪರುಷದ ಜ್ಞಾನ ಹೊಂದಿದ್ದರು. ಬಸವ ಧರ್ಮದ ಪೀಠಾಧ್ಯಕ್ಷೆಯಾಗಿ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಸತತ ಶ್ರಮಿಸಿದರು. ಹೊರ ರಾಜ್ಯ, ರಾಷ್ಟ್ರಗಳಲ್ಲೂ ಬಸವದಳ, ಬಸವ ಮಂಟಪ, ಧರ್ಮ ಪೀಠದ ಅಂಗಸಂಸ್ಥೆಗಳನ್ನು ಸ್ಥಾಪಿಸಿದ್ದು ಸ್ಮರಣೀಯ.

ವಿಶ್ವದ ಶ್ರೇಷ್ಠ ಜಂಗಮರಾಗಿ ಬೆಳೆದ ಚಿತ್ರದುರ್ಗದ ‘ರತ್ನ’ ಮಾತೆ ಮಹಾದೇವಿ ತಾಯಿಯವರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಪರಿಶ್ರಮ ವಹಿಸಿ ಮಹತ್ವದ ಕಾರ್ಯಗಳನ್ನು ಸಾಧಿಸಿದ್ದಾರೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಬಸವನಗೌಡ ಪೋಲಿಸ್ ಪಾಟೀಲ್, ಶರಣ ಸಂಸ್ಕೃತಿಯ ಪುನರುತ್ಥಾನಕರಾದ ಪೂಜ್ಯ ಡಾ. ಮಾತೆ ಮಹಾದೇವಿ ತಾಯಿಯವರು ಈ ಭರತ ಭೂಮಿಯಲ್ಲಿ ಕ್ರಿಯಾತ್ಮಕವಾಗಿ ಬಸವ ಭಕ್ತಿ ಆರಂಭಿಸಿದ್ದು ಪ್ರಥಮದಲ್ಲಿ. ಬಸವ ತತ್ವ ಮರೆತು ನಿದ್ರಿಸುತಿದ್ದ ಸಮಾಜದಲ್ಲಿ, ದಿಟ್ಟತನದಿಂದ ಗುರು ಬಸವ ತತ್ವದ ಬೆಳಕನ್ನು ಜನಮಾನಸಗಳಿಗೆ ಬಿತ್ತರಿಸಿದ ಶ್ರೇಷ್ಠ ವ್ಯಕ್ತಿ ಎಂದರೆ ಡಾ. ಮಾತೆ ಮಹಾದೇವಿ ಅವರು.

ಸಂಸ್ಕೃತಿ ನಾವು ಕಲಿಯುವ ವಿದ್ಯೆಗಿಂತ ಅಧಿಕವೆಂದು ಅಭಿಪ್ರಾಯ ಹೊಂದಿದ್ದ ಮಾತಾಜಿಯವರು, ನಾವು ಮಾಡುವ ಕೆಲಸ ಕಾರ್ಯಗಲ್ಲಿ ನಂಬಿಗೆ ಇಟ್ಟು ಕಾರ್ಯ ನಿರ್ವಹಿಸಬೇಕು ಎಂದರು. ಯಾವುದೇ ಕಾರಣಕ್ಕೂ ದಾಕ್ಷಿಣ್ಯಕ್ಕೆ ಒಳಗಾದವರಲ್ಲ. ಸದಾಕಾಲ ನಿರ್ಭೀತರಾಗಿ ಸತ್ಯವನ್ನೇ ಪ್ರತಿಪಾದಿಸಿಕೊಂಡು ಬಂದ ಹಿರಿಮೆ ಪೂಜ್ಯ ಮಾತಾಜಿಯವರದಾಗಿತ್ತು. ಈ ಸಂದರ್ಭದಲ್ಲಿ ಸಂಸ್ಮರಣೆಯ ಕಾರ್ಯಕ್ರಮವನ್ನ ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸುವುದು ಅವರ ಅನುಯಾಯಿಗಳಾದ ನಮ್ಮೆಲ್ಲರ ಕರ್ತವ್ಯ ಆಗಿದೆ ಎಂದರು.

ನಂತರ ಪೂಜ್ಯ ಮಾತಾಜಿಯ ಕುರಿತು ಶರಣ ಮಹಾದೇವಪ್ಪ ಚನ್ನಳ್ಳಿ, ಶರಣ ಬಸವರಾಜ ಇಂಗಳದಾಳ, ಶರಣಪ್ಪ ಅಸಬಿ, ಅಮರೇಶಪ್ಪ ಬಳ್ಳಾರಿ ಮಾತನಾಡಿದರು.

ಶರಣ ನಾಗನಗೌಡ ಜಾಲಿಹಾಳ, ಶಿವಾನಂದಪ್ಪ ಬೇವೂರು, ಗಿರಿಮಲ್ಲಪ್ಪ ಪರಂಗಿ, ಸಣ್ಣ ಅಮರಪ್ಪ ಅಳ್ಳಳ್ಳಿ, ಸೋಮಲಿಂಗಪ್ಪ ಮಂತ್ರಿ, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶರಣಪ್ಪ ಹೊಸಳ್ಳಿ, ಬಸಣ್ಣ ಹೊಸಳ್ಳಿ, ಪಂಪಣ್ಣ ಹೊಸಳ್ಳಿ, ಪಕೀರಪ್ಪ ಮಂತ್ರಿ, ಶಿವಪುತ್ರಪ್ಪ ಉಚ್ಚಲಕುಂಟಿ, ಹನಮೇಶ ಹೊಸಳ್ಳಿ, ಲಿಂಗನಗೌಡ ದಳಪತಿ, ರಾಷ್ಟ್ರಪತಿ ಹೊಸಳ್ಳಿ, ಸೋಮಣ್ಣ ಮಂತ್ರಿ, ಜಗದೀಶಪ್ಪ ಮೇಟಿ, ಮಲ್ಲಿಕಾರ್ಜುನ ಮಂತ್ರಿ, ಬಸವರಾಜ ಕೋಳೂರು, ಬಸವರಾಜ ಹೊಸಳ್ಳಿ, ದೇವೇಂದ್ರಪ್ಪ ಆವಾರಿ, ಯುವ ಘಟಕದ ಅಧ್ಯಕ್ಷ ಶಿವಕುಮಾರ ಹೊಸಳ್ಳಿ, ಶರಣಪ್ಪ ಮೇಟಿ, ಜಗದೀಶ್ ಮಂತ್ರಿ, ನಿಂಗಪ್ಪ ಮಂತ್ರಿ, ಹನಮಂತಪಜ್ಜ, ಮಲ್ಲಿಕಾರ್ಜುನ ಪ್ರಕಾಶ್ ಮಂತ್ರಿ, ನಿಂಗಪ್ಪ ಗಾಳಿ ಹಾಗು ಅಕ್ಕನಾಗಲಾಂಬಿಕ ಮಹಿಳಾ ಗಣದ ಶರಣಮ್ಮ ಪೋಲಿಸಪಾಟೀಲ, ಯಮನಮ್ಮ ಗೌಡ್ರ, ವನಜಭಾವಿ, ಸಾವಿತ್ರಮ್ಮ ಆವಾರಿ, ಶಂಕ್ರಮ್ಮ ಹೊಸಳ್ಳಿ, ಗುರುಲಿಂಗಮ್ಮ ಮಂತ್ರಿ, ಚನ್ನಮ್ಮ ಮಂತ್ರಿ, ನಿಂಗಮ್ಮ ಕೋಳೂರು, ರೇಣುಕಮ್ಮ ಮಂತ್ರಿ, ನಾಗಮ್ಮ ಜಾಲಿಹಾಳ, ಶರಣಮ್ಮ ಹೊಸಳ್ಳಿ, ದ್ರಾಕ್ಷಾಯಣಮ್ಮ ಹೊಸಳ್ಳಿ, ಬಸಮ್ಮ ಹೂಗಾರ, ಚನ್ನಮ್ಮ ಮಂಜಮ್ಮ ಶರಣಮ್ಮ ಹನಮಮ್ಮ ಇತರರು ಪಾಲ್ಗೊಂಡಿದ್ದರು. ಶರಣಪ್ಪ ಹೊಸಳ್ಳಿ ನಿರೂಪಿಸಿದರು, ರಾಷ್ಟ್ರಪತಿ ಹೊಸಳ್ಳಿ ದಾಸೋಹ ಸೇವೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *